kn_tw/bible/kt/setapart.md

32 lines
4.0 KiB
Markdown

# ಪ್ರತ್ಯೇಕಿಸು
## ಪದದ ಅರ್ಥವಿವರಣೆ:
“ಪ್ರತ್ಯೇಕಿಸು” ಎನ್ನುವ ಪದಕ್ಕೆ ಒಂದು ನಿರ್ದಿಷ್ಟವಾದ ಉದ್ದೇಶವನ್ನು ನೆರವೇರಿಸುವುದಕ್ಕೆ ಯಾವುದಾದರೊಂದರಿಂದ ಪ್ರತ್ಯೇಕಿಸುವುದು ಎಂದರ್ಥ. ಯಾವುದಾದರೊಂದನ್ನು ಅಥವಾ ಒಬ್ಬ ವ್ಯಕ್ತಿಯನ್ನು “ಪ್ರತ್ಯೇಕಿಸುವುದು” ಎಂದರೆ ಅವರನ್ನು ಅಥವಾ ಅದನ್ನು “ಪ್ರತ್ಯೇಕಿಸು” ಎಂದರ್ಥವಾಗಿರುತ್ತದೆ.
* ದೇವರನ್ನು ಸೇವಿಸುವುದಕ್ಕೆ ಇಸ್ರಾಯೇಲ್ಯರು ಪ್ರತ್ಯೇಕಿಸಲ್ಪಟ್ಟಿರುತ್ತಾರೆ.
* ದೇವರು ಬಯಸಿದ ಕೆಲಸವನ್ನು ಮಾಡುವುದಕ್ಕೆ ಪೌಲನನ್ನು ಮತ್ತು ಬರ್ನಾಬನನ್ನು ಪ್ರತ್ಯೇಕಿಸಬೇಕೆಂದು ಪವಿತ್ರಾತ್ಮನು ಅಂತಿಯೋಕ್ಯದಲ್ಲಿರುವ ಕ್ರೈಸ್ತರಿಗೆ ಆಜ್ಞಾಪಿಸಿದನು.
* ದೇವರ ಸೇವೆಗಾಗಿ “ಪ್ರತ್ಯೇಕಿಸಲ್ಪಟ್ಟ” ಒಬ್ಬ ವಿಶ್ವಾಸಿ ದೇವರ ಚಿತ್ತವನ್ನು ನೆರವೇರಿಸುವುದಕ್ಕೆ “ಪ್ರತಿಷ್ಠಾಪನೆ” ಮಾಡಿದ್ದಾನೆ ಎಂದರ್ಥ.
* “ಪರಿಶುದ್ಧ” ಎನ್ನುವದಕ್ಕೆ ಅನೇಕ ಅರ್ಥಗಳಲ್ಲಿ ಒಂದು ಅರ್ಥವು ಏನೆಂದರೆ ದೇವರಿಗೆ ಸಂಬಂಧಪಟ್ಟಿರುವಂತೆ ಪ್ರತ್ಯೇಕಿಸಲ್ಪಡುವುದು ಮತ್ತು ಲೋಕದ ಪಾಪ ಸ್ವಭಾವದ ಮಾರ್ಗಗಳಿಂದ ಪ್ರತ್ಯೇಕಿಸಲ್ಪಡುವುದು ಎಂದರ್ಥವಾಗಿರುತ್ತದೆ.
* ಯಾರಾದರೊಬ್ಬರನ್ನು “ಪವಿತ್ರೀಕರಿಸುವುದು” ಎಂದರೆ ಆ ವ್ಯಕ್ತಿಯನ್ನು ದೇವರ ಸೇವೆಗಾಗಿ ಪ್ರತ್ಯೇಕಿಸಲ್ಪಡುವುದು ಎಂದರ್ಥ.
## ಅನುವಾದ ಸಲಹೆಗಳು:
* “ಪ್ರತ್ಯೇಕಿಸು” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ವಿಶೇಷವಾಗಿ ಆಯ್ಕೆ ಮಾಡು” ಅಥವಾ “ನಿಮ್ಮ ಮಧ್ಯೆದೊಳಗಿಂದ ಪ್ರತ್ಯೇಕಿಸಿರಿ” ಅಥವಾ “ಒಂದು ವಿಶೇಷವಾದ ಕೆಲಸಕ್ಕಾಗಿ ಪಕ್ಕಕ್ಕೆ ಬರುವುದು” ಎನ್ನುವ ಪದಗಳು ಒಳಗೊಂಡಿರುತ್ತವೆ.
* “ಪ್ರತ್ಯೇಕಿಸಲ್ಪಡುವುದು” ಎನ್ನುವ ಮಾತಿಗೆ “ಯಾವುದಾದರೊಂದರಿಂದ ಪ್ರತ್ಯೇಕಿಸಲ್ಪಡುವುದು” ಅಥವಾ “ಒಂದು ವಿಶೇಷವಾದ ಕೆಲಸಕ್ಕೆ ವಿಶೇಷವಾಗಿ ಅಭಿಷೇಕ ಹೊಂದುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಪರಿಶುದ್ಧ](../kt/holy.md), [ಪವಿತ್ರೀಕರಿಸು](../kt/sanctify.md), [ನೇಮಿಸು](../kt/appoint.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಎಫೆಸ.03:17-19](rc://*/tn/help/eph/03/17)
* [ವಿಮೋ.31:12-15](rc://*/tn/help/exo/31/12)
* [ನ್ಯಾಯಾ.17:12-13](rc://*/tn/help/jdg/17/12)
* [ಅರಣ್ಯ.03:11-13](rc://*/tn/help/num/03/11)
* [ಫಿಲಿಪ್ಪಿ.01:1-2](rc://*/tn/help/php/01/01)
* [ರೋಮ.01:1-3](rc://*/tn/help/rom/01/01)
## ಪದ ಡೇಟಾ:
* Strong's: H2764, H4390, H5674, H6918, H6942, H6944, G37, G38, G40, G873