2.0 KiB
2.0 KiB
ಪಾನಸೇವಕ, ಪಾನಸೇವಕರು
ಪದದ ಅರ್ಥವಿವರಣೆ
ಹಳೆ ಒಡಂಬಡಿಕೆಯ ಕಾಲದಲ್ಲಿ, ಅರಸನಿಗೆ ತನ್ನ ದ್ರಾಕ್ಷಾರಸದಲ್ಲಿ ವಿಷವಿಲ್ಲವೆಂದು ನೋಡಲು ಮೊದಲು ತಾನು ಕುಡಿದು, ನಂತರ ಅರಸನಿಗೆ ತನ್ನ ಪಾನವನ್ನು ಕೊಡುವ ಸೇವಕನನ್ನು “ಪಾನಸೇವಕ” ಎಂದು ಕರೆಯುತ್ತಿದ್ದರು.
- “ಪಾನವನ್ನು ತರುವವನು” ಅಥವಾ “ಯಾರು ಪಾನವನ್ನು ತರುವರೋ” ಎಂದು ಈ ಪದದ ಅಕ್ಷರಾರ್ಥವಾಗಿದೆ.
- ಪಾನಸೇವಕ ತನ್ನ ಅರಸನಿಗೆ ಬಹು ನಂಬಿಗಸ್ತನು ಮತ್ತು ನೀತಿವಂತನಾಗಿರುತ್ತಾನೆ.
- ನಂಬಿಗಸ್ತವಾದ ಸ್ಥಾನದಲ್ಲಿದ್ದ ಕಾರಣವಾಗಿ, ಅರಸನು ಮಾಡುವ ಅನೇಕ ತೀರ್ಮಾನ ವಿಷಯಗಳಲ ಮೇಲೆ ಅವನ ಪ್ರಭಾವವಿರುತ್ತದೆ.
- ಬಾಬೆಲೋನಿಯಲ್ಲಿ ಇಸ್ರಾಯೇಲ್ ಜನರು ಸೆರೆಹಿಡಿಯಲ್ಪಟ್ಟಿದ್ದ ಕಾಲದಲ್ಲಿ ನೆಹೆಮೀಯ ಪರ್ಷಿಯ ಅರಸನಾದ ಅರ್ತಷಸ್ತನ ಪಾನಸೇವಕನಾಗಿದ್ದನು.
(ಈ ಪದಗಳನ್ನು ಸಹ ನೋಡಿರಿ : ಅರ್ತಷಸ್ತನ, ಬಾಬೆಲೋನಿ, ಸೆರೆ, ಪರ್ಷಿಯ, ಫರೋಹನು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8248