kn_tw/bible/other/bearanimal.md

19 lines
1.9 KiB
Markdown

# ಕರಡಿ, ಕರಡಿಗಳು
## ಪದದ ಅರ್ಥವಿವರಣೆ
ಕರಡಿ ನಾಲ್ಕು ಕಾಲುಗಳುಳ್ಳಾ ಭಯಾನಕವಾದ ಪ್ರಾಣಿ, ಅದು ಕಪ್ಪು ಅಥವಾ ಕಡು ಕಂದು ಬಣ್ಣದಲ್ಲಿರುತ್ತದೆ ಮತ್ತು ಚೂಪಾದ ಹಲ್ಲುಗಳು ಹಾಗೂ ಉಗುರುಗಳನ್ನು ಹೊಂದಿರುತ್ತದೆ. ಸತ್ಯವೇದದ ಕಾಲದಲ್ಲಿ ಕರಡಿಗಳು ಇಸ್ರಾಯೆಲ್ ದೇಶದಲ್ಲಿ ಸಹಜವಾಗಿ ವಾಸ ಮಾಡುತ್ತಿದ್ದವು.
* ಈ ಪ್ರಾಣಿಗಳು ಕಾಡಿನಲ್ಲಿ ಮತ್ತು ಬೆಟ್ಟ ಪ್ರಾಂತ್ಯಗಳಲ್ಲಿ ವಾಸ ಮಾಡುತ್ತವೆ; ಅವು ಮೀನುಗಳನ್ನು, ಕೀಟಗಳನ್ನು ಮತ್ತು ಸಸ್ಯಗಳನ್ನು ತಿನ್ನುತ್ತವೆ.
* ಹಳೆಯ ಒಡಂಬಡಿಕೆಯ ಕಾಲದಲ್ಲಿ, ಕರಡಿಯನ್ನು ಬಲದ ಸೂಚನೆಯಾಗಿ ಉಪಯೋಗಿಸುತ್ತಿದ್ದರು.
* ಕುರಿಗಳನ್ನು ಕಾಯುತ್ತಿರುವಾಗ, ಕುರುಬನಾದ ದಾವೀದನು ಕರಡಿಯೊಂದಿಗೆ ಹೋರಾಡಿ, ಅದನ್ನು ಸೋಲಿಸಿದನು.
* ಪ್ರವಾದಿಯಾದ ಎಲೀಷನನ್ನು ಯೌವ್ವನಸ್ತರು ಅಪಹಾಸ್ಯ ಮಾಡಿದಾಗ, ಕಾಡಿನಿಂದ ಎರಡು ಕರಡಿಗಳು ಬಂದು ಅವರ ಮೇಲೆ ದಾಳಿ ಮಾಡಿದವು.
(ಈ ಪದಗಳನ್ನು ಸಹ ನೋಡಿರಿ : [ದಾವಿದ](../names/david.md), [ಎಲೀಷ](../names/elisha.md))
## ಸತ್ಯವೇದದ ಅನುಬಂಧ ವಾಕ್ಯಗಳು :
## ಪದ ಡೇಟಾ:
* Strong's: H1677, G715