kn_tw/bible/other/confidence.md

4.4 KiB

ನಿಶ್ಚಯತೆ, ನಿಶ್ಚಯ

ಪದದ ಅರ್ಥವಿವರಣೆ:

“ನಿಶ್ಚಯತೆ” ಎನ್ನುವ ಪದವು ಸತ್ಯವಾದ ವಿಷಯದಲ್ಲಿ ಅಥವಾ ನಡೆಯುವ ವಿಷಯಗಳಲ್ಲಿ ಖಚಿತವಾಗಿ ಇರುವುದನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ “ನಿರೀಕ್ಷೆ” ಎನ್ನುವ ಪದಕ್ಕೆ ಏನಾದರೊಂದು ವಿಷಯವು ಖಚಿತವಾಗಿ ನಡೆಯಬೇಕೆಂದು ಎದುರು ನೋಡುತ್ತಾ ತಾಳಿಕೊಳ್ಳುವುದು ಎಂದರ್ಥ. ವಿಶೇಷವಾಗಿ ಇದನ್ನು ಯೇಸುವಿನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗಳಿಗೆ ದೇವರು ವಾಗ್ಧಾನ ಮಾಡಿದ್ದನ್ನು ಖಚಿತವಾಗಿ ಪಡೆದುಕೊಳ್ಳುವ ವಿಷಯದಲ್ಲಿ ಯು ಎಲ್ ಟಿ “ನಿಶ್ಚಯತೆ” ಅಥವಾ “ಭವಿಷ್ಯತ್ತಿಗಾಗಿ ನಿಶ್ಚಯತೆ” ಅಥವಾ “ಭವಿಷ್ಯತ್ತಿನ ನಿಶ್ಚಯತೆ” ಎಂದು ಅನೇಕಬಾರಿ ಅನುವಾದ ಮಾಡಿದ್ದಾರೆ.
  • “ನಿಶ್ಚಯತೆ” ಎನ್ನುವ ಪದವನ್ನು ಅನೇಕಬಾರಿ ಯೇಸುವಿನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗಳು ಒಂದಾನೊಂದು ದಿನ ಪರಲೋಕದಲ್ಲಿ ದೇವರೊಂದಿಗೆ ಶಾಶ್ವತವಾಗಿ ಇರುತ್ತಾರೆ ಎನ್ನುವ ಅರ್ಥಕ್ಕೆ ಸೂಚಿಸುತ್ತದೆ.
  • “ದೇವರಲ್ಲಿ ವಿಶ್ವಾಸದಿಂದಿರು” ಎನ್ನುವ ಮಾತಿಗೆ ದೇವರು ಮಾಡಿದ ವಾಗ್ದಾನವನ್ನು ಸ್ವೀಕರಿಸಲು ಮತ್ತು ಅನುಭವಿಸಲು ಸಂಪೂರ್ಣವಾಗಿ ನಿರೀಕ್ಷಿಸುವುದನ್ನು ಸೂಚಿಸುತ್ತದೆ.
  • “ನಿಶ್ಚಯತೆಯಿಂದಿರುವುದು” ಎನ್ನುವ ಮಾತಿಗೆ ದೇವರ ವಾಗ್ಧಾನದಲ್ಲಿ ನಂಬಿಕೆಯಿಡುವುದು ಮತ್ತು ದೇವರು ಹೇಳಿದ ಮಾತನ್ನು ನೆರವೇರಿಸುತ್ತಾರೆನ್ನುವ ಭರವಸೆಯಿಂದ ಜೀವಿಸುವುದು ಎಂದರ್ಥ. ಈ ಪದಕ್ಕೆ ಧೈರ್ಯದಿಂದಿರುವುದು ಮತ್ತು ಖಚಿತವಾಗಿರುವುದು ಎಂಬ ಅರ್ಥವನ್ನು ಸಹ ಹೊಂದಿದೆ.

ಅನುವಾದ ಸಲಹೆಗಳು:

  • “ನಿಶ್ಚಯ” ಎನ್ನುವ ಪದವನ್ನು “ಖಚಿತವಾಗಿ” ಅಥವಾ “ಖಂಡಿತವಾಗಿ” ಎಂದೂ ಅನುವಾದ ಮಾಡಬಹುದು.
  • “ನಿಶ್ಚಯದಿಂದಿರು” ಎನ್ನುವ ಪದವನ್ನು “ಸಂಪೂರ್ಣವಾಗಿ ಭರವಸೆವಿಡು” ಅಥವಾ “ಅದರ ಕುರಿತಾಗಿ ಸಂಪೂರ್ಣ ಖಚಿತವನ್ನು ಹೊಂದಿಕೊ” ಅಥವಾ “ನಿಶ್ಚಯವಾಗಿ ತಿಳಿದುಕೊಳ್ಳಿರಿ” ಎಂದೂ ಅನುವಾದ ಮಾಡಬಹುದು.
  • “ಆತ್ಮವಿಶ್ವಾಸ” ಎಂಬ ಪದವನ್ನು “ಧೈರ್ಯವಾಗಿ” ಅಥವಾ “ಖಂಡಿತವಾಗಿ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ನಿಶ್ಚಯತೆ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ, “ಸಂಪೂರ್ಣವಾದ ಭರವಸೆ” ಅಥವಾ “ಖಂಡಿತವಾದ ನಿರೀಕ್ಷೆ” ಅಥವಾ “ಖಂಡಿತ” ಎನ್ನುವ ಪದಗಳೂ ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ನಂಬು, ನಂಬು, ಧೈರ್ಯ, ನಂಬಿಕೆ, ನಿರೀಕ್ಷೆ, ಭರವಸೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H982, H983, H986, H3689, H3690, H4009, G2292, G3954, G3982, G4006, G5287