kn_tw/bible/other/creature.md

2.9 KiB

ಜೀವಿ, ಸೃಷ್ಟಿ

ಪದದ ಅರ್ಥವಿವರಣೆ:

“ಜೀವಿ” ಎನ್ನುವ ಪದ ದೇವರು ಸೃಷ್ಟಿಸಿದ ಜೀವಂತವಾಗಿರುವ ಪ್ರತಿಯೊಂದನ್ನು ಸೂಚಿಸುತ್ತದೆ, ಅದರಲ್ಲಿ ಮನುಷ್ಯರು ಇರುತ್ತಾರೆ ಮತ್ತು ಪ್ರಾಣಿಗಳು ಇರುತ್ತವೆ.

  • ದೇವರ ಮಹಿಮೆಯಲ್ಲಿ “ಜೀವಂತವಾದ ಜೀವಿಗಳನ್ನು” ತನ್ನ ದರ್ಶನದಲ್ಲಿ ನೋಡಿದ್ದಾನೆಂದು ಪ್ರವಾದಿಯಾದ ಯೆಹೆಜ್ಕೇಲನು ವಿವರಿಸುತ್ತಿದ್ದಾನೆ. ಅವುಗಳು ಏನೆಂದು ಅವನಿಗೆ ತಿಳಿದಿರಲಿಲ್ಲ, ಆದಕಾರಣ ಅವುಗಳಿಗೆ ಅವನು ಈ ಸಾಮಾನ್ಯವಾದ ಹೆಸರು ಕೊಟ್ಟನು.
  • “ಸೃಷ್ಟಿ” ಎನ್ನುವ ಪದಕ್ಕೆ ಬೇರೊಂದು ಅರ್ಥವಿದೆ, ಯಾಕಂದರೆ ಅದರಲ್ಲಿ ದೇವರು ಸೃಷ್ಟಿಸಿದ ಜೀವಂತವಾಗಿರುವ ಮತ್ತು ನಿರ್ಜಿವವಾಗಿರುವ ಎಲ್ಲವು (ಉದಾಹರಣೆಗೆ ಭೂಮಿ, ನೀರು ಮತ್ತು ನಕ್ಷತ್ರಗಳು) ಒಳಗೊಂಡಿವೆ ಎಂದು ಗಮನಿಸಿರಿ. “ಜೀವಿ” ಎನ್ನುವ ಪದವು ಕೇವಲ ಜೀವಂತವಾಗಿರುವವುಗಳನ್ನು ಮಾತ್ರವೇ ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಸಂಧರ್ಭಾನುಸಾರವಾಗಿ, “ಜೀವಿ” ಎನ್ನುವ ಪದವನ್ನು “ಜೀವಿಸುವ” ಅಥವಾ “ಜೀವಂತವಾಗಿರುವ” ಅಥವಾ “ಸೃಷ್ಟಿಸಲ್ಪಟ್ಟ ಜೀವಿ” ಎಂದು ಅನುವಾದ ಮಾಡಬಹುದು.
  • “ಜೀವಿಗಳು” ಎನ್ನುವ ಪದವನ್ನು “ಜೀವಿಸುವ ಎಲ್ಲಾ ಪ್ರಾಣಿಗಳು” ಅಥವಾ “ಜನರು ಮತ್ತು ಪ್ರಾಣಿಗಳು” ಅಥವಾ “ಪ್ರಾಣಿಗಳು” ಅಥವಾ “ಮನುಷ್ಯರು” ಎಂದು ಅನುವಾದ ಮಾಡಬಹುದು.

(ಈ ಪದಗವನ್ನು ಸಹ ನೋಡಿರಿ : ಸೃಷ್ಟಿಸು)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H1320, H1321, H1870, H2119, H2416, H4639, H5315, H5971, H7430, H8318, G22260, G29370, G29380