3.9 KiB
3.9 KiB
ಉನ್ನತ ಸ್ಥಳ, ಉನ್ನತ ಸ್ಥಳಗಳು
ಪದದ ಅರ್ಥವಿವರಣೆ:
“ಉನ್ನತ ಸ್ಥಳಗಳು” ಎನ್ನುವ ಮಾತು ವಿಗ್ರಹಗಳನ್ನು ಆರಾಧನೆ ಮಾಡುವುದಕ್ಕಾಗಿ ಉಪಯೋಗಿಸಿರುವ ಯಜ್ಞವೇದಿಗಳನ್ನು ಮತ್ತು ಗೋಪುರಗಳನ್ನು ಸೂಚಿಸುತ್ತದೆ. ಅವುಗಳನ್ನು ಸಾಧಾರಣವಾಗಿ ಉನ್ನತ ನೆಲದ ಮೇಲೆ ಕಟ್ಟುತ್ತಾರೆ, ಅಂದರೆ ಬೆಟ್ಟದ ಮೇಲೆ ಅಥವಾ ಪರ್ವತ ಪಕ್ಕದಲ್ಲಿ ಕಟ್ಟುತ್ತಾರೆ.
- ಈ ರೀತಿಯ ಉನ್ನತ ಸ್ಥಳಗಳಲ್ಲಿ ಸುಳ್ಳು ದೇವರುಗಳಿಗೆ ಯಜ್ಞವೇದಿಗಳನ್ನು ಕಟ್ಟುವುದರ ಮೂಲಕ ಇಸ್ರಾಯೇಲ್ಯರ ಅರಸರು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದರು. ಈ ರೀತಿ ಮಾಡುವುದರಿಂದ ಜನರು ವಿಗ್ರಹಗಳನ್ನು ಇನ್ನೂ ಹೆಚ್ಚಾಗಿ ಆರಾಧನೆ ಮಾಡುವುದರಲ್ಲಿ ಮುಳುಗುವುದಕ್ಕೆ ನಡೆಸಿತ್ತು.
- ಇಸ್ರಾಯೇಲಿನಲ್ಲಿ ಅಥವಾ ಯೆಹೂದದಲ್ಲಿ ದೇವರಿಗೆ ಭಯಪಡುವ ಅರಸರು ಬಂದಾಗ, ಅವರು ಈ ವಿಗ್ರಹಗಳಿಗೆ ಆರಾಧನೆ ಮಾಡುವುದನ್ನು ನಿಲ್ಲಿಸುವ ಕ್ರಮದಲ್ಲಿ ಯಜ್ಞವೇದಿಗಳನ್ನು ಅಥವಾ ಉನ್ನತ ಸ್ಥಳಗಳನ್ನು ನಾಶಗೊಳಿಸುವುದೆನ್ನುವುದು ಅನೇಕಸಲ ನಡೆಯುತ್ತಿತ್ತು.
- ಏನೇಯಾಗಲಿ, ಈ ಒಳ್ಳೇಯ ಅರಸರಲ್ಲಿ ಕೆಲವರು ತುಂಬಾ ನಿರ್ಲಕ್ಸ್ಯತೆಯಿಂದ ಇರುತ್ತಿದ್ದರು ಮತ್ತು ಈ ಉನ್ನತ ಸ್ಥಳಗಳನ್ನು ತೆಗೆದುಹಾಕುತ್ತಿರಲಿಲ್ಲ, ಇದರಿಂದ ಇಡೀ ಇಸ್ರಾಯೇಲ್ ದೇಶವು ವಿಗ್ರಹಗಳನ್ನು ಆರಾಧನೆ ಮಾಡುವುದರಲ್ಲಿ ಮುಂದುವರಿಯುತ್ತಿದ್ದರು.
ಅನುವಾದ ಸಲಹೆಗಳು:
- ಈ ಮಾತನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ, “ವಿಗ್ರಹ ಆರಾಧನೆಗಾಗಿ ಎತ್ತರದಲ್ಲಿರುವ ಸ್ಥಳಗಳು” ಅಥವಾ “ಬೆಟ್ಟದ ಮೇಲೆ ವಿಗ್ರಹ ಗೋಪುರಗಳು” ಅಥವಾ “ವಿಗ್ರಹ ಯಜ್ಞವೇದಿಯ ದಿಬ್ಬಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
- ಈ ಮಾತು ಕೇವಲ ಯಜ್ಞವೇದಿಗಳಿರುವ ಉನ್ನತ ಸ್ಥಳಗಳನ್ನು ಮಾತ್ರವೇ ಸೂಚಿಸದೇ, ವಿಗ್ರಹ ಯಜ್ಞವೇದಿಗಳನ್ನು ಸೂಚಿಸುವಂತೆ ನೋಡಿಕೊಳ್ಳಿರಿ,
(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಸುಳ್ಳು ದೇವರು, ಆರಾಧನೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1116, H1181, H1354, H2073, H4791, H7311, H7413