kn_tw/bible/kt/zion.md

24 lines
3.2 KiB
Markdown

# ಚೀಯೋನ್, ಚೀಯೋನ್ ಪರ್ವತ
## ಅರ್ಥವಿವರಣೆ:
ವಾಸ್ತವಿಕವಾಗಿ “ಚೀಯೋನ್” ಅಥವಾ “ಚೀಯೋನ್ ಪರ್ವತ” ಎನ್ನುವ ಪದವು ಯೆಬೂಸಿಯರಿಂದ ಅರಸನಾದ ದಾವೀದನು ವಶಪಡಿಸಿಕೊಂಡಿರುವ ಕೋಟೆ ಅಥವಾ ಬಲವಾದ ಬುರುಜನ್ನು ಸೂಚಿಸುತ್ತದೆ. ಈ ಎರಡು ಪದಗಳು ಯೆರೂಸಲೇಮ್ ಪಟ್ಟಣವನ್ನು ಸೂಚಿಸುತ್ತವೆ.
* ಚೀಯೋನ್ ಪರ್ವತವು ಮತ್ತು ಮೊರಿಯಾ ಬೆಟ್ಟವು ಯೆರೂಸಲೇಮ್ ಪಟ್ಟಣವಿರುವ ಸ್ಥಳದಲ್ಲಿ ಎರಡು ಬೆಟ್ಟಗಳಾಗಿರುತ್ತವೆ. ಸ್ವಲ್ಪ ಕಾಲವಾದನಂತರ “ಚೀಯೋನ್” ಮತ್ತು “ಚೀಯೋನ್ ಪರ್ವತ” ಎನ್ನುವ ಎರಡು ಪದಗಳು ಈ ಎರಡು ಬೆಟ್ಟಗಳನ್ನು ಮತ್ತು ಯೆರೂಸೇಲಮ್ ಪಟ್ಟಣವನ್ನು ಸೂಚಿಸುವುದಕ್ಕೆ ಸಾಧಾರಣವಾಗಿ ಉಪಯೋಗಿಸುತ್ತಿದ್ದರು. ಕೆಲವೊಂದುಬಾರಿ ಯೆರೂಸಲೇಮಿನಲ್ಲಿರುವ ದೇವಾಲಯವನ್ನು ಸೂಚಿಸುವುದಕ್ಕೂ ಉಪಯೋಗಿಸುತ್ತಿದ್ದರು. (ನೋಡಿರಿ: [ಲಾಕ್ಷಣಿಕ ಪ್ರಯೋಗ](rc://*/ta/man/translate/figs-metonymy))
* ದಾವೀದನು ಚೀಯೋನನ್ನು ಅಥವಾ ಯೆರೂಸಲೇಮನ್ನು “ದಾವೀದನ ನಗರ” ಎಂದು ಹೆಸರಿಟ್ಟನು. ಇದು ದಾವೀದನ ಸ್ವಂತ ಊರಾಗಿರುವ ಬೆತ್ಲೆಹೇಮಿಗೆ ಬೇರೆಯಾಗಿರುತ್ತದೆ, ಇದನ್ನೂ ದಾವೀದನ ನಗರ ಎಂದು ಕರೆಯುತ್ತಾರೆ.
* “ಚೀಯೋನ್” ಎನ್ನುವ ಪದವನ್ನು ಸಹಜವಾಗಿ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ, ಇದನ್ನು ಇಸ್ರಾಯೇಲ್ಯರನ್ನು ಅಥವಾ ದೇವರ ಆತ್ಮೀಯ ರಾಜ್ಯವನ್ನು ಅಥವಾ ದೇವರು ಸೃಷ್ಟಿಸುವ ಹೊಸ ಪರಲೋಕದ ಯೆರೂಸಲೇಮನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ.
(ಇವುಗಳನ್ನು ಸಹ ನೋಡಿರಿ : [ಅಬ್ರಾಹಾಮ](../names/abraham.md), [ದಾವೀದ](../names/david.md), [ಯೆರೂಸಲೇಮ್](../names/jerusalem.md), [ಬೆತ್ಲೆಹೇಮ್](../names/bethlehem.md), [ಯೆಬೂಸಿಯರು](../names/jebusites.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಪೂರ್ವ.11:5](rc://*/tn/help/1ch/11/05)
* [ಆಮೋಸ.1:2](rc://*/tn/help/amo/01/02)
* [ಯೆರೆ.51:35](rc://*/tn/help/jer/51/35)
* [ಕೀರ್ತನೆ.76:1-3](rc://*/tn/help/psa/076/001)
* [ರೋಮಾ.11:26](rc://*/tn/help/rom/11/26)
## ಪದದ ಡೇಟಾ:
* Strong's: H6726