kn_tw/bible/other/discernment.md

3.0 KiB

ವಿವೇಚಿಸು, ವಿವೇಚಿಸಲ್ಪಟ್ಟಿದೆ, ವಿವೇಚಿಸಲ್ಪಡುತ್ತಿದೆ, ವಿವೇಚನೆ

ಪದದ ಅರ್ಥವಿವರಣೆ:

“ವಿವೇಚಿಸು” ಎನ್ನುವ ಪದಕ್ಕೆ ಏನಾದರೊಂದು ವಿಷಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು ಎಂದರ್ಥ, ವಿಶೇಷವಾಗಿ ಏನಾದರೊಂದು ವಿಷಯವು ಸರಿಯೋ ಅಥವಾ ತಪ್ಪೋ ಎಂದೂ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು ಎಂದರ್ಥ.

  • “ವಿವೇಚಿಸಲ್ಪಡುತ್ತಿದೆ” ಎನ್ನುವ ಪದವು ಒಂದು ನಿರ್ಧಿಷ್ಠವಾದ ವಿಷಯದ ಕುರಿತಾಗಿ ಜ್ಞಾನವುಳ್ಳ ರೀತಿಯಲ್ಲಿ ನಿರ್ಣಯಿಸುವುದನ್ನು ಮತ್ತು ಅರ್ಥಮಾಡಿಕೊಳ್ಳುವುದನ್ನು ಸೂಚಿಸುತ್ತದೆ.
  • ಇದಕ್ಕೆ ಜ್ಞಾನವನ್ನು ಮತ್ತು ಒಳ್ಳೇಯ ತೀರ್ಪು ಮಾಡುವ ಶಕ್ತಿಯನ್ನು ಹೊಂದಿರುವುದು ಎಂದರ್ಥ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ವಿವೇಚಿಸು” ಎನ್ನುವ ಪದವನ್ನು “ಅರ್ಥಮಾಡಿಕೋ” ಅಥವಾ “ಅವುಗಳ ಮಧ್ಯೆದಲ್ಲಿರುವ ವ್ಯತ್ಯಾಸವನ್ನು ತಿಳಿ” ಅಥವಾ “ಒಳ್ಳೇಯದನ್ನು ಮತ್ತು ಕೆಟ್ಟದ್ದನ್ನು ತಿಳಿ” ಅಥವಾ “ಅದರ ಕುರಿತಾಗಿ ಸರಿಯಾಗಿ ತೀರ್ಪು ಮಾಡು” ಅಥವಾ “ಕೆಟ್ಟದ್ದರಿಂದ ಒಳ್ಳೇಯದನ್ನು ಗ್ರಹಿಸು” ಎಂದೂ ಅನುವಾದ ಮಾಡಬಹುದು.
  • “ವಿವೇಚಿಸಲ್ಪಡುತ್ತಿದೆ” ಎನ್ನುವ ಪದವನ್ನು “ಅರ್ಥಮಾಡಿಕೊಳ್ಳುವುದು” ಅಥವಾ “ಒಳ್ಳೇಯದನ್ನು ಮತ್ತು ಕೆಟ್ಟದ್ದನ್ನು ವ್ಯತ್ಯಾಸಗೊಳಿಸುವ ಸಾಮರ್ಥ್ಯ ಹೊಂದಿರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ತೀರ್ಪು, ಜ್ಞಾನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H995, H2940, H4209, H5234, H8085, G350, G1252, G1253, G1381, G2924