kn_tw/bible/other/donkey.md

27 lines
2.6 KiB
Markdown

# ಕತ್ತೆ, ಹೆಸರುಗತ್ತೆ
## ಪದದ ಅರ್ಥವಿವರಣೆ:
ಕತ್ತೆ ಎನ್ನುವುದು ನಾಲ್ಕು ಕಾಲುಗಳ ಪ್ರಾಣಿ, ಇದು ಕೆಲಸ ಮಾಡುವ ಪ್ರಾಣಿಯಾಗಿರುತ್ತದೆ. ಇದು ಕುದುರೆಯಂತೆ ಇರುತ್ತದೆ, ಆದರೆ ತುಂಬಾ ಚಿಕ್ಕದಾಗಿಯೂ ಮತ್ತು ಉದ್ದವಾದ ಕಿವಿಗಳನ್ನೊಳಗೊಂಡಿರುತ್ತದೆ.
* ಹೆಸರುಗತ್ತೆ ಗಂಡು ಕತ್ತೆ ಮತ್ತು ಹೆಣ್ಣು ಕುದುರೆಗೆ ಹುಟ್ಟಿದ ಬರಡಾದ ಸಂತತಿ.
* ಹೆಸರುಗತ್ತೆಗಳು ತುಂಬಾ ಬಲವಾದ ಪ್ರಾಣಿಗಳು ಮತ್ತು ಅವು ತುಂಬಾ ಬೆಲೆಯುಳ್ಳ ಕೆಲಸ ಮಾಡುವ ಪ್ರಾಣಿಗಳು.
* ಜನರು ಪ್ರಯಾಣ ಮಾಡುತ್ತಿರುವಾಗ ಭಾರವಾದ ವಸ್ತುಗಳನ್ನು ಹೊತ್ತಿಕೊಂಡು ಹೋಗುವುದಕ್ಕೆ ಕತ್ತೆಗಳನ್ನು ಮತ್ತು ಹೆಸರುಗತ್ತೆಗಳನ್ನು ಉಪಯೋಗಿಸುತ್ತಿದ್ದರು.
* ಸತ್ಯವೇದದ ಕಾಲದಲ್ಲಿ ಸಮಾಧಾನ ಸಮಯದಲ್ಲಿ ಅರಸರು ಯುದ್ಧದ ಸಮಯದಲ್ಲಿ ಉಪಯೋಗಿಸುವ ಕುದುರೆಯ ಮೇಲೆ ಏರುವುದರ ಬದಲಾಗಿ ಕತ್ತೆಯ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರು.
* ಯೇಸುವು ಶಿಲುಬೆಗೆ ಏರಿಸಲ್ಪಡುವ ಒಂದು ವಾರದ ಮುಂಚಿತವಾಗಿ ಒಂದು ಕತ್ತೆಯ ಮೇಲೆ ಕುಳಿತು ಯೆರೂಸಲೇಮಿನೊಳಗೆ ಬರುತ್ತಾನೆ.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.01:32-34](rc://*/tn/help/1ki/01/32)
* [1 ಸಮು.09:3-4](rc://*/tn/help/1sa/09/03)
* [2 ಅರಸ.04:21-22](rc://*/tn/help/2ki/04/21)
* [ಧರ್ಮೋ.05:12-14](rc://*/tn/help/deu/05/12)
* [ಲೂಕ.13:15-16](rc://*/tn/help/luk/13/15)
* [ಮತ್ತಾಯ.21:1-3](rc://*/tn/help/mat/21/01)
## ಪದ ಡೇಟಾ:
* Strong's: H860, H2543, H3222, H5895, H6167, H6501, H6505, H6506, H7409, G3678, G3688, G5268