kn_tw/bible/other/ordinance.md

23 lines
2.3 KiB
Markdown

# ಆಜ್ಞಾವಿಧಿ, ನಿಯಮಗಳು, ಅವಶ್ಯಕತೆಗಳು, ಕಠಿಣ ಕಾನೂನು, ಪದ್ಧತಿಗಳು
## ಪದದ ಅರ್ಥವಿವರಣೆ:
ಆಜ್ಞಾವಿಧಿ ಎನ್ನುವುದು ಅನುಸರಿಸುವುದಕ್ಕೆ ಜನರಿಗೆ ಕೊಡುವ ಸೂಚನೆಗಳು ಅಥವಾ ನಿಯಮಗಳ ಕಾನೂನು, ಅಥವಾ ಸಾರ್ವಜನಿಕ ಕಾಯಿದೆಯಾಗಿರುತ್ತದೆ. ಈ ಪದವು “ಅಭಿಷೇಕ” ಅಥವಾ “ನೇಮಿಸು” ಎನ್ನುವ ಪದಕ್ಕೆ ತುಂಬಾ ಹತ್ತಿರವಾಗಿರುತ್ತದೆ.
* ಕೆಲವೊಂದುಬಾರಿ ಆಜ್ಞಾವಿಧಿ ಎನ್ನುವುದು ಅನೇಕ ವರ್ಷಗಳು ಅಭ್ಯಾಸ ಮಾಡುವುದರ ಮೂಲಕ ಸ್ಥಿರವಾಗಿರುವ ಒಂದು ಪದ್ಧತಿಯಾಗಿರುತ್ತದೆ.
* ಸತ್ಯವೇದದಲ್ಲಿ ಆಜ್ಞಾವಿಧಿ ಎನ್ನುವುದು ಇಸ್ರಾಯೇಲ್ಯರು ಮಾಡಬೇಕೆಂದು ದೇವರು ಆಜ್ಞಾಪಿಸಿದ ವಿಷಯಗಳಾಗಿರುತ್ತವೆ. ಕೆಲವೊಂದುಬಾರಿ ಆತನು ಇದನ್ನು ಶಾಶ್ವತವಾಗಿ ಯಾವಾಗಲೂ ಮಾಡಬೇಕೆಂದು ಆಜ್ಞಾಪಿಸಿರುತ್ತಾನೆ.
* “ಆಜ್ಞಾವಿಧಿ” ಎನ್ನುವ ಪದವನ್ನು “ಬಹಿರಂಗ ಶಾಸನ” ಅಥವಾ “ಕಾಯಿದೆ” ಅಥವಾ “ಕಾನೂನು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆಜ್ಞೆ](../kt/command.md), [ಕಾಯಿದೆ](../other/decree.md), [ಕಾನೂನು](../kt/lawofmoses.md), [ಅಭಿಷೇಕಿಸು](../other/ordain.md), [ಶಾಸನ](../other/statute.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಧರ್ಮೋ.04:13-14](rc://*/tn/help/deu/04/13)
* [ವಿಮೋ.27:20-21](rc://*/tn/help/exo/27/20)
* [ಯಾಜಕ.08:31-33](rc://*/tn/help/lev/08/31)
* [ಮಲಾಕಿ.03:6-7](rc://*/tn/help/mal/03/06)
## ಪದ ಡೇಟಾ:
* Strong's: H2706, H4687, H4931, H4941,