kn_tw/bible/other/biblicaltimemonth.md

22 lines
3.4 KiB
Markdown

# ತಿಂಗಳು, ತಿಂಗಳುಗಳು, ಮಾಸಿಕ
## ಪದದ ಅರ್ಥವಿವರಣೆ
“ತಿಂಗಳು” ಎನ್ನುವ ಪದವು ನಾಲ್ಕು ವಾರಗಳ ಕಾಲವನ್ನು ಸೂಚಿಸುತ್ತದೆ. ಚಂದ್ರಮಾನ ದಿನಾಂಕ ಪಟ್ಟಿ ಅಥವಾ ಸೂರ್ಯನ ದಿನಾಂಕ ಪಟ್ಟಿ ಎನ್ನುವ ದಿನಾಂಕ ಪಟ್ಟಿಯಲ್ಲಿ ಯಾವುದನ್ನು ಉಪಯೋಗಿಸುತ್ತಿರುವರೋ ಅದರ ಪ್ರಕಾರ ಪ್ರತಿ ತಿಂಗಳಲ್ಲಿ ಇರುವ ದಿನಗಳು ನಿರ್ಣಯಿಸಲ್ಪಡುತ್ತವೆ.
* ಚಂದ್ರಮಾನ ದಿನಾಂಕ ಪಟ್ಟಿಯಲ್ಲಿ, ಭೂಮಿಯನ್ನು ಸುತ್ತುವದಕ್ಕೆ ಚಂದ್ರನು ತೆಗೆದುಕೊಳ್ಳುವ ಸಮಯದ ಅನುಸಾರವಾಗಿ ಪ್ರತಿ ತಿಂಗಳ ಕಾಲವನ್ನು ನಿರ್ಣಯಿಸುತ್ತಾರೆ, ಅದರಲ್ಲಿ ಸುಮಾರು 29 ದಿನಗಳಿರುತ್ತವೆ. ಈ ಪದ್ದತಿಯಲ್ಲಿ ಒಂದು ವರ್ಷಕ್ಕೆ 12 ಅಥವಾ 13 ತಿಂಗಳುಗಳಿರುತ್ತವೆ. ಒಂದು ವರ್ಷದಲ್ಲಿ 12 ಅಥವಾ 13 ತಿಂಗಳುಗಳಿದ್ದರು, ಅದು ಯಾವ ಕಾಲವೆಂದು ಸಂಬಂಧವಿಲ್ಲದೆ ಮೊದಲನೆಯ ತಿಂಗಳನ್ನು ಅದೇ ಹೆಸರಲ್ಲಿ ಕರೆಯುತ್ತಾರೆ.
* “ಅಮಾವಾಸ್ಯೆ” , ಅಥವಾ ಚಂದ್ರನ ಪ್ರಾರಂಭದ ಕಾಲದಲ್ಲಿ ಕಾಣುವ ಬೆಳ್ಳಿಯ ಗೆರೆಯ ಅನುಸಾರವಾಗಿ, ಚಾಂದ್ರಮಾನ ದಿನಾಂಕ ಪಟ್ಟಿಯಲ್ಲಿ ಪ್ರತಿ ತಿಂಗಳು ಪ್ರಾರಂಭವಾಗುತ್ತದೆ.
* ಸತ್ಯವೇದದಲ್ಲಿ ಹೇಳಲ್ಪಟ್ಟಿರುವ ತಿಂಗಳುಗಳು ಚಂದ್ರಮಾನ ದಿನಾಂಕ ಪಟ್ಟಿಯ ಅನುಸಾರವಾಗಿ ಇರುತ್ತವೆ, ಯಾಕಂದರೆ ಇಸ್ರಾಯೇಲರು ಆ ಪದ್ಧತಿಯನ್ನು ಉಪಯೋಗಿಸುತ್ತಿದ್ದರು. ಪ್ರಸ್ತುತ ಕಾಲದ ಯಹೂದಿಯರು ತಮ್ಮ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಈ ದಿನಾಂಕ ಪಟ್ಟಿಯನ್ನು ಉಪಯೋಗಿಸುತ್ತಿದ್ದಾರೆ.
* ಅಧುನಿಕ ದಿನದ ಸೂರ್ಯನ ದಿನಾಂಕ ಪಟ್ಟಿ ಸೂರ್ಯನ ಸುತ್ತಲು ಭೂಮಿ ಸುತ್ತುವ ಕಾಲದ ಅನುಸಾರವಾಗಿರುತ್ತದೆ (ಸುಮಾರು 365 ದಿನಗಳು). ಈ ಪದ್ಧತಿಯಲ್ಲಿ, ಒಂದು ವರ್ಷವನ್ನು 12 ತಿಂಗಳಂತೆ ವಿಭಜಿಸುತ್ತಾರೆ, ಪ್ರತಿ ತಿಂಗಳಲ್ಲಿ 28 ರಿಂದ 31 ದಿನಗಳು ಇರುತ್ತವೆ.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.20:32-34](rc://*/tn/help/1sa/20/32)
* [ಅಪೊ.ಕೃತ್ಯ.18:9-11](rc://*/tn/help/act/18/09)
* [ಇಬ್ರಿ.11:23-26](rc://*/tn/help/heb/11/23)
* [ಅರಣ್ಯ.10:10](rc://*/tn/help/num/10/10)
## ಪದ ಡೇಟಾ:
* Strong's: H2320, H3391, H3393, G3376