2.8 KiB
2.8 KiB
ಅಪವಿತ್ರ, ಅಪವಿತ್ರವಾಗಿದೆ, ಅಪವಿತ್ರಗೊಳಿಸುವುದು
ಪದದ ಅರ್ಥವಿವರಣೆ:
ಯಾವುದಾದರೊಂದನ್ನು ಅಪವಿತ್ರಗೊಳಿಸುವುದು ಎಂದರೆ ಪವಿತ್ರವಾದದ್ದನ್ನು ಅಗೌರವಪಡಿಸುವ, ಮಾಲಿನ್ಯಗೊಳಿಸುವ ಅಥವಾ ಅಶುದ್ಧಗೊಳಿಸುವ ವಿಧಾನದಲ್ಲಿ ನಡೆದುಕೊಳ್ಳುವುದು ಎಂದರ್ಥ.
- ಅಪವಿತ್ರವಾದ ವ್ಯಕ್ತಿ ದೇವರನ್ನು ಅಗೌರವಪಡಿಸುವ ಅಥವಾ ಅಪವಿತ್ರಗೊಳಿಸುವ ವಿಧಾನದಲ್ಲಿ ನಡೆದುಕೊಳ್ಳುವ ವ್ಯಕ್ತಿಯಾಗಿರುತ್ತಾನೆ.
- “ಅಪವಿತ್ರ” ಎನ್ನುವ ಕ್ರಿಯಾಪದವನ್ನು “ಅಪವಿತ್ರವಾಗಿ ನಡೆದುಕೋ” ಅಥವಾ “ಯಾರಾದರೊಬ್ಬರ ವಿಷಯದಲ್ಲಿ ಅಗೌರವದಿಂದ ನಡೆದುಕೋ” ಅಥವಾ “ಘನಹೀನ ಮಾಡು” ಎಂದೂ ಅನುವಾದ ಮಾಡಬಹುದು.
- ಇಸ್ರಾಯೇಲ್ಯರು ತಮ್ಮಷ್ಟಕ್ಕೆ ತಾವು ವಿಗ್ರಹಗಳೊಂದಿಗೆ “ಅಪವಿತ್ರಗೊಳಿಸಿಕೊಂಡರು” ಎಂದು ದೇವರು ಅವರೊಂದಿಗೆ ಹೇಳಿದನು, ಜನರು ಈ ಪಾಪ ಮಾಡುವುದರಿಂದ ತಮ್ಮನ್ನು ತಾವು “ಅಶುದ್ಧಗೊಳಿಸಿಕೊಂಡರು” ಅಥವಾ “ಅಗೌರವಪಡಿಸಿಕೊಂಡರು” ಎಂದು ಇದರ ಅರ್ಥವಾಗಿರುತ್ತದೆ. ಅವರು ದೇವರನ್ನೂ ಅಗೌರವಪಡಿಸಿದರು.
- ಸಂದರ್ಭಾನುಗುಣವಾಗಿ, “ಅಪವಿತ್ರ” ಎನ್ನುವ ವಿಶೇಷಣ ಪದವನ್ನು “ಅಗೌರವಪಡಿಸು” ಅಥವಾ “ಅದೈವಿಕ” ಅಥವಾ “ಅಪರಿಶುದ್ಧ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಅಶುದ್ಧಗೊಳಿಸು, ಪರಿಶುದ್ಧ, ಶುದ್ಧ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2455, H2490, H2491, H2610, H2613, H5234, H8610, G952, G953