3.2 KiB
3.2 KiB
ಚೀಯೋನ್, ಚೀಯೋನ್ ಪರ್ವತ
ಅರ್ಥವಿವರಣೆ:
ವಾಸ್ತವಿಕವಾಗಿ “ಚೀಯೋನ್” ಅಥವಾ “ಚೀಯೋನ್ ಪರ್ವತ” ಎನ್ನುವ ಪದವು ಯೆಬೂಸಿಯರಿಂದ ಅರಸನಾದ ದಾವೀದನು ವಶಪಡಿಸಿಕೊಂಡಿರುವ ಕೋಟೆ ಅಥವಾ ಬಲವಾದ ಬುರುಜನ್ನು ಸೂಚಿಸುತ್ತದೆ. ಈ ಎರಡು ಪದಗಳು ಯೆರೂಸಲೇಮ್ ಪಟ್ಟಣವನ್ನು ಸೂಚಿಸುತ್ತವೆ.
- ಚೀಯೋನ್ ಪರ್ವತವು ಮತ್ತು ಮೊರಿಯಾ ಬೆಟ್ಟವು ಯೆರೂಸಲೇಮ್ ಪಟ್ಟಣವಿರುವ ಸ್ಥಳದಲ್ಲಿ ಎರಡು ಬೆಟ್ಟಗಳಾಗಿರುತ್ತವೆ. ಸ್ವಲ್ಪ ಕಾಲವಾದನಂತರ “ಚೀಯೋನ್” ಮತ್ತು “ಚೀಯೋನ್ ಪರ್ವತ” ಎನ್ನುವ ಎರಡು ಪದಗಳು ಈ ಎರಡು ಬೆಟ್ಟಗಳನ್ನು ಮತ್ತು ಯೆರೂಸೇಲಮ್ ಪಟ್ಟಣವನ್ನು ಸೂಚಿಸುವುದಕ್ಕೆ ಸಾಧಾರಣವಾಗಿ ಉಪಯೋಗಿಸುತ್ತಿದ್ದರು. ಕೆಲವೊಂದುಬಾರಿ ಯೆರೂಸಲೇಮಿನಲ್ಲಿರುವ ದೇವಾಲಯವನ್ನು ಸೂಚಿಸುವುದಕ್ಕೂ ಉಪಯೋಗಿಸುತ್ತಿದ್ದರು. (ನೋಡಿರಿ: ಲಾಕ್ಷಣಿಕ ಪ್ರಯೋಗ)
- ದಾವೀದನು ಚೀಯೋನನ್ನು ಅಥವಾ ಯೆರೂಸಲೇಮನ್ನು “ದಾವೀದನ ನಗರ” ಎಂದು ಹೆಸರಿಟ್ಟನು. ಇದು ದಾವೀದನ ಸ್ವಂತ ಊರಾಗಿರುವ ಬೆತ್ಲೆಹೇಮಿಗೆ ಬೇರೆಯಾಗಿರುತ್ತದೆ, ಇದನ್ನೂ ದಾವೀದನ ನಗರ ಎಂದು ಕರೆಯುತ್ತಾರೆ.
- “ಚೀಯೋನ್” ಎನ್ನುವ ಪದವನ್ನು ಸಹಜವಾಗಿ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ, ಇದನ್ನು ಇಸ್ರಾಯೇಲ್ಯರನ್ನು ಅಥವಾ ದೇವರ ಆತ್ಮೀಯ ರಾಜ್ಯವನ್ನು ಅಥವಾ ದೇವರು ಸೃಷ್ಟಿಸುವ ಹೊಸ ಪರಲೋಕದ ಯೆರೂಸಲೇಮನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ.
(ಇವುಗಳನ್ನು ಸಹ ನೋಡಿರಿ : ಅಬ್ರಾಹಾಮ, ದಾವೀದ, ಯೆರೂಸಲೇಮ್, ಬೆತ್ಲೆಹೇಮ್, ಯೆಬೂಸಿಯರು)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ಡೇಟಾ:
- Strong's: H6726