kn_tw/bible/other/profane.md

25 lines
2.8 KiB
Markdown

# ಅಪವಿತ್ರ, ಅಪವಿತ್ರವಾಗಿದೆ, ಅಪವಿತ್ರಗೊಳಿಸುವುದು
## ಪದದ ಅರ್ಥವಿವರಣೆ:
ಯಾವುದಾದರೊಂದನ್ನು ಅಪವಿತ್ರಗೊಳಿಸುವುದು ಎಂದರೆ ಪವಿತ್ರವಾದದ್ದನ್ನು ಅಗೌರವಪಡಿಸುವ, ಮಾಲಿನ್ಯಗೊಳಿಸುವ ಅಥವಾ ಅಶುದ್ಧಗೊಳಿಸುವ ವಿಧಾನದಲ್ಲಿ ನಡೆದುಕೊಳ್ಳುವುದು ಎಂದರ್ಥ.
* ಅಪವಿತ್ರವಾದ ವ್ಯಕ್ತಿ ದೇವರನ್ನು ಅಗೌರವಪಡಿಸುವ ಅಥವಾ ಅಪವಿತ್ರಗೊಳಿಸುವ ವಿಧಾನದಲ್ಲಿ ನಡೆದುಕೊಳ್ಳುವ ವ್ಯಕ್ತಿಯಾಗಿರುತ್ತಾನೆ.
* “ಅಪವಿತ್ರ” ಎನ್ನುವ ಕ್ರಿಯಾಪದವನ್ನು “ಅಪವಿತ್ರವಾಗಿ ನಡೆದುಕೋ” ಅಥವಾ “ಯಾರಾದರೊಬ್ಬರ ವಿಷಯದಲ್ಲಿ ಅಗೌರವದಿಂದ ನಡೆದುಕೋ” ಅಥವಾ “ಘನಹೀನ ಮಾಡು” ಎಂದೂ ಅನುವಾದ ಮಾಡಬಹುದು.
* ಇಸ್ರಾಯೇಲ್ಯರು ತಮ್ಮಷ್ಟಕ್ಕೆ ತಾವು ವಿಗ್ರಹಗಳೊಂದಿಗೆ “ಅಪವಿತ್ರಗೊಳಿಸಿಕೊಂಡರು” ಎಂದು ದೇವರು ಅವರೊಂದಿಗೆ ಹೇಳಿದನು, ಜನರು ಈ ಪಾಪ ಮಾಡುವುದರಿಂದ ತಮ್ಮನ್ನು ತಾವು “ಅಶುದ್ಧಗೊಳಿಸಿಕೊಂಡರು” ಅಥವಾ “ಅಗೌರವಪಡಿಸಿಕೊಂಡರು” ಎಂದು ಇದರ ಅರ್ಥವಾಗಿರುತ್ತದೆ. ಅವರು ದೇವರನ್ನೂ ಅಗೌರವಪಡಿಸಿದರು.
* ಸಂದರ್ಭಾನುಗುಣವಾಗಿ, “ಅಪವಿತ್ರ” ಎನ್ನುವ ವಿಶೇಷಣ ಪದವನ್ನು “ಅಗೌರವಪಡಿಸು” ಅಥವಾ “ಅದೈವಿಕ” ಅಥವಾ “ಅಪರಿಶುದ್ಧ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಅಶುದ್ಧಗೊಳಿಸು](../other/defile.md), [ಪರಿಶುದ್ಧ](../kt/holy.md), [ಶುದ್ಧ](../kt/clean.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ತಿಮೊಥೆ.02:16-18](rc://*/tn/help/2ti/02/16)
* [ಯೆಹೆ.20:8-9](rc://*/tn/help/ezk/20/08)
* [ಮಲಾಕಿ.01:10-12](rc://*/tn/help/mal/01/10)
* [ಮತ್ತಾಯ.12:5-6](rc://*/tn/help/mat/12/05)
* [ಅರಣ್ಯ.18:30-32](rc://*/tn/help/num/18/30)
## ಪದ ಡೇಟಾ:
* Strong's: H2455, H2490, H2491, H2610, H2613, H5234, H8610, G952, G953