kn_tw/bible/other/falseprophet.md

26 lines
2.2 KiB
Markdown

# ಸುಳ್ಳು ಪ್ರವಾದಿ, ಸುಳ್ಳು ಪ್ರವಾದಿಗಳು
## ಪದದ ಅರ್ಥವಿವರಣೆ
ತನ್ನ ಸಂದೇಶ ದೇವರಿಂದ ಅವನು ಪಡೆದಿದ್ದಾನೆಂದು ಸುಳ್ಳಾಗಿ ಹೇಳಿಕೊಳ್ಳುವವನನ್ನು ಸುಳ್ಳು ಪ್ರವಾದಿಯೆಂದು ಕರೆಯುತ್ತಾರೆ.
* ಸಹಜವಾಗಿ ಸುಳ್ಳು ಪ್ರವಾದಿಗಳ ಪ್ರವಾದನೆ ನೆರವೇರುವುದಿಲ್ಲ. ಅಂದರೆ, ಅವು ನಿಜವಾಗುವದಿಲ್ಲ.
* ಸುಳ್ಳು ಪ್ರವಾದಿಗಳು ಬೋಧಿಸುವ ಸಂಗತಿಗಳು ಸತ್ಯವೇದಕ್ಕೆ ಪಾಕ್ಷಿಕವಾಗಿ ಅಥವಾ ಸಂಪೂರ್ಣವಾಗಿ ವಿರೋದವಾಗಿರುತ್ತವೆ.
* ಈ ಪದವನ್ನು “ದೇವರ ಪ್ರತಿನಿಧಿ ಎಂದು ಸುಳ್ಳಾಗಿ ಹೇಳಿಕೊಳ್ಳುವ ವ್ಯಕ್ತಿ” ಅಥವಾ “ದೇವರ ಮಾತುಗಳನ್ನು ಹೇಳುತ್ತಿದ್ದೇನೆಂದು ಸುಳ್ಳು ಹೇಳುವವನು” ಎಂದು ಅನುವಾದ ಮಾಡಬಹುದು.
* ತಾವು ದೇವರಿಂದ ಬಂದಿದ್ದೇವೆಂದು ಜನರನ್ನು ಮೋಸಮಾಡುವ ಅನೇಕ ಸುಳ್ಳು ಪ್ರವಾದಿಗಳು ಅಂತ್ಯಕಾಲದಲ್ಲಿ ಬರುತ್ತಾರೆಂದು ಹೊಸ ಒಡಂಬಡಿಕೆ ಭೋದಿಸುತ್ತಿದೆ.
(ಈ ಪದಗಳನ್ನು ಸಹ ನೋಡಿರಿ : [ನೆರವೇರಿಸು](../kt/fulfill.md), [ಪ್ರವಾದಿ](../kt/prophet.md), [ಸತ್ಯ](../kt/true.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಯೋಹಾನ.04:1-3](rc://*/tn/help/1jn/04/01)
* [2 ಪೇತ್ರನು.02:1-3](rc://*/tn/help/2pe/02/01)
* [ಅಪೊ.ಕೃತ್ಯ.13:6-8](rc://*/tn/help/act/13/06)
* [ಲೂಕ.06:26](rc://*/tn/help/luk/06/26)
* [ಮತ್ತಾಯ.07:15-17](rc://*/tn/help/mat/07/15)
* [ಮತ್ತಾಯ.24:23-25](rc://*/tn/help/mat/24/23)
## ಪದ ಡೇಟಾ:
* Strong's: G5578