kn_tw/bible/other/stronghold.md

4.1 KiB

ಕೋಟೆ, ದುರ್ಗ, ಕೋಟೆಗಳು,

ಪದದ ಅರ್ಥವಿವರಣೆ:

“ದುರ್ಗ” ಮತ್ತು “ಕೋಟೆ” ಎನ್ನುವ ಪದಗಳೆರಡು ಶತ್ರು ಸೈನಿಕರ ದಾಳಿಗೆ ವಿರುದ್ಧವಾಗಿ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ಸುರಕ್ಷಿತವಾದ ಸ್ಥಳಗಳನ್ನು ಸೂಚಿಸುತ್ತದೆ. “ಕೋಟೆಯ” ಎನ್ನುವ ಪದವು ದಾಳಿಯಿಂದ ಸುರಕ್ಷಿತವಾಗಿರುವುದಕ್ಕೆ ತಂಗುವ ಸ್ಥಳವನ್ನು ಅಥವಾ ಪಟ್ಟಣವನ್ನು ವಿವರಿಸುತ್ತದೆ.

  • ದುರ್ಗಗಳು ಮತ್ತು ಕೋಟೆಗಳು ಸಾಮಾನ್ಯವಾಗಿ ಮನುಷ್ಯರು ನಿರ್ಮಿಸಿದ ಸಂರಕ್ಷಣೆಯ ಗೋಡೆಗಳಾಗಿರುತ್ತವೆ. ಅವರು ಸ್ವಾಭಾವಿಕವಾದ ಸಂರಕ್ಷಿತವಾದ ಅಡೆತಡೆಗಳ ಸ್ಥಳಗಳನ್ನು ಹೊಂದಿರುತ್ತಾರೆ, ಉದಾಹರಣೆಗೆ, ಬಂಡೆಯ ಕಮರಿಗಳು ಅಥವಾ ಎತ್ತರವಾದ ಪರ್ವತಗಳು.
  • ಜನರು ದೊಡ್ಡ ದೊಡ್ಡ ಗೋಡೆಗಳನ್ನು ಅಥವಾ ಶತ್ರುವು ಬಂದು ಕೆಡಿಸುವುದಕ್ಕಾಗದ ಇತರ ಕಟ್ಟಡಗಳನ್ನು ಕಟ್ಟುವುದರ ಮೂಲಕ ಬಲವಾದ ದುರ್ಗಗಳನ್ನು ಕಟ್ಟುತ್ತಾರೆ.
  • “ದುರ್ಗ” ಅಥವಾ “ಕೋಟೆ” ಎನ್ನುವ ಪದಗಳನ್ನು “ಭದ್ರವಾಗಿರುವ ಸುರಕ್ಷಿತ ಸ್ಥಳ” ಅಥವಾ “ಬಲವಾದ ಸಂರಕ್ಷಣೆಯ ಸ್ಥಳ” ಎಂದೂ ಅನುವಾದ ಮಾಡಬಹುದು.
  • “ಕೋಟೆಕೊತ್ತಲುಗಳುಳ್ಳ ಪಟ್ಟಣ” ಎನ್ನುವ ಮಾತನ್ನು “ಸುರಕ್ಷಿತವಾಗಿ ಸಂರಕ್ಷಿಸುವ ಪಟ್ಟಣ” ಅಥವಾ “ಬಲವಾಗಿ ಕಟ್ಟಲ್ಪಟ್ಟಿರುವ ಪಟ್ಟಣ” ಎಂದೂ ಅನುವಾದ ಮಾಡಬಹುದು.
  • “ದುರ್ಗ” ಎನ್ನುವ ಪದಕ್ಕೆ ಇತರ ಅಲಂಕಾರಿಕ ಅರ್ಥವು ಭದ್ರತೆಯಲ್ಲಿ ತಪ್ಪಾಗಿ ಭರವಸೆಯನ್ನಿಟ್ಟುಕೊಂಡಿರುವ ವ್ಯಕ್ತಿಯನ್ನು ಸೂಚಿಸುತ್ತದೆ, ಉದಾಹರಣೆ, ಸುಳ್ಳು ದೇವರು ಅಥವಾ ಯೆಹೋವನಿಗೆ ಬದಲಾಗಿ ಬೇರೆ ಇನ್ನೊಂದನ್ನು ಪೂಜಿಸುವುದು. ಇದನ್ನು “ಸುಳ್ಳು ದುರ್ಗಗಳು” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವಾಗ ಕೋಟೆಯ ಪರಿಕಲ್ಪನೆಗಿಂತ ಹೆಚ್ಚಾಗಿ ಸುರಕ್ಷಿತಯನ್ನು ಸೂಚಿಸುವ “ಆಶ್ರಯ” ಎನ್ನುವ ಪದಕ್ಕಿರುವ ಅರ್ಥಕ್ಕೆ ಬೇರೆಯಾಗಿರುವಂತೆ ನೋಡಿಕೊಳ್ಳಬೇಕು.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಸುಳ್ಳು ದೇವರು, ಆಶ್ರಯ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ದತ್ತಾಂಶ:

  • Strong's: H490, H553, H759, H1001, H1002, H1003, H1219, H1225, H2388, H4013, H4026, H4581, H4526, H4679, H4685, H4686, H4692, H4693, H4694, H4869, H5794, H5797, H5800, H6438, H6696, H6877, H7682, G3794, G3925