kn_tw/bible/other/highplaces.md

30 lines
3.9 KiB
Markdown

# ಉನ್ನತ ಸ್ಥಳ, ಉನ್ನತ ಸ್ಥಳಗಳು
## ಪದದ ಅರ್ಥವಿವರಣೆ:
“ಉನ್ನತ ಸ್ಥಳಗಳು” ಎನ್ನುವ ಮಾತು ವಿಗ್ರಹಗಳನ್ನು ಆರಾಧನೆ ಮಾಡುವುದಕ್ಕಾಗಿ ಉಪಯೋಗಿಸಿರುವ ಯಜ್ಞವೇದಿಗಳನ್ನು ಮತ್ತು ಗೋಪುರಗಳನ್ನು ಸೂಚಿಸುತ್ತದೆ. ಅವುಗಳನ್ನು ಸಾಧಾರಣವಾಗಿ ಉನ್ನತ ನೆಲದ ಮೇಲೆ ಕಟ್ಟುತ್ತಾರೆ, ಅಂದರೆ ಬೆಟ್ಟದ ಮೇಲೆ ಅಥವಾ ಪರ್ವತ ಪಕ್ಕದಲ್ಲಿ ಕಟ್ಟುತ್ತಾರೆ.
* ಈ ರೀತಿಯ ಉನ್ನತ ಸ್ಥಳಗಳಲ್ಲಿ ಸುಳ್ಳು ದೇವರುಗಳಿಗೆ ಯಜ್ಞವೇದಿಗಳನ್ನು ಕಟ್ಟುವುದರ ಮೂಲಕ ಇಸ್ರಾಯೇಲ್ಯರ ಅರಸರು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದರು. ಈ ರೀತಿ ಮಾಡುವುದರಿಂದ ಜನರು ವಿಗ್ರಹಗಳನ್ನು ಇನ್ನೂ ಹೆಚ್ಚಾಗಿ ಆರಾಧನೆ ಮಾಡುವುದರಲ್ಲಿ ಮುಳುಗುವುದಕ್ಕೆ ನಡೆಸಿತ್ತು.
* ಇಸ್ರಾಯೇಲಿನಲ್ಲಿ ಅಥವಾ ಯೆಹೂದದಲ್ಲಿ ದೇವರಿಗೆ ಭಯಪಡುವ ಅರಸರು ಬಂದಾಗ, ಅವರು ಈ ವಿಗ್ರಹಗಳಿಗೆ ಆರಾಧನೆ ಮಾಡುವುದನ್ನು ನಿಲ್ಲಿಸುವ ಕ್ರಮದಲ್ಲಿ ಯಜ್ಞವೇದಿಗಳನ್ನು ಅಥವಾ ಉನ್ನತ ಸ್ಥಳಗಳನ್ನು ನಾಶಗೊಳಿಸುವುದೆನ್ನುವುದು ಅನೇಕಸಲ ನಡೆಯುತ್ತಿತ್ತು.
* ಏನೇಯಾಗಲಿ, ಈ ಒಳ್ಳೇಯ ಅರಸರಲ್ಲಿ ಕೆಲವರು ತುಂಬಾ ನಿರ್ಲಕ್ಸ್ಯತೆಯಿಂದ ಇರುತ್ತಿದ್ದರು ಮತ್ತು ಈ ಉನ್ನತ ಸ್ಥಳಗಳನ್ನು ತೆಗೆದುಹಾಕುತ್ತಿರಲಿಲ್ಲ, ಇದರಿಂದ ಇಡೀ ಇಸ್ರಾಯೇಲ್ ದೇಶವು ವಿಗ್ರಹಗಳನ್ನು ಆರಾಧನೆ ಮಾಡುವುದರಲ್ಲಿ ಮುಂದುವರಿಯುತ್ತಿದ್ದರು.
## ಅನುವಾದ ಸಲಹೆಗಳು:
* ಈ ಮಾತನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ, “ವಿಗ್ರಹ ಆರಾಧನೆಗಾಗಿ ಎತ್ತರದಲ್ಲಿರುವ ಸ್ಥಳಗಳು” ಅಥವಾ “ಬೆಟ್ಟದ ಮೇಲೆ ವಿಗ್ರಹ ಗೋಪುರಗಳು” ಅಥವಾ “ವಿಗ್ರಹ ಯಜ್ಞವೇದಿಯ ದಿಬ್ಬಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಈ ಮಾತು ಕೇವಲ ಯಜ್ಞವೇದಿಗಳಿರುವ ಉನ್ನತ ಸ್ಥಳಗಳನ್ನು ಮಾತ್ರವೇ ಸೂಚಿಸದೇ, ವಿಗ್ರಹ ಯಜ್ಞವೇದಿಗಳನ್ನು ಸೂಚಿಸುವಂತೆ ನೋಡಿಕೊಳ್ಳಿರಿ,
(ಈ ಪದಗಳನ್ನು ಸಹ ನೋಡಿರಿ : [ಯಜ್ಞವೇದಿ](../kt/altar.md), [ಸುಳ್ಳು ದೇವರು](../kt/falsegod.md), [ಆರಾಧನೆ](../kt/worship.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.09:12-13](rc://*/tn/help/1sa/09/12)
* [2 ಅರಸ.16:3-4](rc://*/tn/help/2ki/16/03)
* [ಆಮೋಸ.04:12-13](rc://*/tn/help/amo/04/12)
* [ಧರ್ಮೋ.33:29](rc://*/tn/help/deu/33/29)
* [ಯೆಹೆ.06:1-3](rc://*/tn/help/ezk/06/01)
* [ಹಬ.03:18-19](rc://*/tn/help/hab/03/18)
## ಪದ ಡೇಟಾ:
* Strong's: H1116, H1181, H1354, H2073, H4791, H7311, H7413