kn_tw/bible/other/hand.md

9.0 KiB

ಹಸ್ತ, ಹಸ್ತಗಳು, ಕೈಗೆ ಕೊಡಲ್ಪಟ್ಟಿದೆ, ಹಸ್ತಾಂತರ, ಹಸ್ತದಿಂದ, ಮೇಲೆ ಹಸ್ತವನ್ನಿಡು, ಮೇಲೆ ತನ್ನ ಹಸ್ತವನ್ನಿಡುವುದು, ಬಲಗೈ, ನೀತಿ ಹಸ್ತಗಳು, ಹಸ್ತದಿಂದ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಹಸ್ತ” ಎನ್ನುವ ಪದವನ್ನು ಅನೇಕವಾದ ಅಲಂಕಾರಿಕ ವಿಧಾನಗಳಲ್ಲಿ ಉಪಯೋಗಿಸಲಾಗಿರುತ್ತದೆ.

  • ಒಬ್ಬರಿಗೆ “ಕೈಯನ್ನು” ಕೊಡುವುದು ಎನ್ನುವುದಕ್ಕೆ ಒಬ್ಬರ ಕೈಗಳಲ್ಲಿ ಏನಾದರೊಂದನ್ನು ಕೊಡುವುದು ಎನ್ನುವ ಅರ್ಥ ಬರುತ್ತದೆ.
  • “ಹಸ್ತ” ಎನ್ನುವ ಪದವು ದೇವರ ಶಕ್ತಿಯನ್ನು ಮತ್ತು ಆತನ ಕಾರ್ಯವನ್ನು ಸೂಚಿಸುವುದರಲ್ಲಿ ಅನೇಕಬಾರಿ ಉಪಯೋಗಿಸಲ್ಪಟ್ಟಿದೆ, “ಈ ಎಲ್ಲಾ ಕಾರ್ಯಗಳನ್ನು ನನ್ನ ಹಸ್ತವು ಮಾಡಲಿಲ್ಲವೋ?” ಎಂದು ದೇವರು ಹೇಳಿದ ಸಂದರ್ಭಗಳಿವೆ. (ನೋಡಿರಿ: ಲಾಕ್ಷಣಿಕ ಪ್ರಯೋಗ)
  • “ಕೈಗೆ ಒಪ್ಪಿಸಲಾಗಿದೆ” ಅಥವಾ “ಕೈಗಳಲ್ಲಿ ಇಡಲಾಗಿದೆ” ಎನ್ನುವ ಮಾತುಗಳು ಒಬ್ಬರ ಶಕ್ತಿಯ ಕೆಳಗೆ ಅಥವಾ ನಿಯಂತ್ರಣದ ಕೆಳಗೆ ಇನ್ನೊಬ್ಬರನ್ನಿರಿಸುವುದನ್ನು ಸೂಚಿಸುತ್ತದೆ.
  • “ಹಸ್ತ” ಎನ್ನುವ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದ ಕೆಲವೊಂದು ಉದಾಹರಣೆಗಳು:
  • “ಮೇಲೆ ಹಸ್ತವನ್ನಿಡು” ಎನ್ನುವದಕ್ಕೆ “ ಹಾನಿ ಮಾಡುವುದು” ಎಂದರ್ಥ.
  • “ಅವನ ಹಸ್ತದಿಂದ ರಕ್ಷಿಸು” ಎನ್ನುವ ಮಾತಿಗೆ ಇನ್ನೊಬ್ಬರನ್ನು ಹಾನಿ ಮಾಡುವುದರಿಂದ ಒಬ್ಬರನ್ನು ರಕ್ಷಿಸು ಎಂದರ್ಥ.
  • “ಬಲಗೈ ಮೇಲೆ” ಇರುವ ಸ್ಥಾನ ಎನ್ನುವದಕ್ಕೆ “ಬಲಗಡೆಯಲ್ಲಿರುವುದು” ಅಥವಾ “ಬಲ ಬದಿಗೆ” ಎಂದರ್ಥ.
  • ಇನ್ನೊಬ್ಬರ “ಹಸ್ತದಿಂದ” ಎನ್ನುವ ಮಾತಿಗೆ ಒಬ್ಬ ವ್ಯಕ್ತಿಯ ಕ್ರಿಯೆಯ “ಮೂಲಕ” ಅಥವಾ ಕ್ರಿಯೆ “ದಿಂದ” ಎಂದರ್ಥ. ಉದಾಹರಣೆಗೆ, “ಕರ್ತನ ಹಸ್ತದಿಂದ” ಎನ್ನುವ ಮಾತಿಗೆ ಏನಾದರೊಂದು ಮಾಡುವುದಕ್ಕೆ ಕರ್ತನೊಬ್ಬನೇ ಎಂದರ್ಥ.
  • ಒಬ್ಬರ ಮೇಲೆ ಹಸ್ತಗಳನ್ನಿಡುವುದೆನ್ನುವುದು ಅನೇಕಬಾರಿ ಆ ವ್ಯಕ್ತಿಯನ್ನು ಆಶೀರ್ವಾದ ಮಾಡುವಾಗ ಮಾಡುವ ಕ್ರಿಯೆಯಾಗಿರುತ್ತದೆ.
  • “ಹಸ್ತಗಳನ್ನಿಡುವುದು” ಎನ್ನುವ ಮಾತು ಸ್ವಸ್ಥತೆಗಾಗಿ ಪ್ರಾರ್ಥನೆ ಮಾಡುವುದಕ್ಕೆ ಅಥವಾ ದೇವರ ಸೇವೆಗೆ ಒಬ್ಬ ವ್ಯಕ್ತಿಯನ್ನು ಪ್ರತಿಷ್ಠೆ ಮಾಡುವ ಕ್ರಮದಲ್ಲಿ ಆ ವ್ಯಕ್ತಿಯ ಮೇಲೆ ಹಸ್ತಗಳನ್ನಿಡುವುದನ್ನು ಸೂಚಿಸುತ್ತದೆ.
  • “ನನ್ನ ಹಸ್ತಗಳಿಂದ ಬರೆಯುತ್ತಿದ್ದೇನೆ” ಎಂದು ಪೌಲನು ಹೇಳಿದಾಗ, ಆ ಮಾತಿಗೆ ಈ ಪತ್ರವನ್ನು ನಾನು ಹೇಳುತ್ತಿರುವಾಗ ಇನ್ನೊಬ್ಬರು ಬರೆಯದೇ, ನನ್ನ ಸ್ವಂತ ಹಸ್ತಗಳಿಂದ ಬರೆಯಲ್ಪಟ್ಟಿದೆ ಎಂದರ್ಥ,

ಅನುವಾದ ಸಲಹೆಗಳು:

  • ಈ ಮಾತುಗಳು ಮತ್ತು ಇತರ ಅಲಂಕಾರಿಕ ಹೇಳಿಕೆಗಳು ಒಂದೇ ಅರ್ಥ ಬರುವ ಇತರ ಅಲಂಕಾರಿಕ ಮಾತುಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು. ಅಥವಾ ಅರ್ಥವನ್ನು ನೇರವಾದ, ಅಕ್ಷರಾರ್ಥ ಭಾಷೆಯನ್ನೂ ಉಪಯೋಗಿಸಿ ಅನುವಾದ ಮಾಡಬಹುದು (ಉದಾಹರಣೆಗಳನ್ನು ಮೇಲೆ ನೋಡಿರಿ).
  • “ಅವನಿಗೆ ಗ್ರಂಥದ ಸುರಳಿಯನ್ನು ಕೊಡಲಾಗಿದೆ” ಎನ್ನುವ ಮಾತಿಗೆ “ಸುರಳಿಯನ್ನು ಅವನಿಗೆ ಕೊಡಲಾಗಿದೆ” ಅಥವಾ “ಅವನ ಕೈಯಲ್ಲಿ ಸುರಳಿಯನ್ನಿಡು” ಎಂದೂ ಅನುವಾದ ಮಾಡಬಹುದು. ಅದನ್ನು ಅವನಿಗೆ ಶಾಶ್ವತವಾಗಿ ಕೊಡಲ್ಪಟ್ಟಿಲ್ಲ, ಆದರೆ ಆ ಸಮಯದಲ್ಲಿ ಅದನ್ನು ಉಪಯೋಗಿಸುವುದರ ಉದ್ದೇಶಕ್ಕಾಗಿ ಕೊಡಲ್ಪಟ್ಟಿರುತ್ತದೆ.
  • “ “ದೇವರ ಹಸ್ತವು ಇದನ್ನು ಮಾಡಿದೆ” ಎನ್ನುವ ಮಾತಿನಲ್ಲಿರುವಂತೆ ಹಸ್ತ” ಎನ್ನುವ ಪದವು ಒಬ್ಬ ವ್ಯಕ್ತಿಗೆ ಸೂಚಿಸಿದಾಗ, ಇದನ್ನು “ಇದನ್ನು ದೇವರು ಮಾಡಿದ್ದಾನೆ” ಎಂದು ಅನುವಾದ ಮಾಡಿದ್ದಾನೆ.
  • “ಅವರ ಶತ್ರುಗಳ ಹಸ್ತಗಳಿಗೆ ಅವರನ್ನು ಒಪ್ಪಿಸಲಾಗಿದೆ” ಅಥವಾ “ಅವರ ಶತ್ರುಗಳಿಗೆ ಅವರನ್ನು ಕೈವಶಮಾಡಲಾಗಿದೆ” ಎನ್ನುವ ಮಾತುಗಳನ್ನು “ಅವರನ್ನು ಜಯಿಸುವುದಕ್ಕೆ ಅವರ ಶತ್ರುಗಳಿಗೆ ಅನುಮತಿ ಕೊಡಿರಿ” ಅಥವಾ “ಅವರ ಶತ್ರುಗಳಿಂದ ಅವರೆಲ್ಲರು ಸೆರೆಗೊಯ್ಯುವಂತೆ ಕಾರಣವಾಗಿರಿ” ಅಥವಾ “ಅವರ ಮೇಲೆ ನಿಯಂತ್ರಣವನ್ನು ತೆಗೆದುಕೊಳ್ಳಲು ಅವರ ಶತ್ರುಗಳನ್ನು ಬಲಪಡಿಸಿರಿ” ಎಂದೂ ಅನುವಾದ ಮಾಡಬಹುದು.
  • “ಅವರ ಹಸ್ತದಿಂದ ಸಾಯುವುದು” ಎನ್ನುವ ಮಾತನ್ನು “ಅವರಿಂದ ಕೊಲ್ಲಲ್ಪಡುವುದು” ಎಂದರ್ಥ.
  • “ಅವರ ಬಲಗೈ ಮೇಲೆ” ಎನ್ನುವ ಮಾತನ್ನು “ಅವರ ಬಲ ಬದಿಗೆ” ಎಂದೂ ಅನುವಾದ ಮಾಡಬಹುದು.
  • ಯೇಸು “ದೇವರ ಬಲಗಡೆಯಲ್ಲಿ ಆಸೀನನಾಗಿರುವನು” ಎನ್ನುವ ಮಾತಿಗೆ ಸಂಬಂಧಪಟ್ಟು, ಒಂದು ವೇಳೆ ಈ ಮಾತು ಸಮಾನ ಅಧಿಕಾರ ಮತ್ತು ಉನ್ನತ ಗೌರವ ಸ್ಥಾನ ಎನ್ನುವ ಅರ್ಥ ಅನುವಾದ ಭಾಷೆಯಲ್ಲಿ ಬರದಿದ್ದರೆ, ಆ ಅರ್ಥ ಬರುವ ಬೇರೊಂದು ಮಾತನ್ನು ಉಅಪಯೋಗಿಸಬಹುದು. ಅಥವಾ ಒಂದು ಚಿಕ್ಕ ವಿವರಣೆಯನ್ನು ಜೋಡಿಸಿ ಹೇಳಬಹುದು: “ದೇವರ ಬಲಗಡೆಯಲ್ಲಿ, ಅತ್ಯುನ್ನತ ಅಧಿಕಾರದ ಸ್ಥಾನದಲ್ಲಿ ಆಸೀನನಾಗಿರುವನು” ಎಂದು ಹೇಳಬಹುದು.

(ಈ ಪದಗಳನ್ನು ಸಹ ನೋಡಿರಿ : ವಿರೋಧಿ, ಆಶೀರ್ವದಿಸು, ಸೆರೆ, ಘನಪಡಿಸು, ಶಕ್ತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H405, H2026, H2651, H2947, H2948, H3027, H3028, H3225, H3231, H3233, H3709, H7126, H7138, H8040, H8042, H8168, G710, G1188, G1448, G1451, G1764, G2021, G2092, G2176, G2902, G4084, G4474, G4475, G5495, G5496, G5497