kn_tw/bible/other/darkness.md

5.0 KiB

ಕತ್ತಲು

ಪದದ ಅರ್ಥವಿವರಣೆ:

“ಕತ್ತಲು” ಎಂಬ ಪದವು ಅಕ್ಷರಶಃ ಬೆಳಕಿನ ಉಪಸ್ಥಿತಿಯನ್ನು ಎಂದು ಅರ್ಥೈಸುತ್ತದೆ. ಈ ಪದಕ್ಕೆ ಅನೇಕವಾದ ಅಲಂಕಾರಿಕ ಅರ್ಥಗಳಿರುತ್ತವೆ.

  • ಅಲಂಕಾರಿಕ ಭಾಷೆಯಲ್ಲಿ “ಕತ್ತಲು” ಎನ್ನುವ ಪದಕ್ಕೆ “ಅಪವಿತ್ರತೆ” ಅಥವಾ “ದುಷ್ಟ” ಅಥವಾ “ಆತ್ಮಿಕವಾದ ಕುರುಡುತನ” ಎಂದರ್ಥ.
  • ಈ ಪದವು ನೈತಿಕ ಭ್ರಷ್ಟತ್ವ ಮತ್ತು ಪಾಪಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸೂಚಿಸುತ್ತದೆ.
  • “ಕತ್ತಲಿನ ರಾಜ್ಯ” ಎನ್ನುವ ಮಾತು ಸೈತಾನಿನ ಆಳ್ವಿಕೆಯನ್ನು ಮತ್ತು ದುಷ್ಟತನಕ್ಕೆ ಸಂಬಂಧಪಟ್ಟ ಪ್ರತಿಯೊಂದನ್ನು ಸೂಚಿಸುತ್ತದೆ.
  • “ಕತ್ತಲು” ಎನ್ನುವ ಪದವನ್ನು ಅಲಂಕಾರಿಕ ಭಾಷೆಯಲ್ಲಿ ಮರಣಕ್ಕೂ ಉಪಯೋಗಿಸುತ್ತಾರೆ. (ನೋಡಿರಿ: ಅಲಂಕಾರ ರೂಪ)
  • ದೇವರನ್ನು ಅರಿಯದ ಜನರು “ಅಂಧಕಾರದಲ್ಲಿ ಜೀವಿಸುತ್ತಿದ್ದಾರೆ” ಎಂದು ಅವರ ಕುರಿತು ಹೇಳುತ್ತಾರೆ, ಇದಕ್ಕೆ ಅವರಿಗೆ ನೀತಿ ಅಂದರೇನು ಅಥವಾ ಅದನ್ನು ಯಾವರೀತಿ ಅಭ್ಯಾಸ ಮಾಡಬೇಕೆಂದು ತಿಳಿದಿರುವುದಿಲ್ಲ ಎಂದರ್ಥ.
  • ದೇವರು ಬೆಳಕಾಗಿದ್ದಾನೆ (ನೀತಿ) ಮತ್ತು ಕತ್ತಲು (ದುಷ್ಟತನ) ಎಂದಿಗೂ ಬೆಳಕನ್ನು ಜಯಿಸದು.
  • ದೇವರನ್ನು ತಿರಸ್ಕಾರ ಮಾಡಿದವರಿಗೆ ವಿಧಿಸುವ ಶಿಕ್ಷೆ ಸ್ಥಳವು ಕೆಲವೊಂದುಬಾರಿ “ಹೊರಗಿನ ಕತ್ತಲು” ಎಂದು ಸೂಚಿಸಲಾಗಿದೆ.

ಅನುವಾದ ಸಲಹೆಗಳು:

  • ಈ ಪದವನ್ನು ಅಕ್ಷರಾರ್ಥವಾಗಿ ಅನುವಾದ ಮಾಡುವುದು ಉತ್ತಮ, ಯೋಜನೆಯ ಭಾಷೆಯಲ್ಲಿ ಒಂದು ಪದದೊಂದಿಗೆ ಬೆಳಕಿಲ್ಲದ ಪದವನ್ನು ಸೂಚಿಸುವುದಾಗಿರಬೇಕು. ಈ ಪದವು ಕೋಣೆಯಲ್ಲಿ ಬೆಳಕು ಇಲ್ಲದಿರುವಾಗ ಉಂಟಾಗುವ ಕತ್ತಲನ್ನು ಸೂಚಿಸುತ್ತದೆ ಅಥವಾ ಹಗಲಿನ ಸಮಯದಲ್ಲಿ ಬೆಳಕು ಇಲ್ಲದಾಗ ಬರುವ ಮೊಬ್ಬನ್ನು ಸೂಚಿಸುತ್ತದೆ.
  • ಅಲಂಕಾರಿಕ ಉಪಯೋಗಗಳಲ್ಲಿ ಒಳ್ಳೆತನ ಮತ್ತು ಸತ್ಯ ಎನ್ನುವವುಗಳಿಗೆ ವಿರುದ್ಧವಾಗಿ ಮೋಸವನ್ನು ಮತ್ತು ದುಷ್ಟತನವನ್ನು ವಿವರಿಸುವ ವಿಧಾನದಲ್ಲಿ ಬೆಳಕಿಗೆ ವಿರುದ್ಧಾತ್ಮಕ ಪದವನ್ನಾಗಿ ಕತ್ತಲಿನ ಸ್ವರೂಪವನ್ನು ಇಡುವುದು ತುಂಬಾ ಪ್ರಾಮುಖ್ಯವಾದ ವಿಷಯ.
  • ಸಂದರ್ಭಾನುಗುಣವಾಗಿ ಈ ಪದವನ್ನು ಉಪಯೋಗಿಸುವ ವಿಧಾನಗಳಲ್ಲಿ “ರಾತ್ರಿಯ ಕತ್ತಲು” (ಹಗಲಿನ ಬೆಳಕಿಗೆ ವಿರುದ್ಧವಾಗಿ) ಅಥವಾ “ರಾತ್ರಿ ಸಮಯದಲ್ಲಿ ಏನೂ ಕಾಣದೇ ಇರುವುದು” ಅಥವಾ “ಕತ್ತಲಿನ ಹಾಗೆಯೇ ದುಷ್ಟತ್ವ” ಎನ್ನುವ ಮಾತುಗಳು ಇರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಭ್ರಷ್ಟ, ಅಧಿಕಾರ, ರಾಜ್ಯ, ಬೆಳಕು, ವಿಮೋಚನೆ, ನೀತಿ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H652, H653, H2816, H2821, H2822, H2825, H3990, H3991, H4285, H5890, H6205, G2217, G4652, G4653, G4655, G4656