kn_tw/bible/other/desecrate.md

24 lines
2.7 KiB
Markdown

# ಹೊಲೆ, ಹೊಲೆಮಾಡಿದೆ, ಹೊಲೆ ಮಾಡುತ್ತಿದ್ದೇವೆ
## ಪದದ ಅರ್ಥವಿವರಣೆ:
“ಹೊಲೆ” ಎನ್ನುವ ಪದಕ್ಕೆ ಆರಾಧನೆಯಲ್ಲಿ ಉಪಯೋಗಿಸುವುದಕ್ಕೆ ಅಂಗೀಕೃತವಾಗದ ವಿಧಾನದಲ್ಲಿ ವಸ್ತುಗಳನ್ನಾಗಲಿ ಅಥವಾ ಪರಿಶುದ್ಧವಾದ ಸ್ಥಳವನ್ನು ಕಲುಷಿತಗೊಳಿಸುವುದಾಗಲಿ ಅಥವಾ ಹಾನಿ ಮಾಡುವುದಾಗಲಿ ಎಂದರ್ಥ.
* ಅನೇಕಬಾರಿ ಯಾವುದನ್ನಾದರು ಹೊಲೆ ಮಾಡುವುದರಲ್ಲಿ ಅದನ್ನು ಅತೀ ಹೆಚ್ಚಾಗಿ ಅವಮಾನಕ್ಕೆ ಗುರಿಮಾಡುವುದನ್ನು ಒಳಗೊಂಡಿರುತ್ತದೆ.
* ಉದಾಹರಣೆಗೆ, ಅನ್ಯ ಅರಸರು ತಾವು ತಮ್ಮ ಅರಮನೆಗಳಲ್ಲಿ ಔತಣ ಕೂಟಗಳಲ್ಲಿ ಉಪಯೋಗಿಸುವುದರ ಮೂಲಕ ದೇವರ ಆಲಯದಿಂದ ವಿಶೇಷವಾದ ಆಹಾರ ಪದಾರ್ಥಗಳನ್ನು ಹೊಲೆ ಮಾಡುತ್ತಿದ್ದರು.
* ದೇವರ ಆಲಯದಲ್ಲಿ ಯಜ್ಞವೇದಿಯನ್ನು ಹೊಲೆ ಮಾಡುವುದಕ್ಕೆ ಶತ್ರುಗಳು ಸತ್ತವರಿಂದ ತೆಗೆದ ಎಲುಬುಗಳನ್ನು ಉಪಯೋಗಿಸುತ್ತಿದ್ದರು.
* ಈ ಪದವನ್ನು “ಅಪರಿಶುದ್ಧವಾಗುವುದಕ್ಕೆ ಕಾರಣವಾಗು” ಅಥವಾ “ಅಪವಿತ್ರಗೊಳಿಸುವದರಿಂದ ಅವಮಾನ ಮಾಡು” ಅಥವಾ “ಅಗೌರವದಿಂದ ಅಶುದ್ಧ ಮಾಡುವುದು” ಅಥವಾ “ಅಪವಿತ್ರವಾಗುವುದಕ್ಕೆ ಕಾರಣವಾಗು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಯಜ್ಞವೇದಿ](../kt/altar.md), [ಮೈಲಿಗೆ](../other/defile.md), [ಅವಮಾನ](../other/dishonor.md), [ಅಶುದ್ಧ](../other/profane.md), [ಪವಿತ್ರ](../kt/purify.md), [ದೇವಾಲಯ](../kt/temple.md), [ಪರಿಶುದ್ಧ](../kt/holy.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.24:4-6](rc://*/tn/help/act/24/04)
* [ಯೆಶಯಾ.30:22](rc://*/tn/help/isa/30/22)
* [ಕೀರ್ತನೆ.074:7-8](rc://*/tn/help/psa/074/007)
* [ಕೀರ್ತನೆ.089:38-40](rc://*/tn/help/psa/089/038)
## ಪದ ಡೇಟಾ:
* Strong's: H2490, H2610, H2930, G953