kn_tw/bible/other/profit.md

42 lines
5.7 KiB
Markdown

# ಲಾಭ, ಪ್ರಯೋಜನಕರ, ಅಪ್ರಯೋಜನಕರ
## ಪದದ ಅರ್ಥವಿವರಣೆ:
ಸಾಧಾರಣವಾಗಿ “ಪ್ರಯೋಜನ” ಮತ್ತು “ಪ್ರಯೋಜನಕರ” ಎನ್ನುವ ಪದಗಳು ಕೆಲವೊಂದು ನಿರ್ದಿಷ್ಟ ಕ್ರಿಯೆಗಳು ಮಾಡುವುದರ ಮೂಲಕ ಯಾವುದಾದರೊಂದರ ಒಳ್ಳೆಯದನ್ನು ಸಂಪಾದಿಸಿಕೊಳ್ಳುವುದನ್ನು ಸೂಚಿಸುತ್ತದೆ.
ಇತರ ಜನರಿಗಾಗಿ ಒಳ್ಳೇಯ ಕಾರ್ಯಗಳ ಕುರಿತಾಗಿ ಸಹಾಯವಾಗುವುದಾದರೆ ಅಥವಾ ಅವರಿಗೆ ಒಳ್ಳೇಯ ಕೆಲಸಗಳು ನಡೆದರೆ ಒಬ್ಬರಿಗೆ “ಪ್ರಯೋಜನಕರವಾದದ್ದು” ನಡೆದಿದೆಯೆಂದರ್ಥ.
* ಹೆಚ್ಚಿನ ವಿಶೇಷವಾಗಿ “ಲಾಭ” ಎನ್ನುವ ಪದವು ಅನೇಕಬಾರಿ ವ್ಯಾಪಾರ ಮಾಡುವುದರ ಮೂಲಕ ಪಡೆದಿರುವ ಮೊತ್ತದ ಹಣವನ್ನು ಸೂಚಿಸುತ್ತದೆ. ಬಂಡವಾಳ ಹಾಕುವುದಕ್ಕಿಂತ ಹೆಚ್ಚಾದ ಹಣವನ್ನು ಗಳಿಸಿದರೆ ಆ ವ್ಯಾಪಾರವು “ಪ್ರಯೋಜನಕರವಾಗಿರುತ್ತದೆ”.
* ಜನರಿಗೆ ಒಳ್ಳೇಯ ಕಾರ್ಯಗಳನ್ನು ಮಾಡಿದರೆ ಕ್ರಿಯೆಗಳು ಪ್ರಯೋಜನಕರವಾಗಿರುತ್ತವೆ.
* ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವೂ ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ “ಪ್ರಯೋಜನಕರವಾಗಿರುತ್ತವೆ” ಎಂದು 2 ತಿಮೊಥೆ.3:16 ವಚನವು ಹೇಳುತ್ತಿದೆ. ದೇವರ ಚಿತ್ತಾನುಸಾರವಾಗಿ ಜೀವಿಸುವುದಕ್ಕೆ ಜನರಿಗೆ ಬೋಧನೆ ಮಾಡಲು ಸತ್ಯವೇದದ ಬೋಧನೆಗಳು ಸಹಾಯಕರವಾಗಿರುತ್ತವೆ ಮತ್ತು ಉಪಯುಕ್ತವಾಗಿರುತ್ತವೆ ಎಂದು ಈ ಮಾತಿಗೆ ಅರ್ಥವಾಗಿರುತ್ತದೆ.
“ಅಪ್ರಯೋಜನಕರ” ಎನ್ನುವ ಪದಕ್ಕೆ ಉಪಯುಕ್ತವಾಗಿರುವುದಿಲ್ಲವೆಂದರ್ಥ.
* ಯಾವುದಾದರೊಂದನ್ನು ಪಡೆದುಕೊಳ್ಳುವುದಕ್ಕೆ ಒಬ್ಬ ವ್ಯಕ್ತಿಗೆ ಸಹಾಯಕವಾಗಿರುವುದಿಲ್ಲ ಅಥವಾ ಯಾವ ಲಾಭವೂ ಇರುವುದಿಲ್ಲ ಎಂದು ಈ ಮಾತಿಗೆ ಅಕ್ಷರಾರ್ಥವಾಗಿರುತ್ತದೆ.
* ಅಪ್ರಯೋಜನಕರವಾದದ್ದು ಯಾವುದೇಯಾಗಿರಲಿ ಅದು ಮಾಡುವುದಕ್ಕೆ ಯೋಗ್ಯವಾಗಿರುವುದಿಲ್ಲ, ಯಾಕಂದರೆ ಅದು ಯಾವ ಪ್ರಯೋಜನವನ್ನೂ ಕೊಡುವುದಿಲ್ಲ.
* ಈ ಪದವನ್ನು “ಉಪಯೋಗಕರವಲ್ಲದ್ದು” ಅಥವಾ “ಯೋಗ್ಯವಲ್ಲ” ಅಥವಾ “ಉಪಯೋಗಕರವಲ್ಲ” ಅಥವಾ “ಅಯೋಗ್ಯಕರ” ಅಥವಾ “ಪ್ರಯೋಜನವಿಲ್ಲದ್ದು” ಅಥವಾ “ಪ್ರಯೋಜನ ಕೊಡದಿರುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಯೋಗ್ಯ](../kt/worthy.md))
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “ಲಾಭ” ಎನ್ನುವ ಪದವನ್ನು “ಉಪಯುಕ್ತ” ಅಥವಾ “ಸಹಾಯ” ಅಥವಾ “ಪಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
* “ಪ್ರಯೋಜನಕರ” ಎನ್ನುವ ಪದವನ್ನು “ಉಪಯೋಗಕರ” ಅಥವಾ “ಪ್ರಯೋಜನಕರ” ಅಥವಾ “ಸಹಾಯಕರ” ಎಂದೂ ಅನುವಾದ ಮಾಡಬಹುದು.
* ಯಾವುದಾದರೊಂದರಿಂದ “ಲಾಭ ಹೊಂದು” ಎನ್ನುವ ಮಾತನ್ನು “ಲಾಭ ಹೊಂದು” ಅಥವಾ “ಹಣವನ್ನು ಗಳಿಸು” ಅಥವಾ “ಸಹಾಯವನ್ನು ಪಡೆದುಕೋ” ಎಂದೂ ಅನುವಾದ ಮಾಡಬಹುದು.
* ವ್ಯಾಪಾರ ಸಂದರ್ಭಗಳಲ್ಲಿ “ಲಾಭ” ಎನ್ನುವ ಪದವನ್ನು “ಹಣವನ್ನು ಗಳಿಸಿದೆ” ಅಥವಾ “ಉಳಿತಾಯ ಹಣ” ಅಥವಾ “ಹೆಚ್ಚುವರಿ ಹಣ” ಎಂದು ಅರ್ಥಬರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು:
* [ಯೋಬ.15:03](rc://*/tn/help/job/15/03)
* [ಜ್ಞಾನೋ.10:16](rc://*/tn/help/pro/10/16)
* [ಯೆರೆ.02:08](rc://*/tn/help/jer/02/08)
* [ಯೆಹೆ.18:12-13](rc://*/tn/help/ezk/18/12)
* [ಯೋಹಾನ.06:63](rc://*/tn/help/jhn/06/63)
* [ಮಾರ್ಕ.08:36](rc://*/tn/help/mrk/08/36)
* [ಮತ್ತಾಯ.16:26](rc://*/tn/help/mat/16/26)
* [2 ಪೇತ್ರ.02:1-3](rc://*/tn/help/2pe/02/01)
## ಪದ ಡೇಟಾ:
* Strong's: H1215, H3148, H3276, H3504, H4195, H4768, H5532, H7737, H7939, G147, G255, G512, G888, G889, G890, G1281, G2585, G2770, G2771, G3408, G4297, G4298, G4851, G5539, G5622, G5623, G5624