kn_tw/bible/other/administration.md

3.8 KiB

ನಿರ್ವಹಣೆ, ಕಾರ್ಯನಿರ್ವಾಹಕ, ಆಡಳಿತ ಮಾಡುವವರು, ಅಧಿಕಾರಿ, ಅಧಿಕೃತವಾದ, ನಾಯಕ

ಸತ್ಯಾಂಶಗಳು:

“ನಿರ್ವಹಣೆ” ಮತ್ತು “ಕಾರ್ಯನಿರ್ವಾಹಕ” ಎನ್ನುವ ಪದಗಳನ್ನು ಒಂದು ಕ್ರಮಬದ್ಧವಾದ ರೀತಿಯಲ್ಲಿ ನಡೆಯಲು ಸಹಾಯ ಮಾಡುವುದಕ್ಕೆ ಒಂದು ದೇಶದ ಜನರನ್ನು ಆಡಳಿತ ಮಾಡುವುದಕ್ಕೆ ಅಥವಾ ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಉಪಯೋಗಿಸಲಾಗುತ್ತದೆ.

  • ದಾನಿಯೇಲನು ಮತ್ತು ಇತರ ಯೆಹೂದ್ಯರ ಮೂವರು ಯೌವನಸ್ಥರು ಕಾರ್ಯನಿರ್ವಹಿಸುವವರಾಗಿ ಆಯ್ಕೆ ಮಾಡಲ್ಪಟ್ಟಿದ್ದಾರೆ. ಅಥವಾ ಆ ಬಾಬೆಲೋನಿನ ಕೆಲವೊಂದು ಪ್ರಾಂತ್ಯಗಳ ಮೇಲೆ ಪ್ರಭುತ್ವದ ಅಧಿಕಾರಿಗಳಾಗಿ ನೇಮಿಸಲ್ಪಟ್ಟಿದ್ದಾರೆ.
  • ಹೊಸ ಒಡಂಬಡಿಕೆಯಲ್ಲಿ, ನಿರ್ವಹಿಸುವದೆನ್ನುವದು ಪವಿತ್ರಾತ್ಮನ ವರಗಳಲ್ಲಿ ಒಂದಾಗಿರುತ್ತದೆ.
  • ಕಟ್ಟಡಗಳ ಮತ್ತು ಆಸ್ಥಿಯ ನೋಡಿಕೊಳ್ಳುವ ಮೇಲ್ವೀಚಾರಕನಂತೆ, ನಿರ್ವಹಿಸುವದೆನ್ನುವ ಆತ್ಮೀಕ ವರವನ್ನು ಹೊಂದಿದ ಒಬ್ಬ ವ್ಯಕ್ತಿ ಜನರನ್ನು ನಡೆಸುವುದಕ್ಕೆ ಮತ್ತು ಆಳುವುದಕ್ಕೆ ಸಾಮರ್ಥ್ಯವನ್ನು ಹೊಂದಿರುತ್ತಾನೆ.

ಅನುವಾದ ಸಲಹೆಗಳು

  • ಸಂದರ್ಭಕ್ಕೆ ತಕ್ಕಂತೆ, “ಕಾರ್ಯ ನಿರ್ವಾಹಕರು” ಎನ್ನುವ ಪದವನ್ನು ಬೇರೊಂದು ರೀತಿಯಲ್ಲಿ ಅನುವಾದ ಮಾಡುತ್ತಾರೆ, ಅದರಲ್ಲಿ “ರಾಜ್ಯಪಾಲ” ಅಥವಾ “ಸಂಯೋಜಕರು” ಅಥವಾ “ವ್ಯವಸ್ಥಾಪಕ” ಅಥವಾ “ಪಾಲಕರು” ಅಥವಾ “ಸರ್ಕಾರ ಅಧಿಕಾರಿಗಳು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ನಿರ್ವಹಣೆ” ಎನ್ನುವ ಪದವನ್ನು “ಪಾಲಿಸುವುದು” ಅಥವಾ “ಆಡಳಿತ” ಅಥವಾ “ನಾಯಕತ್ವ” ಅಥವಾ “ಸಂಯೋಜನೆ” ಎಂಬುವುದಾಗಿಯೂ ಅನುವಾದ ಮಾಡಬಹುದು.
  • ಈ ಎಲ್ಲಾ ಪದಗಳ ಅನುವಾದನೆಯಲ್ಲಿ “ಉಸ್ತುವಾರಿ” ಅಥವಾ “ಆರೈಕೆಯನ್ನು ತೆಗೆದುಕೊಳ್ಳುವವರು” ಅಥವಾ “ಕ್ರಮ ವಹಿಸುವದು” ಎಂದು ಭಾವ ವ್ಯಕ್ತಗೊಳಿಸುವಂಥಹ ಪದಗಳು ಕೂಡ ಅದರಲ್ಲಿ ಭಾಗವಾಗಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ: /ಬಾಬೆಲ್, /ದಾನಿಯೇಲ, /ವರ, /ರಾಜ್ಯಪಾಲರು, /ಹನನ್ಯಾ, /ಮೀಶಾಯೇಲ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H5532, H5608, H5632, H6213, H7860, G29410