kn_tw/bible/other/castout.md

30 lines
2.9 KiB
Markdown

# ಹೊರ ಹಾಕು, ಹೊರಗೆ ಎಸೆ, ಹೊರಗೆ ಬಿಸಾಡು
## ಪದದ ಅರ್ಥವಿವರಣೆ:
ಒಬ್ಬರನ್ನು ಅಥವಾ ಯಾವುದಾದರೊಂದನ್ನು “ಹೊರ ಹಾಕು” ಅಥವಾ “ಹೊರ ಎಸೆ” ಎನ್ನುವದಕ್ಕೆ ಒಬ್ಬ ವ್ಯಕ್ತಿಯನ್ನಾಗಲಿ ಅಥವಾ ಯಾವುದಾದರೊಂದು ವಸ್ತುವನ್ನಾಗಲಿ ಹೊರ ಹಾಕುವುದಕ್ಕೆ ಬಲವಂತಿಕೆ ಮಾಡುವುದು ಎಂದರ್ಥ.
* “ಹಾಕು” ಎನ್ನುವ ಪದಕ್ಕೆ “ಎಸೆ” ಎಂದು ಹೇಳುವ ಅರ್ಥವೇ ಇರುತ್ತದೆ. ಬಲೆಯನ್ನು ಹಾಕು ಎಂದರೆ ನೀರಿನೊಳಗೆ ಬಲೆಯನ್ನು ಎಸೆ ಎಂದರ್ಥ.
* ಅಲಂಕಾರ ಭಾವನೆಯಲ್ಲಿ ಒಬ್ಬರನ್ನು “ಹೊರ ಹಾಕು” ಅಥವಾ “ಹೊರ ಕಳುಹಿಸು” ಎನ್ನುವದಕ್ಕೆ ಆ ವ್ಯಕ್ತಿಯನ್ನು ಪಕ್ಕಕ್ಕೆ ಕಳುಹಿಸು ಮತ್ತು ಆ ವ್ಯಕ್ತಿಯನ್ನು ತಿರಸ್ಕರಿಸು ಎನ್ನುವ ಅರ್ಥವು ಬರುತ್ತದೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, ಇದನ್ನು ಇನ್ನೊಂದು ರೀತಿಯಲ್ಲಿ ಅನುವಾದ ಮಾಡುವುದಾದರೆ, “ಬಲವಂತ ಮಾಡು” ಅಥವಾ “ಪಕ್ಕಕ್ಕೆ ಕಳುಹಿಸು” ಅಥವಾ “ತೊಲಗಿಸು” ಎಂದು ಅನುವಾದ ಮಾಡಬಹುದು.
* “ದೆವ್ವಗಳನ್ನು ಹೊರ ಹಾಕು” ಎನ್ನುವ ಮಾತನ್ನು “ದೆವ್ವಗಳು ಬಿಟ್ಟು ಹೋಗುವಂತೆ ಮಾಡು” ಅಥವಾ “ದುಷ್ಟ ಆತ್ಮಗಳನ್ನು ಹೊರ ನಡೆಸು” ಅಥವಾ “ದೆವ್ವಗಳನ್ನು ಹೊರತಳ್ಳು” ಅಥವಾ “ಹೊರ ಬರುವುದಕ್ಕೆ ದೆವ್ವಗಳಿಗೆ ಆಜ್ಞಾಪಿಸು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ದೆವ್ವ](../kt/demon.md), [ದೆವ್ವ ಪೀಡಿತ](../kt/demonpossessed.md), [lots](../other/lots.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಅಪೊ.ಕೃತ್ಯ.07:17-19](rc://*/tn/help/act/07/17)
* [ಮಾರ್ಕ.03:13-16](rc://*/tn/help/mrk/03/13)
* [ಮಾರ್ಕ.09:29](rc://*/tn/help/mrk/09/29)
* [ಮತ್ತಾಯ.07:21-23](rc://*/tn/help/mat/07/21)
* [ಮತ್ತಾಯ.09:32-34](rc://*/tn/help/mat/09/32)
* [ಮತ್ತಾಯ.12:24](rc://*/tn/help/mat/12/24)
* [ಮತ್ತಾಯ.17:19-21](rc://*/tn/help/mat/17/19)
## ಪದ ಡೇಟಾ:
* Strong's: H1272, H1644, H1920, H3423, H7971, H7993, G1544