4.0 KiB
4.0 KiB
ಪ್ರಾಣ, ಸ್ವಂತ
ಪದದ ಅರ್ಥವಿವರಣೆ:
"ಪ್ರಾಣ" ಎನ್ನುವುದು ಒಬ್ಬ ವ್ಯಕ್ತಿಯಲ್ಲಿ ಅಂತಃರಂಗವು, ಕಾಣಿಸದಿರುವ ನಿತ್ಯತ್ವದ ಭಾಗವೂ ಆಗಿರುತ್ತದೆ. ಇದು ಒಬ್ಬ ವ್ಯಕ್ತಿಯ ಭೌತಿಕ ಭಾಗವಲ್ಲದ್ದನ್ನು ಸೂಚಿಸುತ್ತದೆ.
- “ಪ್ರಾಣ” ಮತ್ತು “ಆತ್ಮ” ಎನ್ನುವ ಪದಗಳು ಎರಡು ವಿಭಿನ್ನ ಪರಿಕಲ್ಪನೆಗಳಾಗಿರಬಹುದು, ಅಥವಾ ಅವು ಒಂದೇ ಪರಿಕಲ್ಪನೆಯನ್ನು ಸೂಚಿಸುವ ಎರಡು ಪದಗಳಾಗಿಯೂ ಇರಬಹುದು.
- ಒಬ್ಬ ವ್ಯಕ್ತಿ ಸತ್ತಾಗ, ತನ್ನ ಪ್ರಾಣವು ತನ್ನ ಶರೀರವನ್ನು ಬಿಟ್ಟುಹೋಗುವುದು.
- “ಪ್ರಾಣ” ಎನ್ನುವ ಪದವು ಕೆಲವೊಂದು ಬಾರಿ ಸಂಪೂರ್ಣ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿಯೂ ಉಪಯೋಗಿಸಲ್ಪಟ್ಟಿರುತ್ತದೆ. ಉದಾಹರಣೆಗೆ, “ಪಾಪಗಳನ್ನು ಮಾಡುವ ಪ್ರಾಣ” ಎನ್ನುವ ಮಾತಿಗೆ “ಪಾಪಗಳನ್ನು ಮಾಡುವ ವ್ಯಕ್ತಿ” ಎಂದರ್ಥ ಮತ್ತು “ನನ್ನ ಪ್ರಾಣವು ನೊಂದಿದೆ” ಎನ್ನುವ ಮಾತಿಗೆ “ನಾನು ದಣಿದಿದ್ದೇನೆ” ಎಂದರ್ಥವಾಗಿರುತ್ತದೆ.
ಅನುವಾದ ಸಲಹೆಗಳು:
- “ಪ್ರಾಣ” ಎನ್ನುವ ಪದವನ್ನು “ಅಂತಃರಂಗ” ಅಥವಾ “ಅಂತಃರಂಗದಲ್ಲಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
- ಕೆಲವೊಂದು ಸಂದರ್ಭಗಳಲ್ಲಿ “ನನ್ನ ಪ್ರಾಣ” ಎನ್ನುವ ಮಾತನ್ನು “ನಾನು” ಅಥವಾ “ನಾನೇ” ಎಂದೂ ಅನುವಾದ ಮಾಡಬಹುದು.
- “ಪ್ರಾಣ” ಎನ್ನುವ ಪದವನ್ನು ಸಹಜವಾಗಿ “ವ್ಯಕ್ತಿ” ಅಥವಾ “ಅವನು” ಅಥವಾ “ಆತನು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಲಾಗುತ್ತದೆ.
- ಕೆಲವೊಂದು ಭಾಷೆಗಳಲ್ಲಿ “ಪ್ರಾಣ” ಮತ್ತು “ಆತ್ಮ” ಎನ್ನುವ ಪರಿಕಲ್ಪನೆಗಳಿಗೆ ಒಂದೇ ಪದವನ್ನು ಹೊಂದಿರಬಹುದು.
- ಇಬ್ರಿ.4:12ನೇ ವಾಕ್ಯದಲ್ಲಿ “ಪ್ರಾಣ ಮತ್ತು ಆತ್ಮವನ್ನು ವಿಭಜಿಸುತ್ತಾ” ಎನ್ನುವ ಅಲಂಕಾರಿಕ ಮಾತಿಗೆ “ಆಳವಾಗಿ ವಿವೇಚಿಸುವುದು ಅಥವಾ ಅಂತಃರಂಗ ವ್ಯಕ್ತಿಯನ್ನು ತೋರಿಸುವುದು” ಎಂದರ್ಥವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಆತ್ಮ)
ಸತ್ಯವೇದದ ಅನುಬಂಧ ವಾಕ್ಯಗಳು:
- 2 ಪೇತ್ರ.02:08
- ಅಪೊ.ಕೃತ್ಯ.02:27-28
- ಅಪೊ.ಕೃತ್ಯ.02:41
- ಆದಿ.49:06
- ಯೆಶಯ.53:10-11
- ಯಾಕೋಬ.01:21
- ಯೆರೆ.06:16-19
- ಯೋನ.02:7-8
- ಲೂಕ.01:47
- ಮತ್ತಾಯ.22:37
- ಕೀರ್ತನೆ.019:07
- ಪ್ರಕ.20:4
ಪದ ಡೇಟಾ:
- Strong's: H5082, H5315, H5397, G5590