kn_tw/bible/other/scroll.md

24 lines
2.5 KiB
Markdown

# ಸುರುಳಿ, ಸುರುಳಿಗಳು
## ಪದದ ಅರ್ಥವಿವರಣೆ:
ಪುರಾತನ ಕಾಲಗಳಲ್ಲಿ ಸುರುಳಿ ಎನ್ನುವುದು ಚರ್ಮದಿಂದ ಅಥವಾ ಪಾಪಿರಸ್ (ಮರದ ತೊಗಟೆ) ಎನ್ನುವುದರಿಂದ ತಯಾರಿಸಲ್ಪಟ್ಟ ಉದ್ದವಾದ, ಸುತ್ತಿರುವ ಹಾಳೆಯಾಗಿರುತ್ತದೆ.
* ಸುರುಳಿಯ ಮೇಲೆ ಬರೆದನಂತರ ಅಥವಾ ಸುರುಳಿಯಲ್ಲಿರುವುದನ್ನು ಓದಿದನಂತರ, ಈ ಸುರುಳಿಯ ಎರಡು ಬದಿಗೆ ಕಟ್ಟಿರುವ ಕಟ್ಟಿಗೆಗಳನ್ನು ಉಪಯೋಗಿಸುವುದರಿಂದ ಜನರು ಸುತ್ತಿರುತ್ತಾರೆ.
* ಸುರುಳಿಗಳು ಲೇಖನಗಳಿಗೆ ಮತ್ತು ಕಾನೂನುಬದ್ಧವಾದ ಪತ್ರಗಳಿಗೆ ಉಪಯೋಗಿಸುತ್ತಿದ್ದರು.
* ಕೆಲವೊಂದುಬಾರಿ ಸುರುಳಿಗಳಲ್ಲಿ ಸಂದೇಶಗಳನ್ನು ಬರೆದು, ಮೇಣದಿಂದ ಮುದ್ರಿಸಿ ಅವುಗಳನ್ನು ಸಂದೇಶವಾಹಕರಿಂದ ಕಳುಹಿಸುತ್ತಿದ್ದರು. ಸುರುಳಿಯನ್ನು ಪಡೆದುಕೊಳ್ಳುತ್ತಿರುವಾಗ ಮೇಣವು ಇನ್ನೂ ಇರುತ್ತಿದ್ದರೆ, ಆ ಸುರುಳಿಯನ್ನು ತೆಗೆದುಕೊಳ್ಳುವವನು ಅದನ್ನು ಯಾರು ತೆರೆದಿಲ್ಲವೆಂದು, ಆ ಸುರುಳಿಯನ್ನು ಓದಲಿಲ್ಲವೆಂದು ತಿಳಿದುಕೊಳ್ಳುವನು.
* ಈ ಸುರುಳಿಗಳಲ್ಲಿ ಇಬ್ರಿ ಲೇಖನಗಳನ್ನು ಒಳಗೊಂಡಿರುತ್ತವೆ, ಇವುಗಳನ್ನು ಸಮಾಜ ಮಂದಿರಗಳಲ್ಲಿ ಗಟ್ಟಿಯಾಗಿ ಓದುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : [ಮುದ್ರೆ](../other/seal.md), [ಸಮಾಜ ಮಂದಿರ](../kt/synagogue.md), [ದೇವರ ವಾಕ್ಯ](../kt/wordofgod.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆರೆ.29:1-3](rc://*/tn/help/jer/29/01)
* [ಲೂಕ.04:16-17](rc://*/tn/help/luk/04/16)
* [ಅರಣ್ಯ.21:14-15](rc://*/tn/help/num/21/14)
* [ಪ್ರಕ.05:1-2](rc://*/tn/help/rev/05/01)
## ಪದ ಡೇಟಾ:
* Strong's: H4039, H4040, H5612, G974, G975