kn_tw/bible/other/prosper.md

5.0 KiB

ಅಭಿವೃದ್ಧಿ ಹೊಂದು, ಅಭಿವೃದ್ಧಿ ಹೊಂದಿದೆ, ಅಭಿವೃದ್ಧಿಯಾಗುವುದು

ಪದದ ಅರ್ಥವಿವರಣೆ:

“ಅಭಿವೃದ್ಧಿ ಹೊಂದು” ಎನ್ನುವ ಪದವು ಚೆನ್ನಾಗಿ ಜೀವಿಸುವುದನ್ನು ಮತ್ತು ಭೌತಿಕವಾಗಿ ಅಥವಾ ಆತ್ಮೀಯಕವಾಗಿ ಅಭಿವೃದ್ಧಿಯಾಗುತ್ತಿರುವುದನ್ನು ಸಾಧಾರಣವಾಗಿ ಸೂಚಿಸುತ್ತದೆ. ಜನರು ಅಥವಾ ಒಂದು ದೇಶವು “ಸಮೃದ್ಧಿ” ಆಗುತ್ತಿರುವಾಗ, ಅವರು ಶ್ರೀಮಂತರೆಂದು ಮತ್ತು ಅವರೆಲ್ಲರು ಯಶಸ್ವಿಯಾಗಿರಬೇಕೆಂದು ಅದರ ಅರ್ಥವಾಗಿರುತ್ತದೆ. ಅವರು “ಅಭಿವೃದ್ದಿ”ಯನ್ನು ಅನುಭವಿಸುತ್ತಿದ್ದಾರೆ ಎಂದರ್ಥವಾಗಿರುತ್ತದೆ.

  • “ಸಮೃದ್ಧಿ” ಎನ್ನುವ ಪದವು ಅನೇಕ ಬಾರಿ ಆಸ್ತಿಪಾಸ್ತಿಗಳನ್ನು ಮತ್ತು ಹಣವನ್ನು ಗಳಿಸುವುದರಲ್ಲಿ ಯಶಸ್ವಿಯನ್ನು ಅಥವಾ ಜನರು ಚೆನ್ನಾಗಿ ಜೀವಿಸುವುದಕ್ಕೆ ಅವರಿಗೆ ಬೇಕಾದ ಪ್ರತಿಯೊಂದನ್ನು ಒದಗಿಸಿಕೊಡುವುದರಲ್ಲಿ ಯಶಸ್ವಿಯನ್ನು ಸೂಚಿಸುತ್ತದೆ.
  • ಸತ್ಯವೇದದಲ್ಲಿ “ಸಮೃದ್ಧಿ” ಎನ್ನುವ ಪದವು ಒಳ್ಳೆಯ ಆರೋಗ್ಯವನ್ನು ಮತ್ತು ಮಕ್ಕಳೊಂದಿಗೆ ಆಶೀರ್ವಾದ ಹೊಂದುವುದನ್ನು ಕೂಡ ಸೂಚಿಸುತ್ತದೆ.
  • “ಸಮೃದ್ಧಿ” ಹೊಂದಿದ ಪಟ್ಟಣ ಅಥವಾ ದೇಶ ಎಂದರೆ ಅನೇಕ ಜನರನ್ನು ಹೊಂದಿದ, ಒಳ್ಳೇಯ ಆಹಾರ ಉತ್ಪಾದನೆ ಮಾಡುವ, ಮತ್ತು ಹಣವನ್ನು ಹೆಚ್ಚಾಗಿ ಗಳಿಸುವ ವ್ಯಾಪಾರವನ್ನು ಹೊಂದಿರುವ ಪಟ್ಟಣ ಅಥವಾ ದೇಶ ಎಂದರ್ಥ.
  • ಒಬ್ಬ ವ್ಯಕ್ತಿ ದೇವರ ಬೋಧನೆಗಳಿಗೆ ವಿಧೇಯತೆಯನ್ನು ತೋರಿಸಿದಾಗ ಆ ವ್ಯಕ್ತಿ ಆತ್ಮೀಯಕವಾದ ಸಮೃದ್ಧಿಯನ್ನು ಹೊಂದುವನೆಂದು ಸತ್ಯವೇದವು ಬೋಧನೆ ಮಾಡುತ್ತಿದೆ. ಅವನು ಸಂತೋಷ ಮತ್ತು ಸಮಾಧಾನಗಳ ಆಶೀರ್ವಾದಗಳನ್ನು ಅನುಭವಿಸುವನು. ದೇವರು ಯಾವಾಗಲೂ ಜನರಿಗೆ ಸಂಪತ್ತನ್ನೇ ಕೊಡುವುದಿಲ್ಲ, ಆದರೆ ಜನರು ದೇವರ ಮಾರ್ಗಗಳನ್ನು ಅನುಸರಿಸಿ ನಡೆದುಕೊಂಡಾಗ ಆತನು ಯಾವಾಗಲೂ ಅವರನ್ನು ಅತ್ಮೀಯಕವಾಗಿ ಸಮೃದ್ಧಿಗೊಳಿಸುವನು.
  • ಸಂದರ್ಭಾನುಸಾರವಾಗಿ, “ಅಭಿವೃದ್ಧಿ ಹೊಂದು” ಎನ್ನುವ ಪದವನ್ನು “ಯಶಸ್ವಿಯಾದ ಆತ್ಮೀಯತೆ” ಅಥವಾ “ದೇವರಿಂದ ಆಶೀರ್ವಾದ ಹೊಂದುವುದು” ಅಥವಾ “ಒಳ್ಳೇಯ ಕಾರ್ಯಗಳನ್ನು ಅನುಭವಿಸುವುದು” ಅಥವಾ “ಚೆನ್ನಾಗಿ ಜೀವಿಸುವುದು” ಎಂದೂ ಅನುವಾದ ಮಾಡಬಹುದು.
  • “ಸಮೃದ್ಧಿ” ಎನ್ನುವ ಪದವನ್ನು “ಯಶಸ್ವಿ” ಅಥವಾ “ಸಂಪತ್ತಿನ” ಅಥವಾ “ಆತ್ಮೀಯ ಫಲ” ಎಂದೂ ಅನುವಾದ ಮಾಡಬಹುದು.
  • “ಅಭಿವೃದ್ಧಿ” ಎನ್ನುವ ಪದವನ್ನು “ಚೆನ್ನಾಗಿರುವುದು” ಅಥವಾ “ಸಂಪತ್ತು” ಅಥವಾ “ಯಶಸ್ವಿ” ಅಥವಾ “ಹೆಚ್ಚಾದ ಆಶೀರ್ವಾದಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಶೀರ್ವದಿಸು, ಫಲ, ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1129, H1767, H1878, H1879, H2428, H2896, H2898, H3027, H3190, H3444, H3498, H3787, H4195, H5381, H6500, H6509, H6555, H6743, H6744, H7230, H7487, H7919, H7951, H7961, H7963, H7965,