kn_tw/bible/other/bow.md

4.7 KiB
Raw Permalink Blame History

ನಮಸ್ಕರಿಸು, ಅಡ್ಡಬೀಳು, ಕಾಲೂರಿ ಅಡ್ಡ ಬಿದ್ದು, ಮೊಣಕಾಲೂರಿ

ಪದದ ಅರ್ಥವಿವರಣೆ:

ನಮಸ್ಕರಿಸು ಎಂದರೆ ಯಾರಾದರೊಬ್ಬರ ವಿಷಯದಲ್ಲಿ ಗೌರವವನ್ನು ವ್ಯಕ್ತಪಡಿಸುವುದಕ್ಕೆ ಮತ್ತು ಮರ್ಯಾದೆಯನ್ನು ಕೊಡುವುದಕ್ಕೆ ತಗ್ಗಿಸಿಕೊಂಡು ಬಾಗುವುದು ಎಂದರ್ಥ. “ಅಡ್ಡಬೀಳು” ಎನ್ನುವ ಪದಕ್ಕೆ ನೆಲದ ಮೇಲೆ ಮೊಣಕಾಲೂರಿ ತಲೆಯನ್ನು ಮತ್ತು ಕೈಗಳನ್ನಿಟ್ಟು ಬಾಗುವುದು ಎಂದರ್ಥ.

  • “ಮೊಣಕಾಲೂರಿ” (ಮೊಣಕಾಲೂರು) ಮತ್ತು “ತಲೆಯನ್ನು ಬಾಗಿಸು” ಎನ್ನುವ ಮಾತುಗಳು ಇದರಲ್ಲಿ ಒಳಗೊಂಡಿರುತ್ತವೆ (ತುಂಬಾ ದುಃಖದಲ್ಲಿ ಅಥವಾ ತಗ್ಗಿಸಿಕೊಂಡು ಗೌರವ ಕೊಡುವುದರಲ್ಲಿ ತಲೆಯನ್ನು ಬಾಗಿಸು ಎಂದರ್ಥವನ್ನು ಕೊಡುತ್ತದೆ).
  • ಅಡ್ಡಬೀಳುವುದೆನ್ನುವುದು ಕೆಲವೊಂದುಬಾರಿ ಪ್ರಲಾಪಿಸುವುದಕ್ಕೆ ಅಥವಾ ಯಾತನೆ ಅನುಭವಿಸುವುದಕ್ಕೆ ಗುರುತಾಗಿರುತ್ತದೆ. “ಕೆಳಗೆ ಅಡ್ಡಬಿದ್ದ” ವ್ಯಕ್ತಿ ದೀನತೆಯ ಅತೀ ಕಡಿಮೆ ಸ್ಥಾನಕ್ಕೆ ತೆಗೆದುಕೊಂಡುಬಂದಿರುತ್ತಾನೆ.
  • ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ರಾಜರು ಅಥವಾ ಉನ್ನತ ಸ್ಥಾನಮಾನದಲ್ಲಿನ ಆಡಳಿತಗಾರರೂ ಅಥವಾ ಪ್ರಾಮುಖ್ಯತ್ಯೆಯನ್ನು ಹೊಂದಿರುವ ಯಾರೊಬ್ಬರ ಸಮ್ಮುಖದಲ್ಲಿ ನಮಸ್ಕರಿಸುತ್ತಾನೆ.
  • ದೇವರ ಮುಂದೆ ನಮಸ್ಕರಿಸಿ ಬಾಗುವುದೆನ್ನುವುದು ಆತನನ್ನು ಆರಾಧಿಸುತ್ತಿದ್ದೇವೆನ್ನುವ ಭಾವವ್ಯಕ್ತೀಕರಣವಾಗಿರುತ್ತದೆ.
  • ಸತ್ಯವೇದದಲ್ಲಿ ಅನೇಕ ಜನರು ಯೇಸು ದೇವರ ಕಡೆಯಿಂದ ಬಂದ ವ್ಯಕ್ತಿಯೆಂದು ಆತನ ಬೋಧನೆ ಮತ್ತು ಅದ್ಭುತಗಳನ್ನು ನೋಡಿ ತಿಳಿದುಕೊಂಡಾಗ ಅವರೆಲ್ಲರು ಯೇಸುವಿಗೆ ನಮಸ್ಕರಿಸಿದ್ದಾರೆ.
  • ಒಂದಾನೊಂದು ದಿನ ಯೇಸು ಹಿಂದಿರುಗಿ ಬರುವಾಗ, ಪ್ರತಿಯೊಬ್ಬರೂ ಆತನನ್ನು ಆರಾಧಿಸುವುದಕ್ಕೆ ಮೊಣಕಾಲೂರುತ್ತಾನೆಂದು ಸತ್ಯವೇದವು ಹೇಳುತ್ತಿದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ ಈ ಪದವನ್ನು “ಮುಂದಕ್ಕೆ ಅಡ್ಡಬೀಳು” ಅಥವಾ “ತಲೆಯನ್ನು ಬಾಗಿಸು” ಅಥವಾ “ಮೊಣಕಾಲೂರು” ಎನ್ನುವ ಪದಗಳು ಅಥವಾ ಮಾತುಗಳೊಂದಿಗೆ ಅನುವಾದ ಮಾಡಬಹುದು.
  • “ಅಡ್ಡಬೀಳು” ಎನ್ನುವ ಪದವನ್ನು “ಕೆಳಗೆ ಮೊಣಕಾಲೂರು” ಅಥವಾ “ಸಾಷ್ಟಾಂಗ ನಮಸ್ಕರಿಸು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ ಈ ಪದವನ್ನು ಅನುವಾದಿಸುವ ಒಂದು ವಿಧಾನಕ್ಕಿಂತ ಹೆಚ್ಚಾದ ವಿಧಾನಗಳನ್ನು ಕೆಲವೊಂದು ಭಾಷೆಗಳು ಹೊಂದಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ತಗ್ಗಿಸಿಕೊ, ಆರಾಧನೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H86, H3721, H3766, H5753, H5791, H6915, H7743, H7812, H7817, G1120, G2578, G2827, G4098