kn_tw/bible/other/comfort.md

5.8 KiB

ಆದರಣೆ, ಆದರಿಸುತ್ತದೆ, ಆದರಿಸಲ್ಪಟ್ಟಿದೆ, ಆದರಿಸುವುದು, ಆದರಿಸುವಾತನು, ಆದರಿಸುವವರು, ಆದರಣೆ ಹೊಂದದವರು

ಪದದ ಅರ್ಥವಿವರಣೆ:

“ಆದರಣೆ” ಮತ್ತು “ಆದರಿಸುವವರು” ಎನ್ನುವ ಪದಗಳು ಮಾನಸಿಕವಾಗಿಯೂ ಅಥವಾ ಭೌತಿಕವಾಗಿಯೂ ಬಾಧೆಯನ್ನು ಮತ್ತು ನೋವನ್ನು ಅನುಭವಿಸುತ್ತಿರುವವರಿಗೆ ಸಹಾಯ ಮಾಡುವುದನ್ನು ಸೂಚಿಸುತ್ತವೆ.

  • ಒಬ್ಬ ವ್ಯಕ್ತಿ ಯಾರಾದರೊಬ್ಬರನ್ನು ಆದರಿಸಿದಾಗ ಆ ವ್ಯಕ್ತಿಯನ್ನು “ಆದರಿಸುವಾತನು” ಎಂದು ಕರೆಯುತ್ತಾರೆ.
  • ಹಳೇ ಒಡಂಬಡಿಕೆಯಲ್ಲಿ “ಆದರಣೆ” ಎನ್ನುವ ಪದವನ್ನು ದೇವರು ತನ್ನ ಜನರನ್ನು ಹೇಗೆ ಪ್ರೀತಿಸುತ್ತಿದ್ದನು ಮತ್ತು ಅವರ ಮೇಲೆ ಹೇಗೆ ದಯೆ ತೋರಿಸುತ್ತಿದ್ದನು ಮತ್ತು ಅವರು ಶ್ರಮೆಗಳಲ್ಲಿರುವಾಗ ಅವರಿಗೆ ಹೇಗೆ ಸಹಾಯ ಮಾಡುತ್ತಿದ್ದನು ಎನ್ನುವುದನ್ನು ವಿವರಿಸುವುದಕ್ಕೆ ಉಪಯೋಗಿಸುತ್ತಿದ್ದರು.
  • ಹೊಸ ಒಡಂಬಡಿಕೆಯಲ್ಲಿ ದೇವರು ಪವಿತ್ರಾತ್ಮನ ಮೂಲಕ ತನ್ನ ಜನರನ್ನು ಆದರಿಸುತ್ತಾನೆಂದು ಹೇಳಲ್ಪಟ್ಟಿದೆ. ಆದರಣೆ ಹೊಂದಿದ ಪ್ರತಿಯೊಬ್ಬರೂ ಶ್ರಮೆಗಳಲ್ಲಿರುವ ಜನರಿಗೂ ಅದೇ ರೀತಿಯ ಆದರಣೆಯನ್ನು ತೋರಿಸುವುದಕ್ಕೆ ಬಲವನ್ನು ಹೊಂದಿರುತ್ತಾರೆ.
  • “ಇಸ್ರಾಯೇಲನ್ನು ಆದರಿಸುವಾತನು” ಅನ್ನುವ ಮಾತು ತನ್ನ ಜನರನ್ನು ರಕ್ಷಿಸಿಕೊಳ್ಳುವುದಕ್ಕೆ ಬರುವ ಮೆಸ್ಸೀಯಾನನ್ನು ತೋರಿಸುತ್ತದೆ.
  • ಯೇಸುವಿನಲ್ಲಿ ನಂಬಿದ ಪ್ರತಿಯೊಬ್ಬರಿಗೆ ಸಹಾಯ ಮಾಡುವುದಕ್ಕೆ ಪವಿತ್ರಾತ್ಮನು “ಆದರಿಸುವಾತನನ್ನಾಗಿ” ಅಥವಾ “ಸಹಾಯಕನನ್ನಾಗಿ” ಯೇಸು ಸೂಚಿಸಿದ್ದಾರೆ.

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ತಕ್ಕಂತೆ, “ಆದರಣೆ” ಎನ್ನುವ ಪದವನ್ನು “ಬಾಧೆಯನ್ನು ಅಥವಾ ನೋವನ್ನು ಕಡಿಮೆ ಮಾಡು” ಅಥವಾ “ಪ್ರಲಾಪಿಸುವವರಿಗೆ ಸಹಾಯ ಮಾಡು” ಅಥವಾ “ಪ್ರೋತ್ಸಾಹ” ಅಥವಾ “ಸಾಂತ್ವನಪಡಿಸು” ಎಂದೂ ಅನುವಾದ ಮಾಡಬಹುದು.
  • “ನಮ್ಮ ಆದರಣೆ” ಎನ್ನುವ ಮಾತನ್ನು “ನಮ್ಮ ಪ್ರೋತ್ಸಾಹ” ಅಥವಾ “ಒಬ್ಬರಿಗೆ ನಮ್ಮ ಸಾಂತ್ವನ” ಅಥವಾ “ಪ್ರಲಾಪಿಸುವ ಸಮಯದಲ್ಲಿ ನಮ್ಮ ಸಹಾಯ” ಎಂದೂ ಅನುವಾದ ಮಾಡಬಹುದು.
  • “ಆದರಿಸುವಾತನು” ಎನ್ನುವ ಮಾತಿಗೆ “ಆದರಿಸುವ ವ್ಯಕ್ತಿ” ಅಥವಾ “ಬಾಧೆಯನ್ನು ಕಡಿಮ ಮಾಡುವುದಕ್ಕೆ ಸಹಾಯ ಮಾಡುವ ಒಬ್ಬ ವ್ಯಕ್ತಿ” ಅಥವಾ “ಪ್ರೋತ್ಸಾಹ ಮಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಪವಿತ್ರಾತ್ಮನು “ಆದರಿಸುವವನೆಂದು” ಕರೆಯಲ್ಪಟ್ಟಿರುವ ಪದವನ್ನೂ “ಪ್ರೋತ್ಸಾಹಕನು” ಅಥವಾ “ಸಹಾಯ ಮಾಡುವವನು” ಅಥವಾ “ಸಹಾಯ ಮಾಡುವ ಮತ್ತು ಮಾರ್ಗದರ್ಶನ ಕೊಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ಇಸ್ರಾಯೇಲ್ ಆದರಿಸುವಾತನು” ಎನ್ನುವ ಮಾತನ್ನು “ಇಸ್ರಾಯೇಲ್ ಜನಾಂಗವನ್ನು ಆದರಿಸುವ ಮೆಸ್ಸೀಯ” ಎಂದೂ ಅನುವಾದ ಮಾಡಬಹುದು.
  • “ಅವರಿಗೆ ಯಾವ ಸಹಾಯಕನೂ ಇಲ್ಲ ಅಥವಾ ಆದರಿಸುವವರು ಯಾರೂ ಇಲ್ಲ” ಎನ್ನುವ ಮಾತನ್ನು “ಅವರನ್ನು ಯಾರೂ ಆದರಿಸಿಲ್ಲ ಅಥವಾ ಅವರಿಗೆ ಯಾರೂ ಸಹಾಯ ಮಾಡಲಿಲ್ಲ” ಅಥವಾ “ಅವರಿಗೆ ಸಹಾಯ ಮಾಡುವುದಕ್ಕೆ ಯಾರೂ ಇಲ್ಲ ಅಥವಾ ಅವರನ್ನು ಪ್ರೋತ್ಸಾಹ ಮಾಡುವುದಕ್ಕೆ ಯಾರೂ ಇಲ್ಲ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪ್ರೋತ್ಸಾಹ, ಪವಿತ್ರಾತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2505, H5150, H5162, H5165, H5564, H8575, G302, G2174, G3870, G3874, G3875, G3888, G3890, G3931