kn_tw/bible/kt/test.md

40 lines
5.5 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ಪರೀಕ್ಷೆ, ಪರೀಕ್ಷಿಸಲಾಗಿದೆ, ಪರೀಕ್ಷಿಸು, ಬೆಂಕಿಯಿಂದ ಪರೀಕ್ಷಿಸು
## ಪದದ ಅರ್ಥವಿವರಣೆ:
“ಪರೀಕ್ಷೆ” ಎನ್ನುವ ಪದವು ಒಬ್ಬ ವ್ಯಕ್ತಿಯ ಬಲಗಳನ್ನು ಮತ್ತು ಬಲಹೀನತೆಗಳನ್ನು ಎತ್ತಿ ತೋರಿಸುವ ಕಷ್ಟವನ್ನು ಅಥವಾ ಬಾಧೆಯನ್ನು ತೋರಿಸುತ್ತದೆ.
* ದೇವರು ಜನರನ್ನು ಪರೀಕ್ಷಿಸುತ್ತಾರೆ, ಆದರೆ ಆತನು ಅವರು ಪಾಪ ಮಾಡುವಷ್ಟು ಪರೀಕ್ಷೆ ಮಾಡುವುದಿಲ್ಲ. ಏನೇಯಾಗಲಿ, ಸೈತಾನನು ಜನರು ಪಾಪ ಮಾಡುವಂತೆ ಶೋಧಿಸುತ್ತಾನೆ.
* ದೇವರು ಕೆಲವೊಂದುಬಾರಿ ಜನರ ಪಾಪವನ್ನು ತೋರಿಸುವುದಕ್ಕೆ ಪರೀಕ್ಷೆಗಳನ್ನು ಉಪಯೋಗಿಸುತ್ತಾನೆ. ಪರೀಕ್ಷೆಯು ಒಬ್ಬ ವ್ಯಕ್ತಿ ಪಾಪ ಮಾಡದಂತೆ ಮತ್ತು ದೇವರಿಗೆ ಅದರ ಮೂಲಕ ಹತ್ತಿರವಾಗುವಂತೆ ಸಹಾಯ ಮಾಡುತ್ತದೆ.
* ಬಂಗಾರ ಮತ್ತು ಇತರ ಲೋಹಗಳು ಎಷ್ಟರ ಮಟ್ಟಿಗೆ ಬೆಲೆಯುಳ್ಳವುಗಳೆಂದು ಮತ್ತು ಎಷ್ಟರಮಟ್ಟಿಗೆ ಗಟ್ಟಿಯಾದವುಗಳೆಂದು ಪರೀಕ್ಷಿಸಲಾಗಿದೆ. ಈ ಉದಾಹರಣೆಯಂತೆಯೇ, ದೇವರು ತನ್ನ ಜನರನ್ನು ಪರೀಕ್ಷಿಸುವುದಕ್ಕೆ ಅನೇಕ ಬಾಧೆಗಳಿರುವ ಕಠಿಣ ಪರಿಸ್ಥಿತಿಗಳನ್ನು ಅನುಮತಿಸುತ್ತಾರೆ.
* “ಪರೀಕ್ಷೆಗೆ ಇಡಲಾಗಿದೆ” ಎನ್ನುವ ಮಾತಿಗೆ “ಇದು ಬೆಲೆಯುಳ್ಳದ್ದೆಂದು ನಿರೂಪಿಸುವುದಕ್ಕೆ ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು ಸವಾಲ್ ಬೀಸುವುದು” ಎಂದರ್ಥ.
* ದೇವರನ್ನು ಪರೀಕ್ಷೆಗೆ ಇಡುವುದೆನ್ನುವ ಸಂದರ್ಭದಲ್ಲಿ, ಆತನು ನಮಗಾಗಿ ಯಾವುದಾದರೊಂದು ಅದ್ಭುತ ಮಾಡುವುದಕ್ಕೆ ಪ್ರಯತ್ನಿಸುವುದು, ಆತನ ಕರುಣೆಯನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸುಕೊಳ್ಳುವುದು ಎಂದರ್ಥವಾಗಿರುತ್ತದೆ.
* ದೇವರನ್ನು ಪರೀಕ್ಷೆ ಮಾಡುವುದು ತಪ್ಪು ಎಂದು ಯೇಸು ಸೈತಾನನಿಗೆ ಹೇಳಿದನು. ಆತನು ಪ್ರತಿಯೊಬ್ಬರ ಮೇಲೆ ಮತ್ತು ಪ್ರತಿಯೊಂದರ ಮೇಲೆ ಸರ್ವಶಕ್ತನು, ಪರಿಶುದ್ಧ ದೇವರು ಆಗಿದ್ದಾರೆ.
## ಅನುವಾದ ಸಲಹೆಗಳು:
* “ಪರೀಕ್ಷೆ” ಎನ್ನುವ ಪದವನ್ನು “ಸವಾಲು” ಅಥವಾ “ಕಷ್ಟಗಳನ್ನು ಅನುಭವಿಸುವುದಕ್ಕೆ ಕಾರಣವಾಗು” ಅಥವಾ “ನಿರೂಪಿಸು” ಎಂದೂ ಅನುವಾದ ಮಾಡಬಹುದು.
* “ಪರೀಕ್ಷೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಸವಾಲು” ಅಥವಾ “ಕಷ್ಟದ ಅನುಭವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಪರೀಕ್ಷೆಗೆ ನಿಲ್ಲಿಸು” ಎನ್ನುವ ಮಾತನ್ನು “ಶೋಧಿಸು” ಅಥವಾ “ಸವಾಲನ್ನು ಬೀಸು” ಎಂದೂ ಅನುವಾದ ಮಾಡಬಹುದು.
* ದೇವರನ್ನು ಪರೀಕ್ಷಿಸುವ ಸಂದರ್ಭದಲ್ಲಿ ಇದನ್ನು “ದೇವರ ಪ್ರೀತಿಯನ್ನು ನಿರೂಪಿಸುಕೊಳ್ಳುವುದಕ್ಕೆ ಆತನನ್ನು ಬಲವಂತಿಕೆ ಮಾಡುವುದಕ್ಕೆ ಯತ್ನಿಸುವುದು” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಸಂದರ್ಭಗಲ್ಲಿ ದೇವರ ವಿಷಯವೇ ಬರದಿರುವಾಗ, “ಪರೀಕ್ಷೆ” ಎನ್ನುವ ಪದಕ್ಕೆ “ಶೋಧಿಸು” ಎಂದರ್ಥವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಶೋಧಿಸು](../kt/tempt.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಯೋಹಾನ.04:01](rc://*/tn/help/1jn/04/01)
* [1 ಥೆಸ್ಸ.05:21](rc://*/tn/help/1th/05/21)
* [ಅಪೊ.ಕೃತ್ಯ.15:10](rc://*/tn/help/act/15/10)
* [ಆದಿ.22:01](rc://*/tn/help/gen/22/01)
* [ಯೆಶಯಾ.07:13](rc://*/tn/help/isa/07/13)
* [ಯಾಕೋಬ.01:12](rc://*/tn/help/jas/01/12)
* [ಪ್ರಲಾಪ.03:40-43](rc://*/tn/help/lam/03/40)
* [ಮಲಾಕಿ.03:10](rc://*/tn/help/mal/03/10)
* [ಫಿಲಿಪ್ಪಿ.01:10](rc://*/tn/help/php/01/10)
* [ಕೀರ್ತನೆ.026:02](rc://*/tn/help/psa/026/002)
## ಪದ ಡೇಟಾ:
* Strongs: H5254, H5713, H5715, H5749, H6030, H8584, G1242, G1263, G1303, G1382, G1957, G3140, G3141, G3142, G3143, G3984, G4303, G4451, G4828, G6020