kn_tw/bible/other/house.md

36 lines
5.2 KiB
Markdown

# ಮನೆ, ಮನೆಗಳು, ಮೇಲ್ಛಾವಣಿ, ಮನೆಮೆಟ್ಟಿಲುಗಳು, ಕಣಜ, ಕಣಜಗಳು, ಮನೆಯಾಳುಗಳು
## ಪದದ ಅರ್ಥವಿವರಣೆ:
“ಮನೆ” ಎನ್ನುವ ಪದವನ್ನು ಅನೇಕಬಾರಿ ಸತ್ಯವೇದದಲ್ಲಿ ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ.
* ಕೆಲವೊಂದುಬಾರಿ ಇದಕ್ಕೆ “ಮನೆಯಾಳುಗಳು” ಎಂದರ್ಥ, ಅಂದರೆ ಒಂದು ಮನೆಯಲ್ಲಿ ವಾಸಿಸುವ ಜನರನ್ನು ಸೂಚಿಸುತ್ತದೆ.
* “ಮನೆ” ಎನ್ನುವ ಪದವು ಅನೇಕಬಾರಿ ಒಬ್ಬ ವ್ಯಕ್ತಿಯ ವಂಶಸ್ಥರನ್ನು ಅಥವಾ ಇತರ ಬಂಧುಮಿತ್ರರನ್ನು ಸೂಚಿಸುತ್ತದೆ. ಉದಾಹರಣೆಗೆ, “ದಾವೀದನ ಮನೆ” ಎನ್ನುವ ಮಾತು ಅರಸನಾದ ದಾವೀದನ ಎಲ್ಲಾ ವಂಶಸ್ಥರನ್ನು ಸೂಚಿಸುತ್ತದೆ.
* “ದೇವರ ಮನೆ” ಮತ್ತು “ಯೆಹೋವನ ಮನೆ” ಎನ್ನುವ ಪದಗಳು ಗುಡಾರವನ್ನಾಗಲಿ ಅಥವಾ ದೇವಾಲಯವನ್ನಾಗಲಿ ಸೂಚಿಸುತ್ತದೆ. ಈ ಮಾತುಗಳು ಸಾಧಾರಣವಾಗಿ ದೇವರು ನಿವಾಸವಾಗಿರುವ ಅಥವ ದೇವರು ಇರುವ ಸ್ಥಳವನ್ನು ಕೂಡ ಸೂಚಿಸುತ್ತವೆ.
* ಇಬ್ರಿ 3ನೇ ಅಧ್ಯಾಯದಲ್ಲಿ “ದೇವರ ಮನೆ” ಎಂದು ಉಪಗೋಗಿಸಿರುವ ಅಲಂಕಾರಿಕ ಪದವು ದೇವರ ಜನರನ್ನು ಅಥವಾ ದೇವರಿಗೆ ಸಂಬಂಧಪಟ್ಟ ಪ್ರತಿಯೊಂದನ್ನು ಸೂಚಿಸುತ್ತದೆ.
* “ಇಸ್ರಾಯೇಲ್ ಮನೆ” ಎನ್ನುವ ಮಾತು ಸಾಧಾರಣವಾಗಿ ಇಸ್ರಾಯೇಲ್ ದೇಶವನ್ನೆಲ್ಲಾ ಅಥವಾ ವಿಶೇಷವಾಗಿ ಇಸ್ರಾಯೇಲ್ ಉತ್ತರ ರಾಜ್ಯದಲ್ಲಿರುವ ಎಲ್ಲಾ ಕುಲಗಳನ್ನು ಸೂಚಿಸುತ್ತದೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “ಮನೆ” ಎನ್ನುವದನ್ನು “ಮನೆಯಾಳುಗಳು” ಅಥವಾ “ಜನರು” ಅಥವಾ “ಕುಟುಂಬ” ಅಥವಾ “ಸಂತಾನದವರು” ಅಥವಾ “ದೇವಾಲಯ” ಅಥವಾ “ನಿವಾಸವಾಗಿರುವ ಸ್ಥಳ” ಎಂದೂ ಅನುವಾದ ಮಾಡಬಹುದು.
* “ದಾವೀದನ ಮನೆ” ಎನ್ನುವ ಮಾತನ್ನು “ದಾವೀದನ ವಂಶದವರು” ಅಥವಾ “ದಾವೀದನ ಕುಟುಂಬ” ಅಥವಾ “ದಾವೀದನ ವಂಶದವರು” ಎಂದೂ ಅನುವಾದ ಮಾಡಬಹುದು. ಸಂಬಂಧಪಟ್ಟ ಮಾತುಗಳು ಇದೇ ಮಾತುಗಳ ವಿಧಾನದಲ್ಲಿ ಅನುವಾದ ಮಾಡಬಹುದು.
* “ಇಸ್ರಾಯೇಲ್ ಮನೆ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಇಸ್ರಾಯೇಲ್ ಜನರು” ಅಥವಾ “ಇಸ್ರಾಯೇಲ್ ವಂಶದವರು” ಅಥವಾ “ಇಸ್ರಾಯೇಲ್ಯರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಯೆಹೋವನ ಮನೆ” ಎನ್ನುವ ಪದವನ್ನು “ಯೆಹೋವಾನ ದೇವಾಲಯ” ಅಥವಾ “ಯೆಹೋವನನ್ನು ಆರಾಧಿಸುವ ಸ್ಥಳ” ಅಥವಾ “ಯೆಹೋವ ದೇವರು ತನ್ನ ಜನರೊಂದಿಗೆ ಭೇಟಿಯಾಗುವ ಸ್ಥಳ” ಅಥವಾ “ಯೆಹೋವ ನಿವಾಸವಾಗಿರುವ ಸ್ಥಳ” ಎಂದೂ ಅನುವಾದ ಮಾಡಬಹುದು.
* “ದೇವರ ಮನೆ” ಎನ್ನುವದನ್ನು ಈ ರೀತಿಯ ಮಾತುಗಳಿಂದ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದಾವೀದ](../names/david.md), [ಸಂತಾನದವರು](../other/descendant.md), [ದೇವರ ಮನೆ](../kt/houseofgod.md), [ಕುಟುಂಬ ಸದಸ್ಯರು](../other/household.md), [ಇಸ್ರಾಯೇಲ್ ರಾಜ್ಯ](../names/kingdomofisrael.md), [ಗುಡಾರ](../kt/tabernacle.md), [ದೇವಾಲಯ](../kt/temple.md), [ಯೆಹೋವ](../kt/yahweh.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.07:41-42](rc://*/tn/help/act/07/41)
* [ಅಪೊ.ಕೃತ್ಯ.07:47-50](rc://*/tn/help/act/07/47)
* [ಆದಿ.39:3-4](rc://*/tn/help/gen/39/03)
* [ಆದಿ.41:39-41](rc://*/tn/help/gen/41/39)
* [ಲೂಕ.08:38-39](rc://*/tn/help/luk/08/38)
* [ಮತ್ತಾಯ.10:5-7](rc://*/tn/help/mat/10/05)
* [ಮತ್ತಾಯ.15:24-26](rc://*/tn/help/mat/15/24)
## ಪದ ಡೇಟಾ:
* Strong's: H1004, H1005, G3609, G3613, G3614, G3624