kn_tw/bible/other/lowly.md

25 lines
2.5 KiB
Markdown

# ತಗ್ಗಿಸಿಕೊಂಡಿರುವುದು, ಅತಿ ಕಡಿಮೆ, ಕೆಳಮಟ್ಟ
## ಪದದ ಅರ್ಥವಿವರಣೆ:
“ದೀನ ಸ್ಥಿತಿ” ಮತ್ತು “ನಮ್ರತೆ” ಎನ್ನುವ ಪದಗಳು ಬಡವರಾಗಿರುವುದನ್ನು ಅಥವಾ ಅತೀ ಕಡಿಮೆ ಸ್ಥಾನದಲ್ಲಿರುವುದನ್ನು ಸೂಚಿಸುತ್ತದೆ. ತಗ್ಗಿಸಿಕೊಂಡಿರುವುದೆನ್ನುವುದು ದೀನ ಸ್ಥಿತಿಯನ್ನು ಹೊಂದಿರುವ ಅರ್ಥವನ್ನು ಕೊಡುತ್ತದೆ.
* ಯೇಸುವು ಕೂಡ ಇತರರಿಗೆ ಸೇವೆ ಮಾಡುವುದಕ್ಕೆ ಮತ್ತು ಮನುಷ್ಯನಾಗಿ ಬರುವುದಕ್ಕೆ ತನ್ನನ್ನು ತಾನು ಕೆಳಮಟ್ಟಕ್ಕೆ ತಗ್ಗಿಸಿಕೊಂಡಿದ್ದಾರೆ.
* ಆತನ ಜನನವು ಸಾಧಾರಣವಾಗಿದ್ದಿತ್ತು, ಆತನು ಪ್ರಾಣಿಗಳನ್ನು ಕಟ್ಟಿ ಹಾಕುವ ಸ್ಥಳದಲ್ಲಿ ಜನಿಸಿದ್ದನೇ ಹೊರತು ಅರಮನೆಯಲ್ಲಲ್ಲ.
* ತಗ್ಗಿಸಿಕೊಂಡಿರುವ ಸ್ವಭಾವವನ್ನು ಹೊಂದಿರುವುದೆಂದರೆ, ಅಹಂಭಾವಿಗಳಾಗಿ ಇರದಿರುವುದು ಎಂದರ್ಥ.
* “ತಗ್ಗಿಸಿಕೊಂಡಿರುವುದು” ಎನ್ನುವ ಮಾತನ್ನು ಅನುವಾದ ಮಾಡುವುದರಲ್ಲಿ “ದೀನತ್ವ” ಅಥವಾ “ಕೆಳಮಟ್ಟ” ಅಥವಾ “ಅಪ್ರಾಮುಖ್ಯ” ಎನ್ನುವ ಪದಗಳು ಒಳಗೊಂಡಿರುತ್ತವೆ.
* “ಕೆಳಮಟ್ಟ” ಎನ್ನುವ ಪದವನ್ನು “ದೀನತ್ವ” ಅಥವಾ “ಕಡಿಮೆ ಪ್ರಾಮುಖ್ಯತೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದೀನತೆ](../kt/humble.md), [ಗರ್ವ](../other/proud.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.20:17-21](rc://*/tn/help/act/20/17)
* [ಯೆಹೆ.17:13-14](rc://*/tn/help/ezk/17/13)
* [ಲೂಕ.01:48-49](rc://*/tn/help/luk/01/48)
* [ರೋಮಾ.12:14-16](rc://*/tn/help/rom/12/14)
## ಪದ ಡೇಟಾ:
* Strong's: H6041, H6819, H8217, G5011, G5012, G5014