3.0 KiB
3.0 KiB
ಗಂಟೆ, ಗಂಟೆಗಳು
ಪದದ ಅರ್ಥವಿವರಣೆ
ಒಂದು ಕಾರ್ಯವು ನಡೆದ ದಿನ ಕಾಲವನ್ನು ತಿಳಿಯಪಡಿಸಲು “ಗಂಟೆ” ಎನ್ನುವ ಪದವನ್ನು ಸತ್ಯವೇದದಲ್ಲಿ ಅನೇಕ ಬಾರಿ ಉಪಯೋಗಿಸಲ್ಪಟ್ಟಿದೆ. “ಸಮಯ” ಅಥವಾ “ಸಂಧ್ರಭವನ್ನು” ಸೂಚಿಸಲು ಅಲಂಕಾರ ರೂಪದಲ್ಲಿ ಅದು ಉಪಯೋಗಿಸಲ್ಪಟ್ಟಿದೆ.
- ಯಹೂದಿಯರು ದಿನದ ಕಾಲವನ್ನು ಸೂರ್ಯೋದಯದಿಂದ ಲೆಕ್ಕಿಸಿದರು (ಸುಮಾರು ಬೆಳಿಗ್ಗೆ 6 ಗಂಟೆ). ಉದಾಹರಣೆಗೆ, “ಒಂಬತ್ತನೇ ಗಳಿಗೆ” ಎಂದರೆ “ಮದ್ಯಾಹ್ನ 3 ಗಂಟೆ” ಎಂದರ್ಥ.
- ರಾತ್ರಿ ಕಾಲದ ವೇಳೆಯನ್ನು ಸೂರ್ಯಾಸ್ತ ಸಮಯದಿಂದ ಲೆಕ್ಕಿಸಿದರು (ಸುಮಾರು ಸಂಜೆ 6 ಗಂಟೆ). ಉದಾಹರಣೆಗೆ, “ರಾತ್ರಿ ಒಂಬತ್ತನೇ ಗಳಿಗೆ” ಎಂದರೆ ನಮ್ಮ ಪ್ರಸ್ತುತ ಕಾಲದ ಪ್ರಕಾರ “ರಾತ್ರಿ 9 ಗಂಟೆ” ಎಂದರ್ಥ.
- ಸತ್ಯವೇದ ಕಾಲ ಪ್ರಸ್ತುತ ಕಾಲದ ಸಮಯ ಪದ್ಧತಿಗೆ ನಿಖರವಾಗಿ ಸಂಬಂಧಿಸಿರುವದಿಲ್ಲ ಆದಕಾರಣ “ಸುಮಾರು ಒಂಭತ್ತು” ಅಥವಾ “ಸುಮಾರು ಆರು ಗಂಟೆ” ಎಂದು ಉಪಯೋಗಿಸಬಹುದು.
- ದಿನದ ಯಾವ ವೇಳೆಯನ್ನು ಸೂಚಿಸುತ್ತಿದ್ದಾರೆಂದು ಸ್ಪಷ್ಟಪಡಿಸಲು “ಸಂಜೆ” ಅಥವಾ “ಬೆಳಿಗ್ಗೆ” ಅಥವಾ “ಮದ್ಯಾಹ್ನ” ಎಂದು ಕೆಲವು ಅನುವಾದಕರು ಉಪಯೋಗಿಸುತ್ತಾರೆ.
- “ಆ ವೇಳೆಯಲ್ಲಿ” ಎನ್ನುವ ಮಾತಿಗೆ, “ಆ ಸಮಯದಲ್ಲಿ” ಅಥವಾ “ಆ ಸಂದರ್ಭದಲ್ಲಿ” ಎಂದು ಅನುವಾದಿಸಬಹುದು.
- ಯೇಸುವಿನ ಕುರಿತಾಗಿ ಸಂಬೋಧಿಸಿದಾಗ, “ಆತನ ಸಮಯವು ಹತ್ತಿರವಾಯಿತು” ಎನ್ನುವ ಭಾವಕ್ಕೆ “ಆತನು ಮಾಡಬೇಕಾದ ವೇಳೆ ಸಮೀಪವಾಗಿದೆ” ಅಥವಾ “ಆತನಿಗಾಗಿ ನಿರ್ಣಯಿಸಿದ ವೇಳೆ ಸಮೀಪವಾಯಿತು” ಎಂದು ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8160, G5610