kn_tw/bible/kt/lordssupper.md

27 lines
3.1 KiB
Markdown

# ಕರ್ತನ ಭೋಜನ
## ಪದದ ಅರ್ಥವಿವರಣೆ:
“ಕರ್ತನ ಭೋಜನ” ಎನ್ನುವ ಮಾತು ಯೇಸು ಯೆಹೂದ್ಯರ ನಾಯಕರಿಂದ ಬಂಧಿಸಲ್ಪಟ್ಟ ರಾತ್ರಿಯಲ್ಲಿ ಆತನ ಶಿಷ್ಯರೊಂದಿಗೆ ಊಟ ಮಾಡಿದ ಪಸ್ಕ ಭೋಜನವನ್ನು ಸೂಚಿಸುವುದಕ್ಕೆ ಅಪೊಸ್ತಲನಾದ ಪೌಲನಿಂದ ಉಪಯೋಗಿಸಲ್ಪಟ್ಟಿರುವ ಪದವಾಗಿರುತ್ತದೆ.
* ಈ ಭೋಜನ ಸಂದರ್ಭದಲ್ಲಿ ಯೇಸು ರೊಟ್ಟಿಯನ್ನು ಮುರಿದು, ಇದನ್ನು ಆತನ ದೇಹವೆಂದು ಕರೆದನು, ಈ ದೇಹವು ಅತೀ ಶೀಘ್ರವಾಗಿ ಹೊಡಿಸಲ್ಪಡುವದು ಮತ್ತು ಕೊಲ್ಲಲ್ಪಡುವುದು ಎಂದು ಹೇಳಿದನು.
* ಆತನು ದ್ರಾಕ್ಷಾರಸದ ಬಟ್ಟಲನ್ನು ತೆಗೆದುಕೊಂಡು ಅದನ್ನು ಆತನ ರಕ್ತವೆಂದು ಹೇಳಿದನು, ಪಾಪಗಳ ಸರ್ವಾಂಗಹೋಮವಾಗಿ ಆತನು ಮರಣಿಸಿದಾಗ ಅದು ಸುರಿಸಲ್ಪಡುತ್ತದೆಯೆಂದು ಹೇಳಿದನು.
* ಯೇಸುವಿನ ಹಿಂಬಾಲಕರೆಲ್ಲರು ಸೇರಿ ಬರುವಾಗ ಈ ಭೋಜನವನ್ನು ಹಂಚಿಕೊಳ್ಳಬೇಕೆಂದು ಆತನು ಆಜ್ಞಾಪಿಸಿದನು, ಆವರು ತಪ್ಪದೇ ಆತನ ಮರಣ ಮತ್ತು ಪುನರುತ್ಹಾನಗಳನ್ನು ನೆನಪಿಸಿಕೊಳ್ಳಬೇಕು.
* ಆತನು ಕೊರಿಂಥದವರಿಗೆ ಬರೆದ ಪತ್ರಿಕೆಯಲ್ಲಿ ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವಿಶ್ವಾಸಿ ಕರ್ತನ ಭೋಜನವನ್ನು ಆಚರಣೆ ಮಾಡಬೇಕೆಂದು ಸ್ಥಾಪಿಸಿದ್ದನ್ನು ನಾವು ನೋಡಬಹುದು.
* ಕರ್ತನ ಭೋಜನವನ್ನು ಸೂಚಿಸುವುದಕ್ಕೆ ಈಗಿನ ಸಭೆಗಳಲ್ಲಿ “ಸಂಸ್ಕಾರ” ಎಂದು ಕರೆಯುತ್ತಾರೆ. “ಕರ್ತನ ಭೋಜನ” ಎನ್ನುವ ಮಾತು ಕೂಡ ಉಪಯೋಗಿಸಲ್ಪಟ್ಟಿದೆ.
## ಅನುವಾದ ಸಲಹೆಗಳು:
* ಈ ಪದವನ್ನು “ಕರ್ತನ ಮೇಜು” ಅಥವಾ “ನಮ್ಮ ಕರ್ತನಾದ ಯೇಸುವಿನ ಊಟ” ಅಥವಾ “ಕರ್ತನಾದ ಯೇಸುವಿನ ನೆನಪಿನಲ್ಲಿ ಊಟ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ: [ಪಸ್ಕ](../kt/passover.md))
## ಸತ್ಯವೇದದ ವಾಕ್ಯಗಳು:
* [1 ಕೊರಿಂಥ.11:20-22](rc://*/tn/help/1co/11/20)
* [1 ಕೊರಿಂಥ.11:25-26](rc://*/tn/help/1co/11/25)
## ಪದ ಡೇಟಾ:
* Strong's: G11730, G29600