kn_tw/bible/other/sinoffering.md

26 lines
2.7 KiB
Markdown

# ಪಾಪ ಪರಿಹಾರಿಕ ಯಜ್ಞ, ಪಾಪ ಪರಿಹಾರಿಕ ಯಜ್ಞಗಳು
## ಪದದ ಅರ್ಥವಿವರಣೆ:
“ಪಾಪ ಪರಿಹಾರಿಕ ಯಜ್ಞ” ಎನ್ನುವುದು ಇಸ್ರಾಯೇಲ್ಯರು ಅರ್ಪಿಸಬೇಕೆಂದು ದೇವರು ಬಯಸಿದ ಅನೇಕ ಯಜ್ಞಗಳಲ್ಲಿ ಇದೂ ಒಂದಾಗಿರುತ್ತದೆ.
* ಈ ಯಜ್ಞದಲ್ಲಿ ಎತ್ತನ್ನು ಬಲಿ ಕೊಟ್ಟು, ಅದರ ರಕ್ತವನ್ನು ಮತ್ತು ಕೊಬ್ಬನ್ನು ಯಜ್ಞವೇದಿಯ ಮೇಲಿಟ್ಟು ಸುಡುತ್ತಾರೆ ಮತ್ತು ಉಳಿದ ಪ್ರಾಣಿಯ ದೇಹವನ್ನು ತೆಗೆದುಕೊಂಡು, ಅದನ್ನು ಇಸ್ರಾಯೇಲ್ಯರ ಗುಡಾರಗಳ ಆಚೆ ನೆಲದ ಮೇಲೆ ಸುಡುತ್ತಾರೆ.
* ಈ ಪ್ರಾಣಿಯ ಯಜ್ಞದಲ್ಲಿ ಇದನ್ನು ಸಂಪೂರ್ಣವಾಗಿ ಸುಡುವುದೆನ್ನುವುದು ದೇವರು ಎಷ್ಟು ಪರಿಶುದ್ಧನೋ ಮತ್ತು ಆ ಪಾಪವು ಎಷ್ಟು ಭಯಂಕರವಾದದ್ದೋ ಎಂದು ತೋರಿಸುತ್ತದೆ.
* ಪಾಪವನ್ನು ತೊಳೆಯುವ ಕ್ರಮದಲ್ಲಿ ಮಾಡಲ್ಪಟ್ಟಿರುವ ಪಾಪಕ್ಕೆ ಬೆಲೆಯನ್ನು ಸಲ್ಲಿಸುವುದಕ್ಕೆ ರಕ್ತವು ಸುರಿಸಲ್ಪಡಬೇಕೆಂದು ಸತ್ಯವೇದವು ಬೋಧಿಸುತ್ತದೆ.
* ಪ್ರಾಣಿಯ ಯಜ್ಞಗಳು ಪಾಪಕ್ಕೆ ಕ್ಷಮಾಪಣೆಯನ್ನು ಶಾಶ್ವತವಾಗಿ ತರುವುದಿಲ್ಲ.
* ಶಾಶ್ವತವಾಗಿ ಪಾಪಗಳಿಗೆ ಕ್ರಯಧನವನ್ನು ಯೇಸುವು ಶಿಲುಬೆಯ ಮರಣದಿಂದ ಸಲ್ಲಿಸಿದ್ದಾರೆ. ಆತನು ಪಾಪ ಪರಿಹಾರ ಮಾಡುವ ಯಜ್ಞವಾಗಿದ್ದಾನೆ.
(ಈ ಪದಗಳನ್ನು ಸಹ ನೋಡಿರಿ : [ಯಜ್ಞವೇದಿ](../kt/altar.md), [ಹಸು](../other/cow.md), [ಕ್ಷಮಿಸು](../kt/forgive.md), [ಹೋಮ](../other/sacrifice.md), [ಪಾಪ](../kt/sin.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೂರ್ವ.29:20-21](rc://*/tn/help/2ch/29/20)
* [ವಿಮೋ.29:35-37](rc://*/tn/help/exo/29/35)
* [ಯೆಹೆ.44:25-27](rc://*/tn/help/ezk/44/25)
* [ಯಾಜಕ.05:11](rc://*/tn/help/lev/05/11)
* [ಅರಣ್ಯ.07:15-17](rc://*/tn/help/num/07/15)
## ಪದ ಡೇಟಾ:
* Strong's: H2401, H2402, H2398, H2403