kn_tw/bible/other/strife.md

1.9 KiB

ಕಲಹ ವಿವಾದಗಳು, ಜಗಳ, ವಾದ, ಸಂಘರ್ಷ

ಪದದ ಅರ್ಥವಿವರಣೆ:

“ಕಲಹ” ಎನ್ನುವ ಪದವು ಜನರ ಮಧ್ಯೆದಲ್ಲಿ ಉಂಟಾಗುವ ಭೌತಿಕವಾದ ಅಥವಾ ಭಾವೋದ್ರೇಕವಾದ ಸಂಘರ್ಷಗಳನ್ನು ಸೂಚಿಸುತ್ತದೆ.

  • ಕಲಹವನ್ನು ಉಂಟುಮಾಡುವ ವ್ಯಕ್ತಿ ಜನರ ಮಧ್ಯೆದಲ್ಲಿ ಬಲವಾದ ಭಿನ್ನಾಭಿಪ್ರಾಯಗಳನ್ನು ಮತ್ತು ನೋವನ್ನುಂಟು ಮಾಡುವ ಭಾವನೆಗಳನ್ನು ಉಂಟುಮಾಡುತ್ತಾನೆ.
  • ಕೆಲವೊಂದು ಬಾರಿ “ಕಲಹ” ಎನ್ನುವ ಪದದ ಉಪಯೋಗವು ಬಲವಾದ ಭಾವೋದ್ರೇಕಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಕೋಪ ಅಥವಾ ಕಹಿತನ.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅಸಮ್ಮತಿ” ಅಥವಾ “ವಿವಾದ” ಅಥವಾ “ಸಂಘರ್ಷ” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕೋಪ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1777, H1779, H4066, H4090, H4683, H4808, H7379, H7701, G485, G2052, G2054, G3055, G3163, G5379