kn_tw/bible/kt/soul.md

39 lines
4.0 KiB
Markdown

# ಪ್ರಾಣ, ಸ್ವಂತ
## ಪದದ ಅರ್ಥವಿವರಣೆ:
"ಪ್ರಾಣ" ಎನ್ನುವುದು ಒಬ್ಬ ವ್ಯಕ್ತಿಯಲ್ಲಿ ಅಂತಃರಂಗವು, ಕಾಣಿಸದಿರುವ ನಿತ್ಯತ್ವದ ಭಾಗವೂ ಆಗಿರುತ್ತದೆ. ಇದು ಒಬ್ಬ ವ್ಯಕ್ತಿಯ ಭೌತಿಕ ಭಾಗವಲ್ಲದ್ದನ್ನು ಸೂಚಿಸುತ್ತದೆ.
* “ಪ್ರಾಣ” ಮತ್ತು “ಆತ್ಮ” ಎನ್ನುವ ಪದಗಳು ಎರಡು ವಿಭಿನ್ನ ಪರಿಕಲ್ಪನೆಗಳಾಗಿರಬಹುದು, ಅಥವಾ ಅವು ಒಂದೇ ಪರಿಕಲ್ಪನೆಯನ್ನು ಸೂಚಿಸುವ ಎರಡು ಪದಗಳಾಗಿಯೂ ಇರಬಹುದು.
* ಒಬ್ಬ ವ್ಯಕ್ತಿ ಸತ್ತಾಗ, ತನ್ನ ಪ್ರಾಣವು ತನ್ನ ಶರೀರವನ್ನು ಬಿಟ್ಟುಹೋಗುವುದು.
* “ಪ್ರಾಣ” ಎನ್ನುವ ಪದವು ಕೆಲವೊಂದು ಬಾರಿ ಸಂಪೂರ್ಣ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿಯೂ ಉಪಯೋಗಿಸಲ್ಪಟ್ಟಿರುತ್ತದೆ. ಉದಾಹರಣೆಗೆ, “ಪಾಪಗಳನ್ನು ಮಾಡುವ ಪ್ರಾಣ” ಎನ್ನುವ ಮಾತಿಗೆ “ಪಾಪಗಳನ್ನು ಮಾಡುವ ವ್ಯಕ್ತಿ” ಎಂದರ್ಥ ಮತ್ತು “ನನ್ನ ಪ್ರಾಣವು ನೊಂದಿದೆ” ಎನ್ನುವ ಮಾತಿಗೆ “ನಾನು ದಣಿದಿದ್ದೇನೆ” ಎಂದರ್ಥವಾಗಿರುತ್ತದೆ.
## ಅನುವಾದ ಸಲಹೆಗಳು:
* “ಪ್ರಾಣ” ಎನ್ನುವ ಪದವನ್ನು “ಅಂತಃರಂಗ” ಅಥವಾ “ಅಂತಃರಂಗದಲ್ಲಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಸಂದರ್ಭಗಳಲ್ಲಿ “ನನ್ನ ಪ್ರಾಣ” ಎನ್ನುವ ಮಾತನ್ನು “ನಾನು” ಅಥವಾ “ನಾನೇ” ಎಂದೂ ಅನುವಾದ ಮಾಡಬಹುದು.
* “ಪ್ರಾಣ” ಎನ್ನುವ ಪದವನ್ನು ಸಹಜವಾಗಿ “ವ್ಯಕ್ತಿ” ಅಥವಾ “ಅವನು” ಅಥವಾ “ಆತನು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಲಾಗುತ್ತದೆ.
* ಕೆಲವೊಂದು ಭಾಷೆಗಳಲ್ಲಿ “ಪ್ರಾಣ” ಮತ್ತು “ಆತ್ಮ” ಎನ್ನುವ ಪರಿಕಲ್ಪನೆಗಳಿಗೆ ಒಂದೇ ಪದವನ್ನು ಹೊಂದಿರಬಹುದು.
* ಇಬ್ರಿ.4:12ನೇ ವಾಕ್ಯದಲ್ಲಿ “ಪ್ರಾಣ ಮತ್ತು ಆತ್ಮವನ್ನು ವಿಭಜಿಸುತ್ತಾ” ಎನ್ನುವ ಅಲಂಕಾರಿಕ ಮಾತಿಗೆ “ಆಳವಾಗಿ ವಿವೇಚಿಸುವುದು ಅಥವಾ ಅಂತಃರಂಗ ವ್ಯಕ್ತಿಯನ್ನು ತೋರಿಸುವುದು” ಎಂದರ್ಥವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಆತ್ಮ](../kt/spirit.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [2 ಪೇತ್ರ.02:08](rc://*/tn/help/2pe/02/08)
* [ಅಪೊ.ಕೃತ್ಯ.02:27-28](rc://*/tn/help/act/02/27)
* [ಅಪೊ.ಕೃತ್ಯ.02:41](rc://*/tn/help/act/02/41)
* [ಆದಿ.49:06](rc://*/tn/help/gen/49/06)
* [ಯೆಶಯ.53:10-11](rc://*/tn/help/isa/53/10)
* [ಯಾಕೋಬ.01:21](rc://*/tn/help/jas/01/21)
* [ಯೆರೆ.06:16-19](rc://*/tn/help/jer/06/16)
* [ಯೋನ.02:7-8](rc://*/tn/help/jon/02/07)
* [ಲೂಕ.01:47](rc://*/tn/help/luk/01/47)
* [ಮತ್ತಾಯ.22:37](rc://*/tn/help/mat/22/37)
* [ಕೀರ್ತನೆ.019:07](rc://*/tn/help/psa/019/007)
* [ಪ್ರಕ.20:4](rc://*/tn/help/rev/20/04)
## ಪದ ಡೇಟಾ:
* Strong's: H5082, H5315, H5397, G5590