kn_tw/bible/other/magic.md

24 lines
2.5 KiB
Markdown

# ಮಂತ್ರ, ಮಂತ್ರವಾಗಿರುವ, ಮಾಂತ್ರಿಕ, ಜೋಯಿಸರು
## ಪದದ ಅರ್ಥವಿವರಣೆ:
“ಮಂತ್ರ” ಎನ್ನುವ ಪದವು ದೇವರಿಂದ ಬರದಂತಹ ಪ್ರಕೃತಾತೀತವಾದ ಶಕ್ತಿಯನ್ನು ಉಪಯೋಗಿಸುವ ಅಭ್ಯಾಸ ಮಾಡುವುದನ್ನು ಸೂಚಿಸುತ್ತದೆ. “ಮಾಂತ್ರಿಕನು” ಎಂದರೆ ಮಂತ್ರ ವಿದ್ಯೆಯನ್ನು ಅಭ್ಯಾಸ ಮಾಡುವವನನ್ನು ಸೂಚಿಸುತ್ತದೆ.
* ಐಗುಪ್ತದಲ್ಲಿ ಮೋಶೆಯನ ಮೂಲಕ ದೇವರು ಅನೇಕ ಅದ್ಭುತಗಳನ್ನು ಮಾಡುವುದರ ಮೂಲಕ, ಐಗುಪ್ತ ಫರೋಹನ ಜೋಯಿಸರು ದೇವರು ಮಾಡಿದ ಕೆಲವೊಂದು ಕಾರ್ಯಗಳನ್ನು ಮಾಡಿದರು, ಆದರೆ ಅವರ ಶಕ್ತಿ ದೇವರಿಂದ ಬಂದಿರುವುದಿಲ್ಲ.
* ಮಂತ್ರವು ಅನೇಕಸಲ ಪ್ರಕೃತಾತೀತವಾದ ಕಾರ್ಯವನ್ನು ಮಾಡುವುದಕ್ಕೆ ನುಡಿಯುವುದು ಅಥವಾ ಕೆಲವೊಂದು ಪದಗಳನ್ನು ಪದೇಪದೇ ಹೇಳುವುದೂ ಆಗಿರುತ್ತದೆ.
* ಈ ರೀತಿಯ ಮಂತ್ರ ವಿದ್ಯೆಗಳನ್ನು ಅಥವಾ ಕಣಿ ಹೇಳುವುದನ್ನು ಅಭ್ಯಾಸ ಮಾಡಬಾರದೆಂದು ದೇವರು ತನ್ನ ಜನರಿಗೆ ಆಜ್ಞಾಪಿಸಿದರು.
* ಮಾಂತ್ರಿಕನು ಜೋಯಿಸರಲ್ಲಿ ಒಬ್ಬನಾಗಿರುತ್ತಾನೆ, ಇತರರಿಗೆ ಹಾನಿ ಮಾಡುವುದಕ್ಕೆ ಮಂತ್ರವನ್ನು ಉಪಯೋಗಿಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಕಣಿ ಹೇಳುವುದು](../other/divination.md), [ಐಗುಪ್ತ](../names/egypt.md), [ಫರೋಹ](../names/pharaoh.md), [ಶಕ್ತಿ](../kt/power.md), [ಮಾಂತ್ರಿಕ](../other/sorcery.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.41:7-8](rc://*/tn/help/gen/41/07)
* [ಆದಿ.41:22-24](rc://*/tn/help/gen/41/22)
* [ಆದಿ.44:3-5](rc://*/tn/help/gen/44/03)
* [ಆದಿ.44:14-15](rc://*/tn/help/gen/44/14)
## ಪದ ಡೇಟಾ:
* Strong's: H2748, H2749, H3049, G3097