kn_tw/bible/other/drunk.md

2.5 KiB

ಕುಡಿಯುವದು, ಕುಡುಕ

ಸತ್ಯಾಂಶಗಳು:

“ಕುಡಿಯುವುದು” ಎನ್ನುವ ಪದಕ್ಕೆ ಮದ್ಯಪಾನವನ್ನು ಹೆಚ್ಚಾಗಿ ಕುಡಿಯುವದರಿಂದ ಮಾದಕವಾಗುವುದನ್ನು ಸೂಚಿಸುತ್ತದೆ.

“ಕುಡುಕ” ಎನ್ನುವ ಪದವು ಪದೇ ಪದೇ ಹೆಚ್ಚಾಗಿ ಕುಡಿಯುವ ವ್ಯಕ್ತಿಯನ್ನು ಸೂಚಿಸುತ್ತದೆ. ಈ ರೀತಿಯ ವ್ಯಕ್ತಿಯನ್ನು “ಮದ್ಯಪಾನಿ” ಎಂದು ಸೂಚಿಸುತ್ತಾರೆ.

  • ಮದ್ಯಪಾನಿಯಗಳನ್ನು ಕುಡಿಯಬಾರದೆಂದು ಸತ್ಯವೇದವು ವಿಶ್ವಾಸಿಗಳಿಗೆ ಹೇಳುತ್ತದೆ, ಆದರೆ ದೇವರ ಪವಿತ್ರಾತ್ಮನಿಂದ ನಿಯಂತ್ರಿಸಲ್ಪಡಬೇಕೆಂದು ಹೇಳುತ್ತದೆ.
  • ಮದ್ಯಪಾನ ಸೇವನೆ ಮೂರ್ಖತನವೆಂದು ಮತ್ತು ಅದು ಇತರ ವಿಧಾನಗಳಲ್ಲಿ ಪಾಪ ಮಾಡುವುದಕ್ಕೆ ಒಬ್ಬ ವ್ಯಕ್ತಿಯನ್ನು ಪ್ರಭಾವಗೊಳಿಸುತ್ತದೆಯೆಂದು ಸತ್ಯವೇದವು ಬೋಧಿಸುತ್ತದೆ.
  • “ಕುಡಿದ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅಜಾಗರೂಕ” ಅಥವಾ “ಮಾದಕ ವ್ಯಕ್ತಿ” ಅಥವಾ “ಮದ್ಯಪಾನವನ್ನು ಹೆಚ್ಚಾಗಿ ಕುಡಿಯುವುದು” ಅಥವಾ “ಹುದುಗಿಸಿದ ಪಾನೀಯದೊಂದಿಗೆ ತುಂಬಿರುವುದು” ಎನ್ನುವ ಮಾತುಗಳನ್ನು ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದ್ರಾಕ್ಷಾರಸ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H5433, H7301, H7910, H7937, H7941, H7943, H8354, H8358, G3178, G3182, G3183, G3184, G3630, G3632