kn_tw/bible/other/elder.md

27 lines
3.0 KiB
Markdown

# ಹಿರಿಯ, ಹಳೆಯದು, ಹಳೆಯ
## ಪದದ ಅರ್ಥವಿವರಣೆ:
ಹಿರಿಯರು ಎನ್ನುವವರು ದೇವರ ಪ್ರಜೆಗಳ ಮಧ್ಯೆದಲ್ಲಿ ಪ್ರಾಯೋಗಾತ್ಮಕವಾದ ನಾಯಕತ್ವವನ್ನು ಮತ್ತು ಆತ್ಮೀಕವದ ಬಾಧ್ಯತೆಗಳನ್ನು ಹೊಂದಿರುವ ಆತ್ಮಿಯಕವಾದ ಪರಿಪಕ್ವವುಳ್ಳ ಮನುಷ್ಯರಾಗಿರುತ್ತಾರೆ.
* “ಹಿರಿಯ” ಎನ್ನುವ ಪದವು ವೃದ್ಧರಾದ ಮನುಷ್ಯರಿಂದ ಬಂದ ಪದವಾಗಿರುತ್ತದೆ, ಯಾಕಂದರೆ ಅವರ ವಯಸ್ಸು ಮತ್ತು ಅನುಭವವು ಹೆಚ್ಚಾದ ಜ್ಞಾನವನ್ನು ಹೊಂದಿರುತ್ತದೆ.
* ಹಳೇ ಒಡಂಬಡಿಕೆಯಲ್ಲಿ ಮೋಶೆಯ ಧರ್ಮಶಾಸ್ತ್ರ ವಿಷಯದಲ್ಲಿ ಮತ್ತು ಸಾಮಾಜಿಕ ನ್ಯಾಯ ಮಾಡುವ ವಿಷಯಗಳಲ್ಲಿ ಇಸ್ರಾಯೇಲ್ಯರನ್ನು ನಡೆಸುವದರಲ್ಲಿ ಹಿರಿಯರು ಸಹಾಯ ಮಾಡಿದ್ದರು.
* ಹೊಸ ಒಡಂಬಡಿಕೆಯಲ್ಲಿ ಯೆಹೂದ್ಯ ಹಿರಿಯರು ತಮ್ಮ ಸಮುದಾಯಗಳಲ್ಲಿ ನಾಯಕರಾಗಿ ಮುಂದೆವರಿದರು ಮತ್ತು ತಮ್ಮ ಜನರಿಗೆ ನ್ಯಾಯಾಧೀಶರಾಗಿದ್ದರು.
* ಆದಿ ಕ್ರೈಸ್ತ ಸಭೆಗಳಲ್ಲಿ ಕ್ರೈಸ್ತ ಹಿರಿಯರು ಸ್ಥಳೀಯ ಸಭೆಗಳಲ್ಲಿರುವ ವಿಶ್ವಾಸಿಗಳಿಗೆ ಒಳ್ಳೇಯ ಆತ್ಮಿಯ ನಾಯಕತ್ವವನ್ನು ಕೊಟ್ಟರು.
* ಈ ಸಭೆಗಳಲ್ಲಿರುವ ಹಿರಿಯರಲ್ಲಿ ಆತ್ಮಿಕವಾದ ಪರಿಪಕ್ವತೆಯನ್ನು ಹೊಂದಿರುವ ಯೌವನಸ್ಥರೂ ಒಳಗೊಂಡಿದ್ದರು.
* ಈ ಪದವನ್ನು “ವೃದ್ಧ ಮನುಷ್ಯರು” ಅಥವಾ “ಸಭೆಯನ್ನು ನಡೆಸುವುದಕ್ಕೆ ಆತ್ಮಿಯಕವಾಗಿ ಪರಿಪಕ್ವತೆಯನ್ನು ಹೊಂದಿರುವ ಮನುಷ್ಯರು” ಎಂಬುದಾಗಿಯೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.11:1-3](rc://*/tn/help/1ch/11/01)
* [1 ತಿಮೊಥೆ.03:1-3](rc://*/tn/help/1ti/03/01)
* [1 ತಿಮೊಥೆ.04:14](rc://*/tn/help/1ti/04/14)
* [ಅಪೊ.ಕೃತ್ಯ.05:19-21](rc://*/tn/help/act/05/19)
* [ಅಪೊ.ಕೃತ್ಯ.14:23](rc://*/tn/help/act/14/23)
* [ಮಾರ್ಕ.11:28](rc://*/tn/help/mrk/11/27)
* [ಮತ್ತಾಯ.21:23-24](rc://*/tn/help/mat/21/23)
## ಪದ ಡೇಟಾ:
* Strong's: H1419, H2205, H7868, G1087, G3187, G4244, G4245, G4850