kn_tw/bible/other/biblicaltimehour.md

24 lines
3.0 KiB
Markdown

# ಗಂಟೆ, ಗಂಟೆಗಳು
## ಪದದ ಅರ್ಥವಿವರಣೆ
ಒಂದು ಕಾರ್ಯವು ನಡೆದ ದಿನ ಕಾಲವನ್ನು ತಿಳಿಯಪಡಿಸಲು “ಗಂಟೆ” ಎನ್ನುವ ಪದವನ್ನು ಸತ್ಯವೇದದಲ್ಲಿ ಅನೇಕ ಬಾರಿ ಉಪಯೋಗಿಸಲ್ಪಟ್ಟಿದೆ. “ಸಮಯ” ಅಥವಾ “ಸಂಧ್ರಭವನ್ನು” ಸೂಚಿಸಲು ಅಲಂಕಾರ ರೂಪದಲ್ಲಿ ಅದು ಉಪಯೋಗಿಸಲ್ಪಟ್ಟಿದೆ.
* ಯಹೂದಿಯರು ದಿನದ ಕಾಲವನ್ನು ಸೂರ್ಯೋದಯದಿಂದ ಲೆಕ್ಕಿಸಿದರು (ಸುಮಾರು ಬೆಳಿಗ್ಗೆ 6 ಗಂಟೆ). ಉದಾಹರಣೆಗೆ, “ಒಂಬತ್ತನೇ ಗಳಿಗೆ” ಎಂದರೆ “ಮದ್ಯಾಹ್ನ 3 ಗಂಟೆ” ಎಂದರ್ಥ.
* ರಾತ್ರಿ ಕಾಲದ ವೇಳೆಯನ್ನು ಸೂರ್ಯಾಸ್ತ ಸಮಯದಿಂದ ಲೆಕ್ಕಿಸಿದರು (ಸುಮಾರು ಸಂಜೆ 6 ಗಂಟೆ). ಉದಾಹರಣೆಗೆ, “ರಾತ್ರಿ ಒಂಬತ್ತನೇ ಗಳಿಗೆ” ಎಂದರೆ ನಮ್ಮ ಪ್ರಸ್ತುತ ಕಾಲದ ಪ್ರಕಾರ “ರಾತ್ರಿ 9 ಗಂಟೆ” ಎಂದರ್ಥ.
* ಸತ್ಯವೇದ ಕಾಲ ಪ್ರಸ್ತುತ ಕಾಲದ ಸಮಯ ಪದ್ಧತಿಗೆ ನಿಖರವಾಗಿ ಸಂಬಂಧಿಸಿರುವದಿಲ್ಲ ಆದಕಾರಣ “ಸುಮಾರು ಒಂಭತ್ತು” ಅಥವಾ “ಸುಮಾರು ಆರು ಗಂಟೆ” ಎಂದು ಉಪಯೋಗಿಸಬಹುದು.
* ದಿನದ ಯಾವ ವೇಳೆಯನ್ನು ಸೂಚಿಸುತ್ತಿದ್ದಾರೆಂದು ಸ್ಪಷ್ಟಪಡಿಸಲು “ಸಂಜೆ” ಅಥವಾ “ಬೆಳಿಗ್ಗೆ” ಅಥವಾ “ಮದ್ಯಾಹ್ನ” ಎಂದು ಕೆಲವು ಅನುವಾದಕರು ಉಪಯೋಗಿಸುತ್ತಾರೆ.
* “ಆ ವೇಳೆಯಲ್ಲಿ” ಎನ್ನುವ ಮಾತಿಗೆ, “ಆ ಸಮಯದಲ್ಲಿ” ಅಥವಾ “ಆ ಸಂದರ್ಭದಲ್ಲಿ” ಎಂದು ಅನುವಾದಿಸಬಹುದು.
* ಯೇಸುವಿನ ಕುರಿತಾಗಿ ಸಂಬೋಧಿಸಿದಾಗ, “ಆತನ ಸಮಯವು ಹತ್ತಿರವಾಯಿತು” ಎನ್ನುವ ಭಾವಕ್ಕೆ “ಆತನು ಮಾಡಬೇಕಾದ ವೇಳೆ ಸಮೀಪವಾಗಿದೆ” ಅಥವಾ “ಆತನಿಗಾಗಿ ನಿರ್ಣಯಿಸಿದ ವೇಳೆ ಸಮೀಪವಾಯಿತು” ಎಂದು ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.02:14-15](rc://*/tn/help/act/02/14)
* [ಯೋಹಾನ.04:51-52](rc://*/tn/help/jhn/04/51)
* [ಲೂಕ.23:44-45](rc://*/tn/help/luk/23/44)
* [ಮತ್ತಾಯ.20:3-4](rc://*/tn/help/mat/20/03)
## ಪದ ಡೇಟಾ:
* Strong's: H8160, G5610