kn_tw/bible/other/dove.md

29 lines
3.4 KiB
Markdown

# ಪಾರಿವಾಳ, ಕಪೋತ
## ಪದದ ಅರ್ಥವಿವರಣೆ:
ಪಾರಿವಾಳಗಳು ಮತ್ತು ಕಪೋತಗಳು ಎರಡು ವಿಧವಾದ ಪಕ್ಷಿಗಳು, ಇವು ಒಂದೇ ರೀತಿಯಾಗಿದ್ದು ಬೂದು ಮತ್ತು ಕಂದು ಬಣ್ಣದಲ್ಲಿರುತ್ತವೆ. ಪಾರಿವಾಳ ಎನ್ನುವುದು ತಿಳಿ ಬಣ್ಣ, ಬಹುತೇಕ ಬಿಳಿ ಬಣ್ಣವನ್ನು ಹೊಂದಿರುತ್ತದೆ.
* ಕೆಲವೊಂದು ಭಾಷೆಗಳಲ್ಲಿ ಅವುಗಳಿಗೆ ಎರಡು ವಿಧವಾದ ಹೆಸರುಗಳಿರುತ್ತವೆ, ಇನ್ನೂ ಕೆಲವೊಂದು ಭಾಷೆಗಳಲ್ಲಿ ಎರಡಕ್ಕೂ ಒಂದೇ ಹೆಸರನ್ನಿಟ್ಟು ಕರೆಯುತ್ತಾರೆ.
* ಪಾರಿವಾಳಗಳು ಮತ್ತು ಕಪೋತಗಳು ದೇವರಿಗೆ ಬಲಿ ಕೊಡುವುದಕ್ಕೆ ಉಪಯೋಗಿಸುತ್ತಿದ್ದರು, ವಿಶೇಷವಾಗಿ ದೊಡ್ಡ ಹಸುಗಳನ್ನು ಕೊಂಡುಕೊಳ್ಳುವುದಕ್ಕಾಗದ ಜನರಿಗೆ ಈ ರೀತಿಯ ಕ್ರಮವು ಇದ್ದಿತ್ತು.
* ನೋಹನ ಕಾಲದಲ್ಲಿ ಬಂದ ಪ್ರಳಯದ ನೀರೆಲ್ಲಾ ಕಡಿಮೆಯಾದ ಮೇಲೆ ಪಾರಿವಾಳವು ಎಣ್ಣೆ ಮರದ ಹೊಸ ಚಿಗುರನ್ನು ತೆಗೆದುಕೊಂಡು ಬಂದಿತ್ತು.
* ಪಾರಿವಾಳಗಳು ಕೆಲವೊಂದುಬಾರಿ ಪವಿತ್ರತೆಗೆ, ನಿರ್ದೋಷಕ್ಕೆ ಅಥವಾ ಸಮಾಧಾನಕ್ಕೆ ಚಿಹ್ನೆಯಾಗಿರುತ್ತವೆ.
* ಅನುವಾದ ಮಾಡುವ ಸ್ಥಳೀಯ ಭಾಷೆಯಲ್ಲಿ ಪಾರಿವಾಳ ಅಥವಾ ಕಪೋತಗಳು ಗೊತ್ತಿಲ್ಲದಿದ್ದರೆ, ಈ ಪದವನ್ನು “ಪಾರಿವಾಳ ಎಂದು ಕರೆಯಲ್ಪಡುವ ಬೂದು ಬಣ್ಣದ ಚಿಕ್ಕ ಪಕ್ಷಿ” ಎಂದೂ ಅಥವಾ “ಚಿಕ್ಕ ಬೂದು ಅಥವಾ ಕಂದು ಬಣ್ಣದ ಪಕ್ಷಿ, ಇದು ಸ್ಥಳೀಯ ಪಕ್ಷಿಗೆ ಸಮಾಂತರ ಪಕ್ಷಿ” ಎಂದೂ ಅನುವಾದ ಮಾಡಬಹುದು.
* ಪಾರಿವಾಳ ಮತ್ತು ಕಪೋತಗಳೆರಡು ಒಂದೇ ವಚನದಲ್ಲಿ ಹೇಳಲ್ಪಟ್ಟಿವೆ, ಅವುಗಳಿಗೆ ಎರಡು ಹೆಸರುಗಳನ್ನು ಉಪಯೋಗಿಸುವುದು ಒಳ್ಳೇಯದು.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ಎಣ್ಣೆ ಮರ](../other/olive.md), [ನಿರ್ದೋಷ](../kt/innocent.md), [ಪವಿತ್ರತೆ](../kt/purify.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.08:8-9](rc://*/tn/help/gen/08/08)
* [ಲೂಕ.02:22-24](rc://*/tn/help/luk/02/22)
* [ಮಾರ್ಕ.01:9-11](rc://*/tn/help/mrk/01/09)
* [ಮತ್ತಾಯ.03:16-17](rc://*/tn/help/mat/03/16)
* [ಮತ್ತಾಯ.21:12-14](rc://*/tn/help/mat/21/12)
## ಪದ ಡೇಟಾ:
* Strong's: H1469, H1686, H3123, H8449, G4058