kn_tw/bible/other/armor.md

26 lines
3.1 KiB
Markdown

# ಕವಚ, ಶಸ್ತ್ರಾಸ್ತ್ರ
## ಪದದ ಅರ್ಥವಿವರಣೆ:
“ಕವಚ” ಎನ್ನುವ ಪದವು ಯುದ್ಧದಲ್ಲಿ ಹೋರಾಟ ಮಾಡುವುದಕ್ಕೆ ಸೈನಿಕನು ಉಪಯೋಗಿಸುವ ಮತ್ತು ಶತ್ರು ಧಾಳಿಯಿಂದ ತನ್ನನ್ನು ತಾನು ಸಂರಕ್ಷಿಸಿಕೊಳ್ಳುವುದಕ್ಕೆ ಉಪಯೋಗಿಸುವ ಉಪಕರಣವನ್ನು ಸೂಚಿಸುತ್ತದೆ. ಇದು ಆತ್ಮೀಯಕವಾದ ಕವಚವನ್ನು ಸೂಚಿಸುವುದಕ್ಕೆ ಅಲಂಕಾರ ಪದ್ಧತಿಯಲ್ಲಿಯೂ ಉಪಯೊಗಿಸುತ್ತಾರೆ.
* ಸೈನಿಕನ ಕವಚದ ಉಪಕರಣಗಳಲ್ಲಿ ಶಿರಸ್ತ್ರಾಣ, ಗುರಾಣಿ, ಎದೆಕವಚ, ಕಾಲು ಹೊದಿಕೆಗಳು, ಮತ್ತು ಖಡ್ಗ ಎನ್ನುವವುಗಳು ಇರುತ್ತವೆ.
* ಈ ಪದವನ್ನು ಅಲಂಕಾರವಾಗಿ ಉಪಯೋಗಿಸುತ್ತಾ, ಅಪೊಸ್ತಲನಾದ ಪೌಲನು ಭೌತಿಕವಾದ ಕವಚವನ್ನು ಅತ್ಮೀಕವಾಗಿ ಯುದ್ಧಗಳನ್ನು ಮಾಡುವುದಕ್ಕೆ ಒಬ್ಬ ವಿಶ್ವಾಸಿಗೆ ಸಹಾಯಕವಾಗುವುದಕ್ಕೆ ದೇವರು ಕೊಡುವ ಆತ್ಮೀಯಕವಾದ ಕವಚಕ್ಕೆ ಹೋಲಿಸುತ್ತಾ ಹೇಳಿದ್ದಾರೆ.
* ಸೈತಾನನಿಗೆ ಮತ್ತು ಪಾಪಕ್ಕೆ ವಿರುದ್ಧವಾಗಿ ಹೋರಾಟ ಮಾಡುವುದಕ್ಕೆ ದೇವರು ತನ್ನ ಜನರಿಗೆ ಕೊಡುವ ಆತ್ಮೀಯಕವಾದ ಕವಚದಲ್ಲಿ ಸತ್ಯವು, ನೀತಿ, ಸಮಾಧಾನ ಸುವಾರ್ತೆ, ನಂಬಿಕೆ, ರಕ್ಷಣೆ ಒಳಗೊಂಡಿರುತ್ತವೆ ಮತ್ತು ಪವಿತ್ರಾತ್ಮನು ಒಳಗೊಂಡಿರುತ್ತಾನೆ.
* ಈ ಪದವನ್ನು “ಸೈನಿಕನ ತಡೆಸಾಧನ” ಅಥವಾ “ಸಂರಕ್ಷಿಸುವ ಯುದ್ಧ ಬಟ್ಟೆಗಳು” ಅಥವಾ “ಸಂರಕ್ಷಣಾ ಕವಚ” ಅಥವಾ “ಯುದ್ಧ ಸಾಮಾಗ್ರಿಗಳು” ಎಂದು ಅರ್ಥಕೊಡುವ ಪದಗಳೊಂದಿಗೆ ಕೂಡ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಂಬಿಕೆ](../kt/faith.md), [ಪವಿತ್ರಾತ್ಮ](../kt/holyspirit.md), [ಸಮಾಧಾನ](../other/peace.md), [ರಕ್ಷಿಸು](../kt/save.md), [ಆತ್ಮ](../kt/spirit.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಸಮು.31:9-10](rc://*/tn/help/1sa/31/09)
* [2 ಸಮು.20:8](rc://*/tn/help/2sa/20/08)
* [ಎಫೆಸ.06:11](rc://*/tn/help/eph/06/11)
* [ಯೆರೆ.51:3-4](rc://*/tn/help/jer/51/03)
* [ಲೂಕ.11:22](rc://*/tn/help/luk/11/22)
* [ನೆಹೆ.04:15-16](rc://*/tn/help/neh/04/15)
## ಪದ ಡೇಟಾ:
* Strong's: H2290, H2488, H3627, H4055, H5402, G3696, G3833