3.4 KiB
3.4 KiB
ತಿಂಗಳು, ತಿಂಗಳುಗಳು, ಮಾಸಿಕ
ಪದದ ಅರ್ಥವಿವರಣೆ
“ತಿಂಗಳು” ಎನ್ನುವ ಪದವು ನಾಲ್ಕು ವಾರಗಳ ಕಾಲವನ್ನು ಸೂಚಿಸುತ್ತದೆ. ಚಂದ್ರಮಾನ ದಿನಾಂಕ ಪಟ್ಟಿ ಅಥವಾ ಸೂರ್ಯನ ದಿನಾಂಕ ಪಟ್ಟಿ ಎನ್ನುವ ದಿನಾಂಕ ಪಟ್ಟಿಯಲ್ಲಿ ಯಾವುದನ್ನು ಉಪಯೋಗಿಸುತ್ತಿರುವರೋ ಅದರ ಪ್ರಕಾರ ಪ್ರತಿ ತಿಂಗಳಲ್ಲಿ ಇರುವ ದಿನಗಳು ನಿರ್ಣಯಿಸಲ್ಪಡುತ್ತವೆ.
- ಚಂದ್ರಮಾನ ದಿನಾಂಕ ಪಟ್ಟಿಯಲ್ಲಿ, ಭೂಮಿಯನ್ನು ಸುತ್ತುವದಕ್ಕೆ ಚಂದ್ರನು ತೆಗೆದುಕೊಳ್ಳುವ ಸಮಯದ ಅನುಸಾರವಾಗಿ ಪ್ರತಿ ತಿಂಗಳ ಕಾಲವನ್ನು ನಿರ್ಣಯಿಸುತ್ತಾರೆ, ಅದರಲ್ಲಿ ಸುಮಾರು 29 ದಿನಗಳಿರುತ್ತವೆ. ಈ ಪದ್ದತಿಯಲ್ಲಿ ಒಂದು ವರ್ಷಕ್ಕೆ 12 ಅಥವಾ 13 ತಿಂಗಳುಗಳಿರುತ್ತವೆ. ಒಂದು ವರ್ಷದಲ್ಲಿ 12 ಅಥವಾ 13 ತಿಂಗಳುಗಳಿದ್ದರು, ಅದು ಯಾವ ಕಾಲವೆಂದು ಸಂಬಂಧವಿಲ್ಲದೆ ಮೊದಲನೆಯ ತಿಂಗಳನ್ನು ಅದೇ ಹೆಸರಲ್ಲಿ ಕರೆಯುತ್ತಾರೆ.
- “ಅಮಾವಾಸ್ಯೆ” , ಅಥವಾ ಚಂದ್ರನ ಪ್ರಾರಂಭದ ಕಾಲದಲ್ಲಿ ಕಾಣುವ ಬೆಳ್ಳಿಯ ಗೆರೆಯ ಅನುಸಾರವಾಗಿ, ಚಾಂದ್ರಮಾನ ದಿನಾಂಕ ಪಟ್ಟಿಯಲ್ಲಿ ಪ್ರತಿ ತಿಂಗಳು ಪ್ರಾರಂಭವಾಗುತ್ತದೆ.
- ಸತ್ಯವೇದದಲ್ಲಿ ಹೇಳಲ್ಪಟ್ಟಿರುವ ತಿಂಗಳುಗಳು ಚಂದ್ರಮಾನ ದಿನಾಂಕ ಪಟ್ಟಿಯ ಅನುಸಾರವಾಗಿ ಇರುತ್ತವೆ, ಯಾಕಂದರೆ ಇಸ್ರಾಯೇಲರು ಆ ಪದ್ಧತಿಯನ್ನು ಉಪಯೋಗಿಸುತ್ತಿದ್ದರು. ಪ್ರಸ್ತುತ ಕಾಲದ ಯಹೂದಿಯರು ತಮ್ಮ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಈ ದಿನಾಂಕ ಪಟ್ಟಿಯನ್ನು ಉಪಯೋಗಿಸುತ್ತಿದ್ದಾರೆ.
- ಅಧುನಿಕ ದಿನದ ಸೂರ್ಯನ ದಿನಾಂಕ ಪಟ್ಟಿ ಸೂರ್ಯನ ಸುತ್ತಲು ಭೂಮಿ ಸುತ್ತುವ ಕಾಲದ ಅನುಸಾರವಾಗಿರುತ್ತದೆ (ಸುಮಾರು 365 ದಿನಗಳು). ಈ ಪದ್ಧತಿಯಲ್ಲಿ, ಒಂದು ವರ್ಷವನ್ನು 12 ತಿಂಗಳಂತೆ ವಿಭಜಿಸುತ್ತಾರೆ, ಪ್ರತಿ ತಿಂಗಳಲ್ಲಿ 28 ರಿಂದ 31 ದಿನಗಳು ಇರುತ್ತವೆ.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2320, H3391, H3393, G3376