kn_tw/bible/other/storehouse.md

24 lines
3.1 KiB
Markdown

# ಕಣಜ, ಕಣಜಗಳು
## ಪದದ ಅರ್ಥವಿವರಣೆ:
“ಕಣಜ” ಎನ್ನುವುದು ಹೆಚ್ಚಿನ ಕಾಲದವರೆಗೂ ವಸ್ತುಗಳನ್ನು ಅಥವಾ ಆಹಾರವನ್ನು ಸಂಗ್ರಹಿಸಿ ಇಡುವುದಕ್ಕೆ ಉಪಯೋಗಿಸಲ್ಪಡುವ ದೊಡ್ಡ ಕಟ್ಟಡವಾಗಿರುತ್ತದೆ.
* ಸತ್ಯವೇದದಲ್ಲಿ “ಕಣಜ” ಎನ್ನುವ ಪದವನ್ನು ಜನರು ತಮಗೆ ಬರಗಾಲ ಬರುವಾಗ ಉಪಯೋಗಿಸಿಕೊಳ್ಳುವುದಕ್ಕೆ ಬೇಕಾದ ಆಹಾರವನ್ನು ಮತ್ತು ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಉಪಯೋಗಿಸಲ್ಪಟ್ಟಿದ್ದಾಗಿರುತ್ತದೆ.
* ದೇವರು ತನ್ನ ಜನರಿಗೆ ಕೊಡುವ ಎಲ್ಲಾ ಒಳ್ಳೆಯ ವಿಷಯಗಳನ್ನು ಸೂಚಿಸುವುದಕ್ಕೆ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
* ದೇವಾಲಯದ ಕಣಜಗಳಲ್ಲಿ ಯೆಹೋವನಿಗೆ ಪ್ರತಿಷ್ಠಾಪನೆ ಮಾಡಿದ ಬೆಲೆಯುಳ್ಳ ಬೆಳ್ಳಿ ಬಂಗಾರಗಳನ್ನು ಇಡುತ್ತಿದ್ದರು. ಈ ವಸ್ತುಗಳಲ್ಲಿ ಕೆಲವೊಂದು ದೇವಾಲಯವನ್ನು ನಿರ್ವಹಿಸಲು ಮತ್ತು ದುರಸ್ತಿ ಮಾಡುವದಕ್ಕೆ ಉಪಯೋಗಿಸುವವುಗಳು ಅಲ್ಲಿಯೇ ಇರುತ್ತಿದ್ದವು.
* “ಕಣಜ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಧಾನ್ಯಗಳನ್ನು ಸಂಗ್ರಹಿಸಿಡಲು ನಿರ್ಮಿಸಿಕೊಂಡಿರುವ ಕಟ್ಟಡ” ಅಥವಾ “ಆಹಾರವನ್ನು ಇಡುವ ಸ್ಥಳ” ಅಥವಾ “ಬೆಲೆಯುಳ್ಳ ವಸ್ತುಗಳು ಸುರಕ್ಷಿತವಾಗಿರುವುದಕ್ಕೆ ಕಟ್ಟಿಕೊಂಡಿರುವ ಕೊಠಡಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ಪ್ರತಿಷ್ಠಾಪಿಸು](../kt/consecrate.md), [ಅರ್ಪಿಸು](../other/dedicate.md), [ಬರಗಾಲ](../other/famine.md), [ಬಂಗಾರ](../other/gold.md), [ಧಾನ್ಯ](../other/grain.md), [ಬೆಳ್ಳಿ](../other/silver.md), [ದೇವಾಲಯ](../kt/temple.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೂರ್ವ.16:2-3](rc://*/tn/help/2ch/16/02)
* [ಲೂಕ.03:17](rc://*/tn/help/luk/03/17)
* [ಮತ್ತಾಯ.03:10-12](rc://*/tn/help/mat/03/10)
* [ಕೀರ್ತನೆ.033:7-9](rc://*/tn/help/psa/033/007)
## ಪದ ಡೇಟಾ:
* Strong's: H214, H618, H624, H4035, H4200, H4543, G596