3.1 KiB
3.1 KiB
ಕರ್ತನ ಭೋಜನ
ಪದದ ಅರ್ಥವಿವರಣೆ:
“ಕರ್ತನ ಭೋಜನ” ಎನ್ನುವ ಮಾತು ಯೇಸು ಯೆಹೂದ್ಯರ ನಾಯಕರಿಂದ ಬಂಧಿಸಲ್ಪಟ್ಟ ರಾತ್ರಿಯಲ್ಲಿ ಆತನ ಶಿಷ್ಯರೊಂದಿಗೆ ಊಟ ಮಾಡಿದ ಪಸ್ಕ ಭೋಜನವನ್ನು ಸೂಚಿಸುವುದಕ್ಕೆ ಅಪೊಸ್ತಲನಾದ ಪೌಲನಿಂದ ಉಪಯೋಗಿಸಲ್ಪಟ್ಟಿರುವ ಪದವಾಗಿರುತ್ತದೆ.
- ಈ ಭೋಜನ ಸಂದರ್ಭದಲ್ಲಿ ಯೇಸು ರೊಟ್ಟಿಯನ್ನು ಮುರಿದು, ಇದನ್ನು ಆತನ ದೇಹವೆಂದು ಕರೆದನು, ಈ ದೇಹವು ಅತೀ ಶೀಘ್ರವಾಗಿ ಹೊಡಿಸಲ್ಪಡುವದು ಮತ್ತು ಕೊಲ್ಲಲ್ಪಡುವುದು ಎಂದು ಹೇಳಿದನು.
- ಆತನು ದ್ರಾಕ್ಷಾರಸದ ಬಟ್ಟಲನ್ನು ತೆಗೆದುಕೊಂಡು ಅದನ್ನು ಆತನ ರಕ್ತವೆಂದು ಹೇಳಿದನು, ಪಾಪಗಳ ಸರ್ವಾಂಗಹೋಮವಾಗಿ ಆತನು ಮರಣಿಸಿದಾಗ ಅದು ಸುರಿಸಲ್ಪಡುತ್ತದೆಯೆಂದು ಹೇಳಿದನು.
- ಯೇಸುವಿನ ಹಿಂಬಾಲಕರೆಲ್ಲರು ಸೇರಿ ಬರುವಾಗ ಈ ಭೋಜನವನ್ನು ಹಂಚಿಕೊಳ್ಳಬೇಕೆಂದು ಆತನು ಆಜ್ಞಾಪಿಸಿದನು, ಆವರು ತಪ್ಪದೇ ಆತನ ಮರಣ ಮತ್ತು ಪುನರುತ್ಹಾನಗಳನ್ನು ನೆನಪಿಸಿಕೊಳ್ಳಬೇಕು.
- ಆತನು ಕೊರಿಂಥದವರಿಗೆ ಬರೆದ ಪತ್ರಿಕೆಯಲ್ಲಿ ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವಿಶ್ವಾಸಿ ಕರ್ತನ ಭೋಜನವನ್ನು ಆಚರಣೆ ಮಾಡಬೇಕೆಂದು ಸ್ಥಾಪಿಸಿದ್ದನ್ನು ನಾವು ನೋಡಬಹುದು.
- ಕರ್ತನ ಭೋಜನವನ್ನು ಸೂಚಿಸುವುದಕ್ಕೆ ಈಗಿನ ಸಭೆಗಳಲ್ಲಿ “ಸಂಸ್ಕಾರ” ಎಂದು ಕರೆಯುತ್ತಾರೆ. “ಕರ್ತನ ಭೋಜನ” ಎನ್ನುವ ಮಾತು ಕೂಡ ಉಪಯೋಗಿಸಲ್ಪಟ್ಟಿದೆ.
ಅನುವಾದ ಸಲಹೆಗಳು:
- ಈ ಪದವನ್ನು “ಕರ್ತನ ಮೇಜು” ಅಥವಾ “ನಮ್ಮ ಕರ್ತನಾದ ಯೇಸುವಿನ ಊಟ” ಅಥವಾ “ಕರ್ತನಾದ ಯೇಸುವಿನ ನೆನಪಿನಲ್ಲಿ ಊಟ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ: ಪಸ್ಕ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: G11730, G29600