kn_tw/bible/kt/sign.md

41 lines
5.9 KiB
Markdown

# ಗುರುತು, ಗುರುತುಗಳು, ನಿರೂಪಣೆ, ಜ್ಞಾಪನೆ
## ಪದದ ಅರ್ಥವಿವರಣೆ:
ಗುರುತು ಎನ್ನುವುದು ಒಂದು ವಿಶೇಷವಾದ ಅರ್ಥವನ್ನು ನೀಡುವ ಉದ್ದೇಶವು, ಸಂಘಟನೆ, ಅಥವಾ ಕ್ರಿಯೆಯಾಗಿರುತ್ತದೆ.
* “ಗುರುತು” ಎಂಬ ಪದವು ಸಾಮಾನ್ಯವಾಗಿ ವಿಶೇಷ ಅರ್ಥವನ್ನು ತಿಳಿಸುವ ವಸ್ತು, ಘಟನೆ ಮತ್ತು ಕ್ರೀಯೆಯನ್ನು ಸೂಚಿಸುತ್ತದೆ. .
* ಆಕಾಶದಲ್ಲಿ ದೇವರು ಉಂಟುಮಾಡಿದ ಕಾಮನಬಿಲ್ಲುಗಳು ಪ್ರಚಂಚದಾದ್ಯಂತ ಪ್ರಳಯವನ್ನು ಬರಮಾಡುವುದರ ಮೂಲಕ ಎಲ್ಲಾ ಮನುಷ್ಯರನ್ನು ನಾಶಮಾಡುವುದಿಲ್ಲವೆಂದು ದೇವರು ಮಾಡಿದ ವಾಗ್ಧಾನವನ್ನು ಜನರಿಗೆ ನೆನಪು ಮಾಡುವ ಗುರುತುಗಳಾಗಿರುತ್ತವೆ.
* ಇಸ್ರಾಯೇಲ್ಯರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆಂದು ಹೇಳುವುದಕ್ಕೆ ಗುರುತಾಗಿರಲು ಅವರ ಮಕ್ಕಳಿಗೆ ಸುನ್ನತಿಯನ್ನು ಮಾಡಬೇಕೆಂದು ದೇವರು ಅವರಿಗೆ ಆಜ್ಞಾಪಿಸಿದರು.
* ಗುರುತುಗಳು ಕೆಲವೊಂದು ಮುಖ್ಯಾಂಶಗಳನ್ನು ಹೇಳುತ್ತವೆ:
* ಬೆತ್ಲೆಹೇಮಿನಲ್ಲಿ ಯಾವ ಶಿಶುವು ಮೆಸ್ಸೀಯನಾಗಿ ಹುಟ್ಟಿದ್ದಾನೆಂದು ಕುರುಬರು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ದೂತನು ಒಂದು ಗುರುತನ್ನು ಹೇಳಿರುವುದನ್ನು ಲೂಕನ ಸುವಾರ್ತೆಯಲ್ಲಿ ವಿವರಿಸಲಾಗಿದೆ..
* ಧರ್ಮ ಸಂಬಂಧವಾದ ನಾಯಕರು ಬಂಧಿಸಬೇಕಾದ ಯೇಸು ಯಾರೆಂದು ತಿಳಿದುಕೊಳ್ಳುವುದಕ್ಕೆ ಒಂದು ಗುರುತಾಗಿ ಯೂದನು ಯೇಸುವಿಗೆ ಮುದ್ದಿಟ್ಟಿದ್ದನು.
* ಗುರುತುಗಳು ಕೆಲವೊಂದನ್ನು ನಿಜವೆಂದು ನಿರೂಪಿಸುತ್ತದೆ.
* ಐಗುಪ್ತವನ್ನು ನಾಶಪಡಿಸಲು ಬಂದಂತಹ ವ್ಯಾಧಿಗಳು ಯೆಹೋವನು ಯಾರೆಂದು ಗುರುತಿಸುತ್ತದೆ, ಮತ್ತು ಯೆಹೋವನು ಐಗುಪ್ತ ದೇವರಿಗಿಂತ ಹಾಗೂ ಫರೋಹನನಿಗಿಂತ ದೊಡ್ಡವನು ಎಂದು ವಿಮೋಚನಕಾಂಡ ಪುಸ್ತಕವು ನಿರೂಪಿಸುತ್ತದೆ.
* ಅಪೊಸ್ತಲರು ಮತ್ತು ಪ್ರವಾದಿಗಳಿಂದ ನಡೆದ ಅನೇಕ ಅದ್ಭುತ ಕಾರ್ಯಗಳು ಅವರು ದೇವರ ಸಂದೇಶವನ್ನು ಪ್ರಕಟಿಸುತ್ತಿದ್ದಾರೆಂದು ನಿರೂಪಿಸುವುದಕ್ಕೆ ಗುರುತುಗಳಾಗಿರುತ್ತವೆ.
* ಯೇಸು ಮಾಡಿದ ಅನೇಕ ಆಶ್ಚರ್ಯಗಳೆಲ್ಲವು ಈತನು ನಿಜವಾಗಿಯೂ ಮೆಸ್ಸೀಯನೆಂದು ನಿರೂಪಿಸುವ ಗುರುತುಗಳಾಗಿದ್ದವು.
## ಅನುವಾದ ಸಲಹೆಗಳು:
* ಸಂದರ್ಭಾನುಗುಣವಾಗಿ “ಗುರುತು” ಎನ್ನುವದನ್ನು “ಸಂಕೇತ” ಅಥವಾ “ಚಿಹ್ನೆ” ಅಥವಾ “ಕರೆ” ಅಥವಾ “ಆಧಾರ” ಅಥವಾ “ಪುರಾವೆ” ಅಥವಾ “ಸೂಚನೆ” ಎಂದೂ ಅನುವಾದ ಮಾಡಬಹುದು.
* “ಕೈಗಳಿಂದ ಸಂಕೇತಗಳನ್ನು ಮಾಡು” ಎನ್ನುವ ಮಾತನ್ನು “ಕೈಗಳನ್ನು ಅಲುಗಾಡಿಸು” ಅಥವಾ “ಕೈಗಳಿಂದ ಸೂಚನೆಗಳನ್ನು ಕೊಡು” ಅಥವಾ “ಸೂಚನೆಗಳನ್ನು ಕೊಡು” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಭಾಷೆಗಳಲ್ಲಿ ಯಾವುದಾದರೊಂದನ್ನು ನಿರೂಪಿಸುವ “ಗುರುತು” ಎನ್ನುವ ಪದಕ್ಕೆ ಒಂದೇ ಪದವನ್ನು ಹೊಂದಿರಬಹುದು, ಮತ್ತು ಆಶ್ಚರ್ಯಕಾರ್ಯವನ್ನು ಸೂಚಿಸುವ ಪದವು “ಸೂಚಕ ಕ್ರಿಯೆ” ಎನ್ನುವ ಮಾತನ್ನು ಬಳಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ಆಶ್ಚರ್ಯಕಾರ್ಯ](../kt/miracle.md), [ಅಪೊಸ್ತಲ](../kt/apostle.md), [ಕ್ರಿಸ್ತ](../kt/christ.md), [ಒಡಂಬಡಿಕೆ](../kt/covenant.md), [ಸುನ್ನತಿ](../kt/circumcise.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.02:18-19](rc://*/tn/help/act/02/18)
* [ವಿಮೋ.04:8-9](rc://*/tn/help/exo/04/08)
* [ವಿಮೋ.31:12-15](rc://*/tn/help/exo/31/12)
* [ಆದಿ.01:14-15](rc://*/tn/help/gen/01/14)
* [ಆದಿ.09:11-13](rc://*/tn/help/gen/09/11)
* [ಯೋಹಾನ.02:17-19](rc://*/tn/help/jhn/02/17)
* [ಲೂಕ.02:10-12](rc://*/tn/help/luk/02/10)
* [ಮಾರ್ಕ.08:11-13](rc://*/tn/help/mrk/08/11)
* [ಕೀರ್ತನೆ.089:5-6](rc://*/tn/help/psa/089/005)
## ಪದ ಡೇಟಾ:
* Strong's: H226, H852, H2368, H2858, H4150, H4159, H4864, H5251, H5824, H6161, H6725, H6734, H7560, G364, G880, G1213, G1229, G1718, G1730, G1732, G1770, G3902, G4102, G4591, G4592, G4953, G4973, G5280