kn_tw/bible/kt/restore.md

34 lines
3.9 KiB
Markdown

# ಪುನಸ್ಥಾಪಿಸು, ಪುನಸ್ಥಾಪಿಸುವುದು, ಪುನಸ್ಥಾಪಿಸಲಾಗಿದೆ, ಪುನಸ್ಥಾಪನೆ
## ಪದದ ಅರ್ಥವಿವರಣೆ:
“ಪುನಸ್ಥಾಪಿಸು” ಮತ್ತು “ಪುನಸ್ಥಾಪನೆ” ಎನ್ನುವ ಪದಗಳು ಯಾವುದಾದರೊಂದನ್ನು ತನ್ನ ಪೂರ್ವ ಸ್ಥಿತಿಗೆ ಮತ್ತು ಉತ್ತಮ ಸ್ಥಿತಿಗೆ ತೆಗೆದುಕೊಂಡುಬರುವುದನ್ನು ಸೂಚಿಸುತ್ತದೆ.
* ರೋಗದಿಂದ ಇರುವ ಶರೀರ ಭಾಗವು ಪುನರ್ಸ್ಥಾಪನೆಗೊಂಡಾಗ, ಅದು “ಗುಣವಾಗಿದೆ” ಎಂದರ್ಥವಾಗಿರುತ್ತದೆ.
* ಮುರಿದು ಹೋಗಿರುವ ಸಂಬಂಧವು ತಿರುಗಿ ಕಟ್ಟಲ್ಪಟ್ಟರೆ ಅಥವಾ ಪುನಸ್ಥಾಪನೆಗೊಂಡರೆ ಅದನ್ನು “ಸಂಧಾನವಾಗಿದೆ” ಎಂದು ಕರೆಯುತ್ತಾರೆ. ದೇವರು ಪಾಪ ಸ್ವಭಾವವುಳ್ಳ ಜನರನ್ನು ಪುನರ್.ಸ್ಥಾಪನೆ ಮಾಡುವರು ಮತ್ತು ಆತನ ಬಳಿಗೆ ಅವರೆಲ್ಲರನ್ನು ಹಿಂದಕ್ಕೆ ಕರೆದುಕೊಂಡುಬರುವರು.
* ಜನರು ತಮ್ಮ ಸ್ವಂತ ದೇಶದಲ್ಲಿ ತಿರುಗಿ ಪುನರ್ ಸ್ಥಾಪನೆಗೊಂಡಾಗ, ಅವರು ಆ ದೇಶಕ್ಕೆ “ಹಿಂದುರಿಗಿ ಬಂದಿದ್ದಾರೆ” ಅಥವಾ “ಹಿಂದಕ್ಕೆ ಕರೆಯಲ್ಪಟ್ಟಿದ್ದಾರೆ”.
## ಅನುವಾದ ಸಲಹೆಗಳು:
* ಸಂದರ್ಭಾನುಗುಣವಾಗಿ, “ಪುನಸ್ಥಾಪಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ನವೀಕರಿಸು” ಅಥವಾ “ಮರುಪಾವತಿಸು” ಅಥವಾ “ಹಿಂದಿರುಗು” ಅಥವಾ “ಗುಣಪಡಿಸು” ಅಥವಾ “ಹಿಂದಕ್ಕೆ ಕರೆದುಕೊಂಡು ಬಾ” ಎನ್ನುವ ಮಾತುಗಳು ಒಳಗೊಂಡಿವೆ.
* ಈ ಪದಕ್ಕೆ ಬೇರೊಂದು ಮಾತುಗಳು “ಹೊಸದಾಗಿ ಮಾಡು” ಅಥವಾ “ತಿರುಗಿ ಹೊಸದಾಗಿ ಮಾಡು” ಎಂದಾಗಿರುತ್ತವೆ.
* ಆಸ್ತಿ “ಪುನರ್ ಸಂಗ್ರಹಿಸಿದಾಗ” ಅದನ್ನು “ಪರಿಷ್ಕರಿಸಲಾಗಿದೆ” ಅಥವಾ “ಪುನರ್ ಸ್ಥಾನಕ್ಕೆ ತರಲಾಗಿದೆ” ಅಥವಾ ತನ್ನ ಯಜಮಾನನಿಗೆ “ಹಿಂದಕ್ಕೆ ಕೊಡಲಾಗಿದೆ” ಎಂದು ಹೇಳಲಾಗುತ್ತದೆ.
* ಸಂದರ್ಭಾನುಗುಣವಾಗಿ, “ಪುನಸ್ಥಾಪನೆ” ಎನ್ನುವ ಪದವನ್ನು “ನವೀಕರಣ” ಅಥವಾ “ಸ್ವಸ್ಥತೆ” ಅಥವಾ “ಸಂಧಾನ” ಎಂದೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಅರಸ.05:8-10](rc://*/tn/help/2ki/05/08)
* [ಅಪೊ.ಕೃತ್ಯ.03:21-23](rc://*/tn/help/act/03/21)
* [ಅಪೊ.ಕೃತ್ಯ.15:15-18](rc://*/tn/help/act/15/15)
* [ಯೆಶಯಾ.49:5-6](rc://*/tn/help/isa/49/05)
* [ಯೆರೆ.15:19-21](rc://*/tn/help/jer/15/19)
* [ಪ್ರಲಾಪ.05:19-22](rc://*/tn/help/lam/05/19)
* [ಯಾಜಕ.06:5-7](rc://*/tn/help/lev/06/05)
* [ಲೂಕ.19:8-10](rc://*/tn/help/luk/19/08)
* [ಮತ್ತಾಯ.12:13-14](rc://*/tn/help/mat/12/13)
* [ಕೀರ್ತನೆ.080:1-3](rc://*/tn/help/psa/080/001)
## ಪದ ಡೇಟಾ:
* Strong's: H7725, H7999, H8421, G600, G2675