kn_tw/bible/other/foreordain.md

2.8 KiB

ಮುಂತಿಳಿದಿರುವುದು, ಮುನ್ನರಿವು

ಪದದ ಅರ್ಥವಿವರಣೆ:

“ಮುಂತಿಳಿದಿರುವುದು” ಮತ್ತು “ಮುನ್ನರಿವು” ಎನ್ನುವ ಪದಗಳು “ಮುಂತಿಳಿ” ಎನ್ನುವ ಕ್ರಿಯಾ ಪದದಿಂದ ಬಂದಿವೆ, ಇದಕ್ಕೆ ಯಾವುದಾದರೊಂದು ನಡೆಯುವುದಕ್ಕೆ ಮುಂಚಿತವಾಗಿ ಅದರ ಕುರಿತಾಗಿ ಏನಾದರೊಂದು ತಿಳಿದುಕೊಳ್ಳುವುದು ಎಂದರ್ಥ.

  • ದೇವರು ಕಾಲಕ್ಕೆ ಪರಿಮಿತರಾಗಿರುವುದಿಲ್ಲ. ಆತನಿಗೆ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ನಡೆಯುವ ಪ್ರತಿಯೊಂದರ ಕುರಿತಾಗಿ ತಿಳಿದಿರುತ್ತದೆ.
  • ಯೇಸುವನ್ನು ತಮ್ಮ ರಕ್ಷಕನನ್ನಾಗಿ ಸ್ವೀಕರಿಸುವುದರ ಮೂಲಕ ರಕ್ಷಣೆ ಹೊಂದಿಕೊಳ್ಳುವವರ ಕುರಿತಾಗಿ ದೇವರಿಗೆ ಮುಂಚಿತವಾಗಿಯೇ ಗೊತ್ತಿದೆಯೆನ್ನುವ ಸಂದರ್ಭದಲ್ಲಿ ಈ ಪದವು ಹೆಚ್ಚಾಗಿ ಉಪಯೋಗಿಸಲ್ಪಟ್ಟಿರುತ್ತದೆ.

ಅನುವಾದ ಸಲಹೆಗಳು:

  • “ಮುಂತಿಳಿದಿರುವುದು” ಎನ್ನುವ ಪದವನ್ನು “ಮುಂಚಿತವಾಗಿ ತಿಳಿದುಕೊಂಡಿರುವುದು” ಅಥವಾ “ಮುಂಬರುವ ಸಮಯದ ಕುರಿತಾಗಿ ತಿಳಿದುಕೊಂಡಿರುವುದು” ಅಥವಾ “ಮುಂಚಿತವಾಗಿ ತಿಳಿದುಕೊಂಡಿರುವುದು” ಅಥವಾ “ಈಗಾಗಲೇ ತಿಳಿದುಕೊಂಡಿರುವುದು” ಎಂದೂ ಅನುವಾದ ಮಾಡಬಹುದು.
  • “ಮುನ್ನರಿವು” ಎನ್ನುವ ಪದವನ್ನು “ಮುಂದೇ ಅರಿತಿರುವುದು” ಅಥವಾ “ಮುಂದೆ ಬರುವ ಸಮಯದ ಕುರಿತಾಗಿ ಅರಿತುಕೊಂಡಿರುವುದು” ಅಥವಾ “ಈಗಾಗಲೇ ಅರಿತಿರುವುದು” ಅಥವಾ “ಮುಂಚಿತವಾಗಿಯೇ ಅರಿತಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ತಿಳಿ, ಪೂರ್ವ ನಿರ್ಣಯಿತ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: G42670, G42680