kn_tw/bible/other/deliverer.md

6.4 KiB

ತಪ್ಪಿಸು, ಬಿಡುಗಡೆ ಮಾಡುವುದು, ಬಿಡುಗಡೆ ಮಾಡಲ್ಪಟ್ಟಿದೆ, ಬಿಡುಗಡೆ ಮಾಡಲ್ಪಡುತ್ತಿದೆ, ವಿಮೋಚಕನು, ವಿಮೋಚನೆ

ಪದದ ಅರ್ಥವಿವರಣೆ:

ಒಬ್ಬರನ್ನು “ತಪ್ಪಿಸು” ಎನ್ನುವದಕ್ಕೆ ಒಬ್ಬ ವ್ಯಕ್ತಿಯನ್ನು ರಕ್ಷಿಸುವುದು ಎಂದರ್ಥ. “ವಿಮೋಚಕ” ಎನ್ನುವ ಪದವು ದಾಸತ್ವದಿಂದ, ಒತ್ತಡದಿಂದ, ಅಥವಾ ಇತರ ಅಪಾಯಕರ ಸಂಘಟನೆಗಳಿಂದ ಜನರನ್ನು ಬಿಡುಗಡೆಗೊಳಿಸುವ ಅಥವಾ ಸಂರಕ್ಷಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. “ವಿಮೋಚನೆ” ಎನ್ನುವ ಪದವು ದಾಸತ್ವದಿಂದ, ಒತ್ತಡದಿಂದ, ಅಥವಾ ಇತರ ಅಪಾಯಕರ ಸಂಘಟನೆಗಳಿಂದ ಜನರನ್ನು ರಕ್ಷಿಸಿದಾಗ ಅಥವಾ ಬಿಡುಗಡೆಗೊಳಿಸಿದಾಗ ನಡೆಯುವ ಕಾರ್ಯವನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರ ಮೇಲೆ ಧಾಳಿ ಮಾಡುವದಕ್ಕೆ ಬಂದಿರುವ ಅನೇಕ ಜನರ ಗುಂಪುಗಳಿಗೆ ವಿರುದ್ಧವಾಗಿ ಯುದ್ದದಲ್ಲಿ ಇಸ್ರಾಯೇಲ್ಯರನ್ನು ನಡೆಸುವುದರಿಂದ ಅವರನ್ನು ಸಂರಕ್ಷಿಸುವುದಕ್ಕೆ ದೇವರು ವಿಮೋಚಕರನ್ನು ನೇಮಿಸಿದ್ದನು.
  • ಈ ವಿಮೋಚಕರೆಲ್ಲರನ್ನು “ನ್ಯಾಯಾಧೀಶರು” ಎಂದು ಕರೆಯುತ್ತಿದ್ದರು ಮತ್ತು ನ್ಯಾಯಾಧೀಶರು ಎನ್ನುವ ಹಳೇ ಒಡಂಬಡಿಕೆಯ ಪುಸ್ತಕದಲ್ಲಿ ನ್ಯಾಯಾಧೀಶರು ಇಸ್ರಾಯೇಲ್ಯರನ್ನು ಆಳಿದ ಚರಿತ್ರೆಯೆಲ್ಲವನ್ನು ದಾಖಲಿಸಿದ್ದಾರೆ.
  • ದೇವರು ಕೂಡ “ವಿಮೋಚಕನು” ಎಂದು ಕರೆಯಲ್ಪಟ್ಟಿದ್ದಾನೆ.” ಇಸ್ರಾಯೇಲ್ ಚರಿತ್ರೆಯಲ್ಲೆಲ್ಲಾ ಆತನು ಶತ್ರುಗಳಿಂದ ತನ್ನ ಜನರನ್ನು ಸಂರಕ್ಷಿಸಿದನು ಅಥವಾ ವಿಮೋಚಿಸಿದನು.
  • “ಬಿಡುಗಡೆಗೊಳಿಸು” ಅಥವಾ “ತಲುಪಿಸು” ಎನ್ನುವ ಮಾತು ಶತ್ರುವಿಗೆ ಯಾರಾದರೊಬ್ಬರನ್ನು ಒಪ್ಪಿಸಿಕೊಡುವುದೆನ್ನುವ ವಿಭಿನ್ನ ಅರ್ಥವು ಇರುತ್ತದೆ, ಉದಾಹರಣೆಗೆ, ಯೂದನು ಯೇಸುವನ್ನು ಯೆಹೂದ್ಯರ ನಾಯಕರಿಗೆ ಒಪ್ಪಿಸಿಕೊಟ್ಟನು.

ಅನುವಾದ ಸಲಹೆಗಳು:

ಜನರನ್ನು ತಮ್ಮ ಶತ್ರುಗಳಿಂದ ತಪ್ಪಿಸುವುದು ಎನ್ನುವ ಸಂದರ್ಭದಲ್ಲಿ, “ತಪ್ಪಿಸು” ಎನ್ನುವ ಪದವನ್ನು “ರಕ್ಷಿಸು” ಅಥವಾ “ಸ್ವಾತಂತ್ರ್ಯಗೊಳಿಸು” ಅಥವಾ “ಸಂರಕ್ಷಿಸು” ಎಂದೂ ಅನುವಾದ ಮಾಡಬಹುದು.

  • ಶತ್ರುಗಳಿಗೆ ಯಾರಾದರೊಬ್ಬರನ್ನು ಬಿಡುಗಡೆಗೊಳಿಸು ಎನ್ನುವ ಅರ್ಥದಲ್ಲಿ “ತಲುಪಿಸು” ಎನ್ನುವ ಪದಕ್ಕೆ “ದ್ರೋಹ ಮಾಡು” ಅಥವಾ “ಕೈಗೆ ಒಪ್ಪಿಸು” ಅಥವಾ “ಕೊಡು” ಎಂದೂ ಅನುವಾದ ಮಾಡಬಹದು.
  • “ವಿಮೋಚಕನು” ಎನ್ನುವ ಪದವನ್ನು “ಸಂರಕ್ಷಿಸುವಾತನು” ಅಥವಾ “ಸ್ವಾತಂತ್ರ್ಯಗೊಳಿಸುವಾತನು” ಎಂದೂ ಅನುವಾದ ಮಾಡಬಹುದು.
  • “ವಿಮೋಚಕನು” ಎನ್ನುವ ಪದವು ಇಸ್ರಾಯೇಲ್ಯರನ್ನು ನಡೆಸುವ ನ್ಯಾಯಾಧೀಶರನ್ನು ಸೂಚಿಸಿದಾಗ, ಈ ಪದವನ್ನು “ಪಾಲಕರು” ಅಥವಾ “ನ್ಯಾಯಾಧೀಶರು” ಅಥವಾ “ನಾಯಕನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನ್ಯಾಯಾಧೀಶರು, ರಕ್ಷಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 16:03 ದೇವರು ತಮ್ಮ ಶತ್ರುಗಳಿಂದ ರಕ್ಷಿಸುವುದಕ್ಕೆ ___ ವಿಮೋಚಕನನ್ನು ___ ಅನುಗ್ರಹಿಸಿದನು ಮತ್ತು ಅವರನ್ನು ಸಮಾಧಾನ ಭೂಮಿಗೆ ಕರೆದುಕೊಂಡುಬಂದನು.
  • 16:16 ಅವರು (ಇಸ್ರಾಯೇಲ್ಯರು) ಕೊನೆಗೆ ಸಹಾಯಕ್ಕಾಗಿ ದೇವರನ್ನು ಬೇಡಿಕೊಂಡರು, ಮತ್ತು ದೇವರು ಅವರಿಗೋಸ್ಕರ ಇನ್ನೊಬ್ಬ ___ ವಿಮೋಚಕನನ್ನು ___ ಕಳುಹಿಸಿದರು.
  • 16:17 ಅನೇಕ ವರ್ಷಗಳಾದನಂತರ, ದೇವರು ಶತ್ರುಗಳಿಂದ ಇಸ್ರಾಯೇಲ್ಯರನ್ನು ಬಿಡುಗಡೆಗೊಳಿಸಲು ಅನೇಕ ___ ವಿಮೋಚಕರನ್ನು ___ ಕಳುಹಿಸಿದರು.

ಪದ ಡೇಟಾ:

  • Strong's: H579, H1350, H2020, H2502, H3052, H3205, H3444, H3467, H4042, H4422, H4560, H4672, H5337, H5338, H5414, H5462, H6299, H6308, H6403, H6405, H6413, H6475, H6487, H6561, H7725, H7804, H8000, H8199, H8668, G325, G525, G629, G859, G1080, G1325, G1560, G1659, G1807, G1929, G2673, G3086, G3860, G4506, G4991, G5088, G5483