3.9 KiB
3.9 KiB
ಪುನಸ್ಥಾಪಿಸು, ಪುನಸ್ಥಾಪಿಸುವುದು, ಪುನಸ್ಥಾಪಿಸಲಾಗಿದೆ, ಪುನಸ್ಥಾಪನೆ
ಪದದ ಅರ್ಥವಿವರಣೆ:
“ಪುನಸ್ಥಾಪಿಸು” ಮತ್ತು “ಪುನಸ್ಥಾಪನೆ” ಎನ್ನುವ ಪದಗಳು ಯಾವುದಾದರೊಂದನ್ನು ತನ್ನ ಪೂರ್ವ ಸ್ಥಿತಿಗೆ ಮತ್ತು ಉತ್ತಮ ಸ್ಥಿತಿಗೆ ತೆಗೆದುಕೊಂಡುಬರುವುದನ್ನು ಸೂಚಿಸುತ್ತದೆ.
- ರೋಗದಿಂದ ಇರುವ ಶರೀರ ಭಾಗವು ಪುನರ್ಸ್ಥಾಪನೆಗೊಂಡಾಗ, ಅದು “ಗುಣವಾಗಿದೆ” ಎಂದರ್ಥವಾಗಿರುತ್ತದೆ.
- ಮುರಿದು ಹೋಗಿರುವ ಸಂಬಂಧವು ತಿರುಗಿ ಕಟ್ಟಲ್ಪಟ್ಟರೆ ಅಥವಾ ಪುನಸ್ಥಾಪನೆಗೊಂಡರೆ ಅದನ್ನು “ಸಂಧಾನವಾಗಿದೆ” ಎಂದು ಕರೆಯುತ್ತಾರೆ. ದೇವರು ಪಾಪ ಸ್ವಭಾವವುಳ್ಳ ಜನರನ್ನು ಪುನರ್.ಸ್ಥಾಪನೆ ಮಾಡುವರು ಮತ್ತು ಆತನ ಬಳಿಗೆ ಅವರೆಲ್ಲರನ್ನು ಹಿಂದಕ್ಕೆ ಕರೆದುಕೊಂಡುಬರುವರು.
- ಜನರು ತಮ್ಮ ಸ್ವಂತ ದೇಶದಲ್ಲಿ ತಿರುಗಿ ಪುನರ್ ಸ್ಥಾಪನೆಗೊಂಡಾಗ, ಅವರು ಆ ದೇಶಕ್ಕೆ “ಹಿಂದುರಿಗಿ ಬಂದಿದ್ದಾರೆ” ಅಥವಾ “ಹಿಂದಕ್ಕೆ ಕರೆಯಲ್ಪಟ್ಟಿದ್ದಾರೆ”.
ಅನುವಾದ ಸಲಹೆಗಳು:
- ಸಂದರ್ಭಾನುಗುಣವಾಗಿ, “ಪುನಸ್ಥಾಪಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ನವೀಕರಿಸು” ಅಥವಾ “ಮರುಪಾವತಿಸು” ಅಥವಾ “ಹಿಂದಿರುಗು” ಅಥವಾ “ಗುಣಪಡಿಸು” ಅಥವಾ “ಹಿಂದಕ್ಕೆ ಕರೆದುಕೊಂಡು ಬಾ” ಎನ್ನುವ ಮಾತುಗಳು ಒಳಗೊಂಡಿವೆ.
- ಈ ಪದಕ್ಕೆ ಬೇರೊಂದು ಮಾತುಗಳು “ಹೊಸದಾಗಿ ಮಾಡು” ಅಥವಾ “ತಿರುಗಿ ಹೊಸದಾಗಿ ಮಾಡು” ಎಂದಾಗಿರುತ್ತವೆ.
- ಆಸ್ತಿ “ಪುನರ್ ಸಂಗ್ರಹಿಸಿದಾಗ” ಅದನ್ನು “ಪರಿಷ್ಕರಿಸಲಾಗಿದೆ” ಅಥವಾ “ಪುನರ್ ಸ್ಥಾನಕ್ಕೆ ತರಲಾಗಿದೆ” ಅಥವಾ ತನ್ನ ಯಜಮಾನನಿಗೆ “ಹಿಂದಕ್ಕೆ ಕೊಡಲಾಗಿದೆ” ಎಂದು ಹೇಳಲಾಗುತ್ತದೆ.
- ಸಂದರ್ಭಾನುಗುಣವಾಗಿ, “ಪುನಸ್ಥಾಪನೆ” ಎನ್ನುವ ಪದವನ್ನು “ನವೀಕರಣ” ಅಥವಾ “ಸ್ವಸ್ಥತೆ” ಅಥವಾ “ಸಂಧಾನ” ಎಂದೂ ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
- 2 ಅರಸ.05:8-10
- ಅಪೊ.ಕೃತ್ಯ.03:21-23
- ಅಪೊ.ಕೃತ್ಯ.15:15-18
- ಯೆಶಯಾ.49:5-6
- ಯೆರೆ.15:19-21
- ಪ್ರಲಾಪ.05:19-22
- ಯಾಜಕ.06:5-7
- ಲೂಕ.19:8-10
- ಮತ್ತಾಯ.12:13-14
- ಕೀರ್ತನೆ.080:1-3
ಪದ ಡೇಟಾ:
- Strong's: H7725, H7999, H8421, G600, G2675